ಟರ್ಕಿ-ಸಿರಿಯಾದಲ್ಲಿ ಭೀಕರ ಭೂಕಂಪ: ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಬದುಕುಳಿದವರನ್ನು ಹುಡುಕಲು ರಕ್ಷಣಾ ಕಾರ್ಯಕರ್ತರು ಅಂತಿಮ ಹಂತದ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಅವಶೇಷಗಳಡಿ ಸಿಲುಕಿರುವ ಅನೇಕರ ಗುರುತು ಕೂಡ ಸಿಗದಂತಹ ಪರಿಸ್ಥಿತಿ ಉಂಟಾಗಿದೆ.
ದಕ್ಷಿಣ ಟರ್ಕಿಯ ಸ್ಯಾನ್ಲಿಯುರ್ಫಾದಲ್ಲಿ ಕುಸಿದ ಕಟ್ಟಡದ ಅವಶೇಷಗಳಿಂದ ರಕ್ಷಿಸಿದ ಯುವತಿಯನ್ನು ರಕ್ಷಣಾ ಕಾರ್ಯಕರ್ತರು ಮತ್ತು ವೈದ್ಯರು ಒಯ್ಯುತ್ತಿದ್ದಾರೆ
ದಕ್ಷಿಣ ಟರ್ಕಿಯ ಸ್ಯಾನ್ಲಿಯುರ್ಫಾದಲ್ಲಿ ಕುಸಿದ ಕಟ್ಟಡದ ಅವಶೇಷಗಳಿಂದ ರಕ್ಷಿಸಿದ ಯುವತಿಯನ್ನು ರಕ್ಷಣಾ ಕಾರ್ಯಕರ್ತರು ಮತ್ತು ವೈದ್ಯರು ಒಯ್ಯುತ್ತಿದ್ದಾರೆ

ಕಹ್ರಾಮನ್ಮರಸ್: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಬದುಕುಳಿದವರನ್ನು ಹುಡುಕಲು ರಕ್ಷಣಾ ಕಾರ್ಯಕರ್ತರು ಅಂತಿಮ ಹಂತದ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಅವಶೇಷಗಳಡಿ ಸಿಲುಕಿರುವ ಅನೇಕರ ಗುರುತು ಕೂಡ ಸಿಗದಂತಹ ಪರಿಸ್ಥಿತಿ ಉಂಟಾಗಿದೆ. ಟರ್ಕಿಯ ಅಧ್ಯಕ್ಷರು ಇದನ್ನು "ಶತಮಾನದ ದುರಂತ" ಎಂದು ಕರೆದಿದ್ದು ಎರಡೂ ದೇಶಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದೆ. 

ಭೂಕಂಪದಿಂದ ಟರ್ಕಿಯಲ್ಲಿ ಸುಮಾರು 13.5 ಮಿಲಿಯನ್ ಜನರ ಬದುಕಿಗೆ ತೊಂದರೆಯಾಗಿದೆ. ಸಿರಿಯಾದಲ್ಲಿ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂದು ನಿಖರವಾಗಿ ತಿಳಿದುಬಂದಿಲ್ಲ. ಲಂಡನ್‌ನಿಂದ ಪ್ಯಾರಿಸ್ ಅಥವಾ ಬೋಸ್ಟನ್‌ನಿಂದ ಫಿಲಡೆಲ್ಫಿಯಾವರೆಗಿನ ಭೂಕಂಪನದ ತೀವ್ರತೆ, ಪರಿಣಾಮ ಬೀರಿದೆ. ರಕ್ಷಣಾ ಪ್ರಯತ್ನದಲ್ಲಿ ಸೈನಿಕರು ಭಾಗಿಯಾಗಿದ್ದರೂ ಕೂಡ ಸಾಕಾಗುತ್ತಿಲ್ಲ. 

ಎಲ್ಲೆಡೆ ಅವಶೇಷಗಳು, ಕಟ್ಟಡಗಳ ಅವಶೇಷಗಳು, ಲೋಹ, ಪುಡಿಮಾಡಿದ ಕಾಂಕ್ರೀಟ್ ಮತ್ತು ತಂತಿಗಳು ಕಂಡುಬರುತ್ತಿವೆ. ಅಡಿಯಾಮಾನ್‌ನಲ್ಲಿ, ಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದವರು ತಮ್ಮನ್ನು ಕಾಪಾಡುವಂತೆ ಬೇಡಿಕೊಳ್ಳುತ್ತಿರುವುದು ಮನಕಲಕುವಂತೆ ಮಾಡಿದೆ. 

ಬದುಕುಳಿದವರಲ್ಲಿ ಒಬ್ಬಾತ, ನಾನು ಮನೆಗೆ ಹೋಗಿ ಮಲಗುವುದು ಹೇಗೆ, ನನ್ನ ಸಹೋದರ ಇದ್ದಾನೆ, ಅವನು ಇನ್ನೂ ಜೀವಂತವಾಗಿರಬಹುದು ಎಂದು ನಂಬಿದ್ದೇನೆ, ಆತ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎನ್ನುತ್ತಾರೆ. ಸೋಮವಾರದ 7.8 ತೀವ್ರತೆಯ ದುರಂತದ ಸಾವಿನ ಸಂಖ್ಯೆ ಸುಮಾರು 21,000 ಕ್ಕೆ ಏರಿತು, 2011 ರಲ್ಲಿ ಜಪಾನ್‌ನ ಫುಕುಶಿಮಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 18,400 ಕ್ಕೂ ಹೆಚ್ಚಾಗಿದ್ದವು. ಇದು ಸುನಾಮಿಗಿಂತಲೂ ತೀವ್ರವಾಗಿದೆ. ಟರ್ಕಿಯ ರಾಜಧಾನಿ ಇಸ್ತಾನ್ ಬಳಿ ಸುಮಾರು 18,000 ಜನರು 1999ರಲ್ಲಿ ಮೃತಪಟ್ಟಿದ್ದರು. 

ಇತ್ತೀಚಿನ ವರದಿಯಂತೆ ಟರ್ಕಿಯಲ್ಲಿ 17,600 ಕ್ಕೂ ಹೆಚ್ಚು ಜನರು ಮತ್ತು ಅಂತರ್ಯುದ್ಧ ಪೀಡಿತ ಸಿರಿಯಾದಲ್ಲಿ 3,300 ಕ್ಕೂ ಹೆಚ್ಚು ಜನರು ಮೃತಪಟ್ಟು ಸಾವಿರಾರು ಮಂದಿ ಕೂಡ ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com