ಕಾಬೂಲ್ ಮಿಲಿಟರಿ ವಿಮಾನ ನಿಲ್ದಾಣ ಬಳಿ ಭಾರಿ ಸ್ಫೋಟ; ಕನಿಷ್ಠ 10 ಮಂದಿ ಸಾವು, 8ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಬೂಲ್ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 8ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ಕಾಬೂಲ್ ಮಿಲಿಟರಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 8ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಕುರಿತು ತಾಲಿಬಾನ್ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫೀ ಟಕ್ಕೂರ್ ಮಾಹಿತಿ ನೀಡಿದ್ದು, ಕಾಬೂಲ್‌ನ ಮಿಲಿಟರಿ ವಿಮಾನ ನಿಲ್ದಾಣದ ಮುಖ್ಯ ಗೇಟ್‌ಗೆ ಸಮೀಪದಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.  ಉತ್ತರ ತಖಾರ್ ಪ್ರಾಂತ್ಯದ ರಾಜಧಾನಿ ತಾಲೂಕನ್ ನಗರದಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ನಾಲ್ಕು ಜನರು ಗಾಯಗೊಂಡ ಮೂರು ದಿನಗಳ ನಂತರ ಈ ಸ್ಫೋಟ ಸಂಭವಿಸಿದೆ.

ತಾಲಿಬಾನ್ ಭದ್ರತಾ ಕಮಾಂಡರ್ ಅಬ್ದುಲ್ ಮುಬಿನ್ ಸಫಿ ಸ್ಫೋಟವನ್ನು ದೃಢಪಡಿಸಿದ್ದು, ಸ್ಥಳೀಯ ಆಡಳಿತ ಸಿಬ್ಬಂದಿಯ ಮೇಜಿನ ಕೆಳಗೆ ಬಾಂಬ್ ಇರಿಸಿ ಸ್ಫೋಟಿಸಲಾಗಿದೆ. ಈ ಘಟನೆಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 8ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ವಹಿಸಿಕೊಂಡಿಲ್ಲ.

ಕಳೆದ ಕೆಲವು ತಿಂಗಳುಗಳಲ್ಲಿ, ಯುದ್ಧ-ಹಾನಿಗೊಳಗಾದ ಕೌಂಟಿಯು ಸ್ಫೋಟಗಳು ಸೇರಿದಂತೆ ಹೆಚ್ಚುತ್ತಿರುವ ಭದ್ರತಾ ಘಟನೆಗಳಿಗೆ ಸಾಕ್ಷಿಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com