ಭಾರತದ ಪ್ರಧಾನಿ ಮೋದಿಯನ್ನು ಯಾರಿಂದಲೂ ಹೆದರಿಸಲು ಸಾಧ್ಯವಿಲ್ಲ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಭಾರತ ಮತ್ತು ಭಾರತೀಯರ ಹಿತಾಸಕ್ತಿಗೆ ಧಕ್ಕೆ ತರಬಲ್ಲ ಯಾವುದೇ ಕ್ರಮ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು (PM Narendra Modi) ಯಾರೂ ಹೆದರಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಹೇಳಿದ್ದಾರೆ.
ಮೋದಿ-ಪುಟಿನ್ (ಸಂಗ್ರಹ ಚಿತ್ರ)
ಮೋದಿ-ಪುಟಿನ್ (ಸಂಗ್ರಹ ಚಿತ್ರ)
Updated on

ಮಾಸ್ಕೋ: ಭಾರತ ಮತ್ತು ಭಾರತೀಯರ ಹಿತಾಸಕ್ತಿಗೆ ಧಕ್ಕೆ ತರಬಲ್ಲ ಯಾವುದೇ ಕ್ರಮ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು (PM Narendra Modi) ಯಾರೂ ಹೆದರಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಹೇಳಿದ್ದಾರೆ.

ಮಾಸ್ಕೋದಲ್ಲಿ ನಡೆದ ʼರಷ್ಯಾ ಕಾಲಿಂಗ್ʼ ಹೂಡಿಕೆ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಕುರಿತು ಮಾತನಾಡುತ್ತಾ, 'ಮೋದಿಯವರನ್ನು ಯಾರೂ ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ ನಿರ್ಧಾರ ತೆಗೆದುಕೊಳ್ಳುವಂತೆ ಬಲವಂತಪಡಿಸಬಹುದು, ಅಂಥ ಒತ್ತಡವನ್ನು ಅವರು ಅನುಭವಿಸಬಹುದು ಎಂದು ಊಹಿಸಲು ಸಾಧ್ಯವಿಲ್ಲ. ನಾನು ಸದಾ ಗಮನಿಸುತ್ತಿರುತ್ತೇನೆ, ಭಾರತೀಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಅವರ ಕಠಿಣ ನಿಲುವು ನನಗೆ ಆಶ್ಚರ್ಯಕರವಾಗಿದೆ. ಅವರು ಎಂದಿಗೂ ಬಾಹ್ಯ ಒತ್ತಡಗಳ ಬಗ್ಗೆ ತನ್ನೊಂದಿಗೆ ಮಾತನಾಡಿಯೇ ಇಲ್ಲ. ʼಸ್ನೇಹರಹಿತ ದೇಶಗಳʼ ಬಾಹ್ಯ ಒತ್ತಡದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ದೃಢವಾದ ನಾಯಕತ್ವ ಭಾರತಕ್ಕೆ ದೊರೆತಿದೆ ಎಂದು ಶ್ಲಾಘಿಸಿದ್ದಾರೆ.

ಅಂತೆಯೇ  ಭಾರತ- ರಷ್ಯಾ (India- Russia) ಬಾಂಧವ್ಯವು ಎಲ್ಲಾ ರಂಗಗಳಲ್ಲಿ ಪ್ರಗತಿಯಲ್ಲಿದೆ. ಉಭಯ ದೇಶಗಳ ನಡುವಿನ ಸಂಬಂಧಗಳು ಎಲ್ಲಾ ಪಥಗಳಲ್ಲಿ ಪ್ರಗತಿಪರವಾಗಿ ಅಭಿವೃದ್ಧಿ ಹೊಂದುತ್ತಿವೆ. ಇದರ ಮುಖ್ಯ ಭರವಸೆ ಪ್ರಧಾನಿ ಮೋದಿ ಅವರು ಅನುಸರಿಸುತ್ತಿರುವ ನೀತಿಯಾಗಿದೆ ಎಂದು ಪುಟಿನ್ ಹೇಳಿದ್ದಾರೆ. 

45 ಸೆಕೆಂಡ್‌ಗಳ ಈ ಸಂದರ್ಶನದ ವಿಡಿಯೋ ಟ್ವಿಟರ್ ನಲ್ಲಿ ಅಪ್ಲೋಡ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿದೆ. ಅಂದಹಾಗೆ ಎರಡು ದಿನಗಳ ʼಮಾಸ್ಕೋ ಕಾಲಿಂಗ್‌ʼ ಇವೆಂಟ್‌ನಲ್ಲಿ ಚೀನಾ, ಭಾರತ, ಟರ್ಕಿ, ಗಲ್ಫ್ ದೇಶಗಳು, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಏಷ್ಯಾದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com