764 ಅಡಿ ಎತ್ತರದಿಂದ ಜಿಗಿತ: ಚೀನಾದಲ್ಲಿ ಅತಿ ಎತ್ತರದ ಬಂಜೀ ಜಂಪ್ ಮಾಡಿದ ವ್ಯಕ್ತಿ ಸಾವು!

ವಿಶ್ವದಲ್ಲೇ ಅತಿ ಎತ್ತರದ ಬಂಜೀ ಜಂಪ್ ನಿಂದ ಜಿಗಿದು ಚೀನಾದಲ್ಲಿ ಜಪಾನ್ ನ ಪ್ರವಾಸಿಗನೋರ್ವ ಸಾವನ್ನಪ್ಪಿದ್ದಾರೆ. 
ಮಕಾವು ಗೋಪುರದಲ್ಲಿ ಬಂಜಿ ಜಂಪ್  ಪ್ರದೇಶ
ಮಕಾವು ಗೋಪುರದಲ್ಲಿ ಬಂಜಿ ಜಂಪ್ ಪ್ರದೇಶ
Updated on

ಬೀಜಿಂಗ್: ವಿಶ್ವದಲ್ಲೇ ಅತಿ ಎತ್ತರದ ಬಂಜೀ ಜಂಪ್ ನಿಂದ ಜಿಗಿದು ಚೀನಾದಲ್ಲಿ ಜಪಾನ್ ನ ಪ್ರವಾಸಿಗನೋರ್ವ ಸಾವನ್ನಪ್ಪಿದ್ದಾರೆ. 

ಮಕಾವು ಗೋಪುರದಲ್ಲಿ 56 ವರ್ಷದ ವ್ಯಕ್ತಿ 764 ಎತ್ತರದ ಬಂಜಿ ಜಂಪ್ ಮಾಡಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಆ ಪ್ರವಾಸಿಗ ಪ್ರಜ್ಞಾಹೀನ ಸ್ಥಿತಿಗೆ ತಲುಪಿ ನಂತರ ಸಾವನ್ನಪ್ಪಿದ್ದಾರೆ.

ಬಂಜಿ ಜಂಪ್ ಮಾಡುತ್ತಿದ್ದಂತೆಯೇ ಆತನಿಗೆ ಉಸಿರಾಟದ ಸಮಸ್ಯೆ ಆರಂಭವಾಗಿದೆ. ತಕ್ಷಣವೇ ಆತನನ್ನು  ಎಸ್.ಜಾನುರಿಯೊ ಆಸ್ಪತ್ರೆಗೆ ಕರೆದೊಯ್ದರೂ ಅವರು ಆ ವೇಳೆಗೆ  ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಈ ಬಗ್ಗೆ ತನಿಖೆ ನಡೆಯುತ್ತಿದೆ.

ತಮ್ಮ ವೆಬ್‌ಸೈಟ್‌ನಲ್ಲಿ, ಮಕಾವು ಟವರ್‌ನಲ್ಲಿ ಬಂಜಿ ಜಂಪ್ ನಡೆಸುವ ಕಂಪನಿಯಾದ AJ ಹ್ಯಾಕೆಟ್‌ನ ಸ್ಕೈಪಾರ್ಕ್, ಗ್ರಾಹಕರು ತಮ್ಮ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವ ಮೊದಲು ಅವರು ಹೊಂದಿರುವ ಯಾವುದೇ ವೈದ್ಯಕೀಯ ಸಮಸ್ಯೆಗಳ ಬಗ್ಗೆ ತಿಳಿಸಲು ಗ್ರಾಹಕರಿಗೆ ಸಲಹೆ ನೀಡುತ್ತಾರೆ. ಹೃದಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಪೂರ್ವ ಶಸ್ತ್ರಚಿಕಿತ್ಸಾ ವಿಧಾನಗಳು ಅವುಗಳಲ್ಲಿ ಸೇರಿವೆ.

AJ ಹ್ಯಾಕೆಟ್ ಸ್ಕೈಪಾರ್ಕ್‌ನಲ್ಲಿ ಒಂದು ಸುತ್ತಿನ ಬಂಜಿ ಜಂಪ್ ಬೆಲೆ ಸುಮಾರು ₹ 25,000 ರೂಪಾಯಿಗಳಾಗಿದೆ. ಈ  ಕಂಪನಿ ಆಸ್ಟ್ರೇಲಿಯಾ, ಸಿಂಗಾಪುರ ಮತ್ತು ಫ್ರಾನ್ಸ್‌ನಲ್ಲಿಯೂ ಬಂಜಿ ಜಂಪ್‌ಗಳನ್ನು ನಿರ್ವಹಿಸುತ್ತದೆ. 2019 ರಲ್ಲಿ, ಪೋಲೆಂಡ್‌ನಲ್ಲಿ 330 ಅಡಿ ಬಂಜಿ ಜಂಪ್‌ನಲ್ಲಿ ವ್ಯಕ್ತಿಯೊಬ್ಬ ಬಿದ್ದು ಬೆನ್ನುಮೂಳೆ ಮುರಿದುಕೊಂಡು ತೀವ್ರವಾಗಿ ಗಾಯಗೊಂಡಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com