ಲಾಹೋರ್‌ನಲ್ಲಿ ಡ್ರಗ್ಸ್‌ಗಾಗಿ ಶಾಲಾ ಬಾಲಕಿಯ ಮೇಲೆ ನಾಲ್ವರು ವಿದ್ಯಾರ್ಥಿನಿಯರಿಂದ ಮೃಗೀಯ ವರ್ತನೆ: ವಿಡಿಯೋ ವೈರಲ್

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ ನಲ್ಲಿ ನಾಲ್ವರು ವಿದ್ಯಾರ್ಥಿನಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಿರುಕುಳದ ದೃಶ್ಯ
ಕಿರುಕುಳದ ದೃಶ್ಯ

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ ನಲ್ಲಿ ನಾಲ್ವರು ವಿದ್ಯಾರ್ಥಿನಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ನಾಲ್ಕು ವಿದ್ಯಾರ್ಥಿನಿಯರು ಲಾಹೋರ್‌ನ ಅಮೆರಿಕನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 'ಡ್ರಗ್ಸ್'ಗಾಗಿ ಸಹ ವಿದ್ಯಾರ್ಥಿಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜನವರಿ 16ರಂದು ಲಾಹೋರ್‌ನ ಡಿಫೆನ್ಸ್ ಹೌಸಿಂಗ್ ಅಥಾರಿಟಿ(DHA) ನಲ್ಲಿರುವ ಅಮೇರಿಕನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ವಿದ್ಯಾರ್ಥಿಗೆ ಶಾಲೆಯಲ್ಲಿ ಆಕೆಯ ಸಹಪಾಠಿಗಳು ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಲ್ವರು ಬಾಲಕಿಯರು ಸಂತ್ರಸ್ತೆಯ ತಲೆಗೂದಲನ್ನು ಹಿಡಿದು ನೆಲಕ್ಕೆ ಚಚ್ಚುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಇಷ್ಟೇ ಅಲ್ಲ, ನಾಲ್ವರು ಹುಡುಗಿಯರು ಸಂತ್ರಸ್ತೆಗೆ ತೀವ್ರವಾಗಿ ನಿಂದಿಸಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ಇಮ್ರಾನ್ ಯೂನಿಸ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ನಾಲ್ವರು ಬಾಲಕಿಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಎಫ್‌ಐಆರ್ ಪ್ರಕಾರ, ಸಂತ್ರಸ್ತ ವಿದ್ಯಾರ್ಥಿಯು ಶಾಲೆಯ ಕ್ಯಾಂಪಸ್‌ನಲ್ಲಿ ತರಗತಿಯ ಸಹಪಾಠಿಗಳು ಮಾದಕ ದ್ರವ್ಯ ಸೇವಿಸುತ್ತಿರುವ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ.

ಸಂತ್ರಸ್ತೆಯ ತಂದೆ ಎಫ್‌ಐಆರ್‌ನಲ್ಲಿ, "ನಾಲ್ವರು ಹುಡುಗಿಯರಲ್ಲಿ ಒಬ್ಬಳು ಬಾಕ್ಸರ್ ಆಗಿದ್ದು ಆಕೆ ಸಂತ್ರಸ್ತೆಯ ಮುಖಕ್ಕೆ ಗುದ್ದಿದ್ದಾಳೆ. ಇನ್ನೊಬ್ಬಳು ಕಾಲಿನಿಂದ ಒದೆದಿದ್ದಾಳೆ. ಇದರಿಂದ ಸಂತ್ರಸ್ತೆಯ ಮುಖದ ಮೇಲೆ ಗಾಯಗಳಾಗಿವೆ. ಇನ್ನೊಬ್ಬ ಹುಡುಗಿ ಅವಳನ್ನು ಕತ್ತು ಹಿಸುಕಲು ಪ್ರಯತ್ನಿಸಿದಳು ಎಂದು ದೂರಿದ್ದಾರೆ. ಇನ್ನು ವೀಡಿಯೋ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಜಧಾನಿ ನಗರ ಪೊಲೀಸ್ ಲಾಹೋರ್ ಮತ್ತು ಪಂಜಾಬ್ ಪೊಲೀಸರು ಘಟನೆಯ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಲಾಹೋರ್‌ನ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ಬಳಕೆ ಹೆಚ್ಚುತ್ತಿದೆ. ಮಾದಕ ದ್ರವ್ಯ ನಿಯಂತ್ರಣ ಕಾರ್ಯಕ್ರಮದ ಕುರಿತು ಮುಖ್ಯಮಂತ್ರಿಗಳ ಸಲಹೆಗಾರ ಜುಲ್ಫಿಕರ್ ಶಾ ಅವರ ಪ್ರಕಾರ, ಲಾಹೋರ್‌ನ ಖಾಸಗಿ ಸಭೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ದ್ರವ್ಯ ಸೇವನೆಯು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ವರ್ಷ, ಲಾಹೋರ್ ಪೊಲೀಸರು ನಗರದಲ್ಲಿ 9,000 ಕ್ಕೂ ಹೆಚ್ಚು ಡ್ರಗ್ ಡೀಲರ್‌ಗಳು ಮತ್ತು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು. ಅಂತೆಯೇ, ಶಂಕಿತರಿಂದ 4,590 ಕೆಜಿ ಹಶಿಶ್, 60 ಕೆಜಿ ಹೆರಾಯಿನ್ ಮತ್ತು 20 ಕೆಜಿ ಐಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com