ಟರ್ಕಿ-ಸಿರಿಯಾ ಭೂಕಂಪ: 17 ಗಂಟೆಗಳ ಕಾಲ ಅವಶೇಷದ ಕೆಳಗೆ ಸಿಲುಕಿದ ತಮ್ಮನನ್ನು ಕಾಪಾಡಿದ ಏಳು ವರ್ಷದ ಬಾಲಕಿ! ಮನಕಲಕುವ ವಿಡಿಯೋ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಅವಶೇಷಗಳ ಕೆಳಗೆ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ತಮ್ಮನ ತಲೆಯನ್ನು ರಕ್ಷಿಸುತ್ತಿರುವ ಪೋಟೋ  ಮನಸ್ಸು ಕರಗಿಸುವಂತಿದೆ.
ತಮ್ಮನನ್ನು ರಕ್ಷಿಸುತ್ತಿರುವ ಬಾಲಕಿ
ತಮ್ಮನನ್ನು ರಕ್ಷಿಸುತ್ತಿರುವ ಬಾಲಕಿ

ನವದೆಹಲಿ: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಅವಶೇಷಗಳ ಕೆಳಗೆ ಸಿಲುಕಿರುವ ಏಳು ವರ್ಷದ ಬಾಲಕಿ ತನ್ನ ಪುಟ್ಟ ತಮ್ಮನ ತಲೆಯನ್ನು ರಕ್ಷಿಸುತ್ತಿರುವ ಪೋಟೋ  ಮನಸ್ಸು ಕರಗಿಸುವಂತಿದೆ.

ಟ್ವಿಟರ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ವಿಶ್ವಸಂಸ್ಥೆ ಪ್ರತಿನಿಧಿ ಮೊಹಮದ್ ಸಫಾ, ಇಬ್ಬರೂ 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದು ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ. ಈ ಫೋಟೊ, ನೆಟ್ಟಿಗರ ಮನಸ್ಸನ್ನು ಕರಗಿಸಿದ್ದು ಸಂಕಟದ ಪರಿಸ್ಥಿತಿಯಲ್ಲೂ ಆಕೆಗಿರುವ ತಮ್ಮನ ಬಗೆಗಿನ ಕಾಳಜಿಗಾಗಿ ಆ ಬಾಲಕಿಯನ್ನು ಅನೇಕರು ಹೊಗಳಿದ್ದಾರೆ.

ಏಳು ವರ್ಷದ ಬಾಲಕಿ ತನ್ನ ಕಿರಿಯ ಸಹೋದರನ ತಲೆಯನ್ನು ಮುಚ್ಚಿ ಇಟ್ಟುಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದು. ಇಲ್ಲಿ ಇಬ್ಬರೂ ಮಕ್ಕಳು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿರುವ ಈ ಮಕ್ಕಳು ರಕ್ಷಣಾ ತಂಡದ ಗಮನಕ್ಕೆ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com