ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಭೂಪಟದ ಸಾಂದರ್ಭಿಕ ಚಿತ್ರ
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಭೂಪಟದ ಸಾಂದರ್ಭಿಕ ಚಿತ್ರ

ಚೀನಾದಿಂದ ಮತ್ತೆ ವಕ್ರ ಬುದ್ಧಿ: 'ಸ್ಟ್ಯಾಂಡರ್ಡ್ ಮ್ಯಾಪ್'ನಲ್ಲಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಸೇರ್ಪಡೆ

ಕಳೆದ ವಾರವಷ್ಟೇ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ ಕೈಕುಲಿಕಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತೆ ತಮ್ಮ ವಕ್ರಬುದ್ಧಿ ತೋರಿಸಿದ್ದಾರೆ.
Published on

ಬೀಜಿಂಗ್: ಕಳೆದ ವಾರವಷ್ಟೇ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿ ಕೈಕುಲಿಕಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತೆ ತಮ್ಮ ವಕ್ರಬುದ್ಧಿ ತೋರಿಸಿದ್ದಾರೆ.

ತನ್ನ "ಸ್ಟ್ಯಾಂಡರ್ಡ್ ಮ್ಯಾಪ್" ನ 2023 ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿರುವ ಚೀನಾ ಸರ್ಕಾರ, ಅದರಲ್ಲಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ತನ್ನ ಭಾಗವೆಂದು ತೋರಿಸಿದೆ.

ನಿನ್ನೆ ಆಗಸ್ಟ್ 28 ರಂದು ಬಿಡುಗಡೆಯಾದ ನಕ್ಷೆಯು ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಳ್ಳುವ ಅರುಣಾಚಲ ಪ್ರದೇಶವನ್ನು ತೋರಿಸುತ್ತದೆ. 1962 ರ ಯುದ್ಧದಲ್ಲಿ ಅಕ್ಸಾಯ್ ಚಿನ್ ತನ್ನ ಭೂಪ್ರದೇಶದ ಭಾಗವಾಗಿ ಆಕ್ರಮಿಸಿಕೊಂಡಿದೆ. ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಸಹ ಹೊಸ ನಕ್ಷೆಯಲ್ಲಿ ಚೀನಾದ ಭೂಪ್ರದೇಶದಲ್ಲಿ ಸೇರಿಸಲಾಗಿದೆ.

ನಕ್ಷೆಯು ಒಂಬತ್ತು-ಡ್ಯಾಶ್ ರೇಖೆಯ ಮೇಲಿನ ಚೀನಾದ ಹಕ್ಕುಗಳನ್ನು ಸಹ ಸಂಯೋಜಿಸುತ್ತದೆ, ಹೀಗಾಗಿ ದಕ್ಷಿಣ ಚೀನಾ ಸಮುದ್ರದ ಹೆಚ್ಚಿನ ಭಾಗಕ್ಕೆ ಹಕ್ಕು ಸಾಧಿಸುತ್ತದೆ. ವಿಯೆಟ್ನಾಂ, ಫಿಲಿಪೈನ್ಸ್, ಮಲೇಷ್ಯಾ ಮತ್ತು ಬ್ರೂನೈ ದಕ್ಷಿಣ ಚೀನಾ ಸಮುದ್ರದ ಪ್ರದೇಶಗಳ ಮೇಲೆ ಹಕ್ಕುಗಳನ್ನು ಹೊಂದಿದೆ ಎಂದು ಹೇಳುತ್ತಿದೆ. 

ಚೀನಾದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ನಿನ್ನೆ ಝೆಜಿಯಾಂಗ್ ಪ್ರಾಂತ್ಯದ ಡೆಕ್ವಿಂಗ್ ಕೌಂಟಿಯಲ್ಲಿ ಸಮೀಕ್ಷೆ ಮತ್ತು ಮ್ಯಾಪಿಂಗ್ ಪ್ರಚಾರ ದಿನ ಮತ್ತು ರಾಷ್ಟ್ರೀಯ ಮ್ಯಾಪಿಂಗ್ ಜಾಗೃತಿ ಪ್ರಚಾರ ವಾರದ ಆಚರಣೆಯ ಸಂದರ್ಭದಲ್ಲಿ ನಕ್ಷೆಯನ್ನು ಬಿಡುಗಡೆ ಮಾಡಿದೆ ಎಂದು ಚೀನಾ ಡೈಲಿ ಪತ್ರಿಕೆ ತಿಳಿಸಿದೆ.

ಇತ್ತೀಚೆದೆ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಸಂವಾದದಲ್ಲಿ, ಭಾರತ-ಚೀನಾ ಗಡಿ ಪ್ರದೇಶಗಳ ಪಶ್ಚಿಮ ವಲಯದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಬಗೆಹರಿಯದ ಸಮಸ್ಯೆಗಳ ಬಗ್ಗೆ ಭಾರತದ ಕಳವಳಗಳನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದ್ದರು. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದು ಮತ್ತು ಭಾರತ-ಚೀನಾ ಸಂಬಂಧವನ್ನು ಸಾಮಾನ್ಯಗೊಳಿಸಲು LAC ನ್ನು ಗಮನಿಸುವುದು ಮತ್ತು ಗೌರವಿಸುವುದು ಅತ್ಯಗತ್ಯ ಎಂದು ಪ್ರಧಾನಿ ಒತ್ತಿ ಹೇಳಿದ್ದರು. 

ಈ ನಿಟ್ಟಿನಲ್ಲಿ, ಇಬ್ಬರು ನಾಯಕರು ತಮ್ಮ ಸಂಬಂಧಿತ ಅಧಿಕಾರಿಗಳಿಗೆ ತ್ವರಿತ ಪ್ರಯತ್ನಗಳನ್ನು ತೀವ್ರಗೊಳಿಸಲು ನಿರ್ದೇಶಿಸಲು ಒಪ್ಪಿಕೊಂಡಿದ್ದರು. ಆದರೆ ಬ್ರಿಕ್ಸ್ ಶೃಂಗಸಭೆ ನಂತರ ಈ ಬೆಳವಣಿಗೆ ನಡೆದಿದೆ. 

ಚೀನಾ ಈಗ ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ಕೆಲವು ಭಾಗಗಳ ಮೇಲೆ ಹಕ್ಕು ಸಾಧಿಸಿದೆ, ಈ ಸ್ಥಳಗಳು ದೊಡ್ಡ ಟಿಬೆಟ್‌ನ ಭಾಗವಾಗಿದೆ ಎಂದು ವಾದಿಸಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಪರ್ವತ ಶಿಖರಗಳು, ನದಿಗಳು ಮತ್ತು ವಸತಿ ಪ್ರದೇಶಗಳ ಹೆಸರುಗಳನ್ನು ಒಳಗೊಂಡಿರುವ 11 ಭಾರತೀಯ ಸ್ಥಳಗಳನ್ನು ಏಕಪಕ್ಷೀಯವಾಗಿ "ಮರುನಾಮಕರಣ" ಮಾಡಿತ್ತು. 

ಬೀಜಿಂಗ್ ಇಂತಹ ತಂತ್ರಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2017 ಮತ್ತು 2021 ರಲ್ಲಿ, ಚೀನಾದ ನಾಗರಿಕ ವ್ಯವಹಾರ ಸಚಿವಾಲಯವು ಇತರ ಭಾರತೀಯ ಸ್ಥಳಗಳನ್ನು ಮರುನಾಮಕರಣ ಮಾಡಿದ್ದು ಮತ್ತೊಂದು ರಾಜಕೀಯ ಮುಖಾಮುಖಿಯನ್ನು ಪ್ರಚೋದಿಸಿತ್ತು. 

ಈ ಹಿಂದೆ, ವಿದೇಶಾಂಗ ಸಚಿವಾಲಯದ (ಎಂಇಎ) ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, ಭಾರತದ ಅರುಣಾಚಲ ಪ್ರದೇಶಕ್ಕೆ ಸೇರಿದ ಸ್ಥಳಗಳಲ್ಲಿ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸುವ ಚೀನಾದ ಪ್ರಯತ್ನದ ಕುರಿತು ಪ್ರತಿಕ್ರಿಯಿಸುತ್ತಾ, “ಚೀನಾ ಈ ರೀತಿಯ ಪ್ರಯತ್ನ ಮಾಡುತ್ತಿರುವುದು ಇದೇ ಮೊದಲಲ್ಲ. (ಅರುಣಾಚಲ ಪ್ರದೇಶದಲ್ಲಿನ ಪ್ರದೇಶಗಳ ಹೆಸರನ್ನು ಬದಲಾಯಿಸುವುದು) ಮತ್ತು ಅಂತಹ ಯಾವುದೇ ಪ್ರಯತ್ನಗಳನ್ನು ನಾವು ಈಗಾಗಲೇ ಖಂಡಿಸಿದ್ದೇವೆ. ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ, ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಈ ರೀತಿಯ ಆವಿಷ್ಕಾರದ ಹೆಸರುಗಳನ್ನು ಹೇರುವುದರಿಂದ ವಾಸ್ತವ ಬದಲಾಗುವುದಿಲ್ಲ ಎಂದು ಹೇಳಿ ಖಂಡಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com