ಭಾರತದ ನನ್ನ ಕಲ್ಪನೆ ಬಿಜೆಪಿಗಿಂತ ಭಿನ್ನ: ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ರಾಹುಲ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಭಾರತದ ಕಲ್ಪನೆಯ ಕುರಿತು ಮಾತನಾಡಿದ್ದಾರೆ.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ರಾಹುಲ್ ಗಾಂಧಿ
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ರಾಹುಲ್ ಗಾಂಧಿ

ಕ್ಯಾಲಿಫೋರ್ನಿಯಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಭಾರತದ ಕಲ್ಪನೆಯ ಕುರಿತು ಮಾತನಾಡಿದ್ದಾರೆ. ಭಾರತದ ಬಗ್ಗೆ ಸಂಪೂರ್ಣ ವಿಭಿನ್ನ ಪರಿಕಲ್ಪನೆಯನ್ನು ಹೊಂದಿದ್ದೇನೆ. ಬಿಜೆಪಿ ನೋಡುವ ರೀತಿಯಲ್ಲಿ ನಾನು ಭಾರತವನ್ನು ನೋಡುವುದಿಲ್ಲ. ಅವರು ಮೇಲು-ಕೀಳಿನ ಕೇಂದ್ರೀಕೃತ ವ್ಯವಸ್ಥೆಯಾಗಿ ನೋಡುತ್ತಾರೆ. ಆದರೆ ನಾನು ಬಹು ಸಂಸ್ಕೃತಿಗಳು, ಧರ್ಮಗಳು ಮತ್ತು ಭಾಷೆಗಳೊಂದಿಗೆ ವೈವಿಧ್ಯಮಯ ರಾಷ್ಟ್ರವಾಗಿ ವಿಕೇಂದ್ರೀಕೃತ ವ್ಯವಸ್ಥೆಯಾಗಿ ನೋಡುತ್ತೇನೆ ಎಂದಿದ್ದಾರೆ. 

ಭಾರತ್ ಜೋಡೋ ಯಾತ್ರೆಯಲ್ಲಿ ನಡೆಯುತ್ತಿದ್ದಾಗ ನಮಗೆ ಯಾವುದೇ ಬಲವಿರಲಿಲ್ಲ; ಬಿಜೆಪಿಗೆ ಪೊಲೀಸರು, ತನಿಖಾ ಸಂಸ್ಥೆಗಳು, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಲ ಇತ್ತು. ಮೋದಿ ಸರ್ಕಾರದ ಎಲ್ಲಾ ಶಕ್ತಿ ಏನನ್ನೂ ಮಾಡಲಾಗಲಿಲ್ಲ. ಹೆಚ್ಚಿನ ಪಡೆ ನಿಯೋಜಿಸಲು ಪ್ರಯತ್ನಿಸಿದರು ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ನೀವು ಸತ್ಯಕ್ಕೆ ಹತ್ತಿರವಾದಾಗ ಶಕ್ತಿ ಬರುತ್ತದೆ, ಅವರಿಗೆ ಬಲವಿದೆ, ಆದರೆ ಅವರಿಗೆ ಶಕ್ತಿ ಇಲ್ಲ ಎಂದರು. 

ತಮ್ಮ ಮೂರು ನಗರಗಳ ಯುಎಸ್ ಪ್ರವಾಸದ ಸಮಯದಲ್ಲಿ, ಗಾಂಧಿಯವರು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿನ ಸರ್ಕಾರ ಜನರಿಗೆ ಬೆದರಿಕೆ ಹಾಕುತ್ತಿದ್ದು, ದೇಶದ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಭಾರತದಲ್ಲಿ ರಾಜಕೀಯದ ಎಲ್ಲಾ ಸಾಧನಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com