ಕೀವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಆಪ್ತರಿಂದಲೇ ಹತ್ಯೆಗೀಡಾಗುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅವರ ಸ್ವಂತ ಜನರೇ ಹತ್ಯೆ ಮಾಡುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ಪುಟಿನ್ ಒಂದು ದಿನ ತನ್ನದೇ ಜನರಿಂದ ಕೊಲ್ಲಲ್ಪಡುತ್ತಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ನ್ಯೂಸ್‌ವೀಕ್‌ನಲ್ಲಿ ಈ ಬಗ್ಗೆ ವರದಿ ಮಾಡಲಾಗಿದ್ದು, ಝೆಲೆನ್ಸ್ಕಿ ಅವರ ಹೇಳಿಕೆ 'ಇಯರ್' ಶೀರ್ಷಿಕೆಯ ಉಕ್ರೇನಿಯನ್ ಸಾಕ್ಷ್ಯಚಿತ್ರದ ಭಾಗವಾಗಿದೆ ಎಂದು ಹೇಳಲಾಗಿದೆ. ಇದು ರಷ್ಯಾ-ಉಕ್ರೇನ್ ಯುದ್ಧವನ್ನು ಆಧರಿಸಿದ ಸಾಕ್ಷ್ಯಚಿತ್ರವಾಗಿದ್ದು, ಇದೇ ಶುಕ್ರವಾರ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಸಾಕ್ಷ್ಯಚಿತ್ರದಲ್ಲಿ, ಝೆಲೆನ್ಸ್ಕಿ ರಷ್ಯಾದ ಅಧ್ಯಕ್ಷರ ನಾಯಕತ್ವವು "ದುರ್ಬಲತೆಯ" ಅವಧಿಯನ್ನು ತರುತ್ತದೆ ಎಂದು ಹೇಳಿದ್ದು, ಅಲ್ಲಿ ಅವರ ಹತ್ತಿರದ ಮಿತ್ರರು ಮಾತ್ರ ಅವರ ವಿರುದ್ಧವೇ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ.
"ರಷ್ಯಾದೊಳಗೆ ಪುಟಿನ್ ಆಡಳಿತದ ಕ್ರೂರತೆಯನ್ನು ಅನುಭವಿಸುವ ಒಂದು ಕ್ಷಣ ಖಂಡಿತವಾಗಿಯೂ ಬರುತ್ತದೆ ಮತ್ತು ನಂತರ ಬೇಟೆಗಾರರು ತಮ್ಮ ಬೇಟೆಗಾರರಲ್ಲಿ ಒಬ್ಬರನ್ನು ತಿನ್ನುತ್ತಾರೆ. ಅವರು ಕೊಲೆಗಾರನನ್ನು ಕೊಲ್ಲಲು ಕಾರಣವನ್ನು ಕಂಡುಕೊಳ್ಳುತ್ತಾರೆ.. ಎಂಬ ಕೊಮರೊವ್ ಹೇಳಿದ ಮಾತುಗಳನ್ನು ಝೆಲೆನ್ಸ್ಕಿ ನೆನಪಿಸಿಕೊಂಡಿದ್ದಾರೆ.. ಅವರು ಕೊಲೆಗಾರನನ್ನು ಕೊಲ್ಲಲು ಕಾರಣವನ್ನು ಕಂಡುಕೊಳ್ಳುತ್ತಾರೆ, ಅದು ಕೆಲಸ ಮಾಡುತ್ತದೆಯೇ? ಹೌದು ಅದು ಕೆಲಸ ಮಾಡುತ್ತದೆ ಆದರೆ ಯಾವಾಗ? ನನಗೆ ಗೊತ್ತಿಲ್ಲ. ಪುಟಿನ್ ಹತ್ತಿರ ಇರುವವರು ಮಾತ್ರ ಅವರ ಮೇಲೆ ಕೋಪಗೊಂಡಿದ್ದಾರೆ.. ಅವರೇ ಪುಟಿನ್ ರನ್ನು ಮುಗಿಸುತ್ತಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಕ್ರಿಮಿಯನ್ ಪರ್ಯಾಯ ದ್ವೀಪದ ಉಕ್ರೇನಿಯನ್ ನಿಯಂತ್ರಣಕ್ಕೆ ಮರಳುವುದು ಯುದ್ಧದ ಅಂತ್ಯದ ಭಾಗವಾಗಿದೆ ಎಂದು ಝೆಲೆನ್ಸ್ಕಿ ಭಾನುವಾರ ಹೇಳಿದ್ದಾರೆ. "ಇದು ನಮ್ಮ ಭೂಮಿ, ನಮ್ಮ ಜನರು ಮತ್ತು ನಮ್ಮ ಇತಿಹಾಸ, ನಾವು ಉಕ್ರೇನಿಯನ್ ಧ್ವಜವನ್ನು ಉಕ್ರೇನ್‌ನ ಮೂಲೆ ಮೂಲೆಗೆ ಹಿಂತಿರುಗಿಸುತ್ತೇವೆ" ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗಷ್ಟೇ ಇದೇ ವಿಚಾರವಾಗಿ ವರದಿ ಮಾಡಿದ್ದ ವಾಷಿಂಗ್ಟನ್ ಪೋಸ್ಟ್ ರಷ್ಯಾದ ಅಧ್ಯಕ್ಷರ ನಿಕಟ ಮಿತ್ರರು ಅವರೊಂದಿಗೆ ಹೆಚ್ಚು ಹತಾಶೆಗೊಂಡಿದ್ದಾರೆ.. ಯುದ್ಧಭೂಮಿ ವೀಡಿಯೊಗಳು ಅವರ ಸೈನಿಕರು ದೂರು ಮತ್ತು ಯುದ್ಧ ಮಾಡಲಾಗದ ಸ್ಥಿತಿಯಲ್ಲಿ ಅಳುವುದನ್ನು ತೋರಿಸುತ್ತಿವೆ ಎಂದು ಹೇಳಿದೆ. ಆದಾಗ್ಯೂ, ಅನೇಕ ಉನ್ನತ ಅಧಿಕಾರಿಗಳು ಪುಟಿನ್ ಅವರಿಗೆ ಅಧೀನರಾಗಿರುವುದರಿಂದ ಅಂತಹ ಸನ್ನಿವೇಶವು ತೆರೆದುಕೊಳ್ಳುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದೆ.
Advertisement