ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ, ಕ್ರೈಸ್ತರ ಮನೆಗಳು ಧ್ವಂಸ
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಕಳೆದ 70 ವರ್ಷಗಳಿಂದ ವಾಸಿಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯ, ಹಿಂದೂ ಮತ್ತು ಕ್ರಿಶ್ಚಿಯನ್ ಕುಟುಂಬದ ಮನೆಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
Published: 30th January 2023 08:46 AM | Last Updated: 30th January 2023 07:14 PM | A+A A-

ಸಾಂದರ್ಭಿಕ ಚಿತ್ರ
ರಾವಲ್ಪಿಂಡಿ: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಕಳೆದ 70 ವರ್ಷಗಳಿಂದ ವಾಸಿಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯ, ಹಿಂದೂ ಮತ್ತು ಕ್ರಿಶ್ಚಿಯನ್ ಕುಟುಂಬದ ಮನೆಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಜನವರಿ 27 ರಂದು ಕಂಟೋನ್ಮೆಂಟ್ ಪ್ರದೇಶದಲ್ಲಿ ಹಿಂದೂ ಕುಟುಂಬ, ಕ್ರಿಶ್ಚಿಯನ್ ಕುಟುಂಬ ಮತ್ತು ಶಿಯಾಗಳಿಗೆ ಸೇರಿದ ಕನಿಷ್ಠ ಐದು ಮನೆಗಳನ್ನು ನೆಲಸಮ ಮಾಡಲಾಗಿದ್ದು, ಸಾಮಾನು, ಸರಂಜಾಮುಗಳನ್ನು ಅಕ್ಕಪಕ್ಕದ ಬೀದಿಗಳಲ್ಲಿ ಎಸೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಮೀಪದ ದೇವಾಲಯವೊಂದರಲ್ಲಿ ಆಶ್ರಯ ಪಡೆಯುವಂತೆ ಹಿಂದೂ ಕುಟುಂಬಕ್ಕೆ ಒತ್ತಾಯಿಸಲಾಗಿದೆ. ಆದರೆ ಕ್ರಿಶ್ಚಿಯನ್ ಕುಟುಂಬ ಮತ್ತು ಶಿಯಾಗಳು ಯಾವುದೇ ಆಶ್ರಯವಿಲ್ಲದೆ ಬದುಕುವಂತೆ ಪೀಡಿಸಲಾಗಿದೆ. ಸಂತ್ರಸ್ತ ಕುಟುಂಬಗಳು ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅಧಿಕಾರಿಗಳು ಬಲಪ್ರಯೋಗಿಸಿ ಮನೆ ಧ್ವಂಸಗೊಳಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಇದನ್ನೂ ಓದಿ: ಮೆಲ್ಬರ್ನ್: ರಾಷ್ಟ್ರಧ್ವಜ ಹಿಡಿದಿದ್ದ ಭಾರತೀಯರ ಮೇಲೆ ಖಲಿಸ್ತಾನಿಗಳ ದಾಳಿ, ಐವರಿಗೆ ಗಾಯ
ನೂರಾರು ಮಂದಿ ಬಂದು ಕಿರುಕುಳ ನೀಡಿದ್ದಾರೆ. ಅವರನ್ನು ಎದುರಿಸಲು ಪ್ರಯತ್ನಿಸಿದಾಗ ನಮ್ಮ ಮೇಲೆ ಹಲ್ಲೆ ನಡೆಸಿದರು. ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಹಿಂದೂ ಸಂತ್ರಸ್ತರು ತಿಳಿಸಿದ್ದಾರೆ.
ಕಳೆದ 70 ವರ್ಷಗಳಿಂದಲೂ ಇಲ್ಲಿಯೇ ವಾಸಿಸುತ್ತಿರುವುದಕ್ಕೆ ದಾಖಲೆ ಎಲ್ಲವೂ ಇದೆ. ಮನೆ ಧ್ವಂಸಕ್ಕೂ ಮುನ್ನಾ ಯಾವುದೇ ನೋಟಿಸ್ ನೀಡಿಲ್ಲ, ಮನೆ ವಸ್ತು ಸಾಗಿಸಲು ಯಾವುದೇ ಸಮಯಾವಕಾಶ ನೀಡಲಿಲ್ಲ. ಕುಟುಂಬವನ್ನು ದೇವಾಲಯಕ್ಕೆ ಕರೆದೊಯ್ಯದೆ ಬೇರೆ ದಾರಿಯಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.