ವಾಷಿಂಗ್ಟನ್: ಅಮೆರಿಕದ ಸೌತ್ ಲೇಕ್ ಯೂನಿಯನ್‌ನಲ್ಲಿ ಸಿಯಾಟಲ್ ಪೊಲೀಸ್ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದು 23 ವರ್ಷದ ಭಾರತೀಯ ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಸಿಯಾಟಲ್ ಪೊಲೀಸ್ ಇಲಾಖೆ ತಿಳಿಸಿದೆ.
ಸೋಮವಾರ ರಾತ್ರಿ ಪೊಲೀಸ್ ಗಸ್ತು ವಾಹನ ಡಿಕ್ಕಿ ಹೊಡೆದ ನಂತರ ಗಂಭೀರ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಹಾರ್ಬರ್‌ವ್ಯೂ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಾನ್ವಿ ಕಂದುಲಾ ಮೃತಪಟ್ಟಿದ್ದಾರೆ ಎಂದು ದಿ ಸಿಯಾಟಲ್ ಟೈಮ್ಸ್ ವರದಿ ಮಾಡಿದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯವರಾದ ಜಾನ್ವಿ ಕಂದುಲಾ ಸೌತ್ ಲೇಕ್ ಯೂನಿಯನ್‌ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯಾಗಿದ್ದು ಇದೇ ಡಿಸೆಂಬರ್‌ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಲಿದ್ದರು.
ದಕ್ಷಿಣ ಲೇಕ್ ಯೂನಿಯನ್‌ನ ಡೆಕ್ಸ್ಟರ್ ಅವೆನ್ಯೂ ನಾರ್ತ್ ಮತ್ತು ಥಾಮಸ್ ಸ್ಟ್ರೀಟ್‌ನ ಬಳಿ ಸಿಯಾಟಲ್ ಗಸ್ತು ವಾಹನ ಪಾದಚಾರಿಗಳ ಮೇಲೆ ಹರಿದಿತ್ತು. ಈ ವೇಳೆ ಜಾನ್ವಿ ಕುಂದುಲಾ ಅವರಿಗೆ ಮಾರಣಾಂತಿಕ ಗಾಯಗಳಾಗಿತ್ತು. ಸಿಯಾಟಲ್ ಪೊಲೀಸ್ ಇಲಾಖೆಯ ಟ್ರಾಫಿಕ್ ಡಿಕ್ಕಿ ತನಿಖಾ ದಳವು ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ.
Advertisement