ವಾಗ್ನರ್ ವಶಕ್ಕೆ ದಕ್ಷಿಣ ರಷ್ಯಾ ಸೇನಾ ಕೇಂದ್ರ ಕಚೇರಿ; ಸ್ಥಳೀಯರ ಬೆಂಬಲವಿದೆ ಎಂದ ಪ್ರಿಗೋಜಿನ್
ಮಾಸ್ಕೋ: ರಷ್ಯಾ ಅಧ್ಯಕ್ಷರ ವಿರುದ್ಧ ಬಂಡಾಯವೆದ್ದಿರುವ ಖಾಸಗಿ ಸೇನೆ ವಾಗ್ನರ್ ನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ತಮ್ಮ ಪಡೆ, ದಕ್ಷಿಣ ರಷ್ಯಾದ ಸೇನಾ ಕೇಂದ್ರ ಕಚೇರಿಯನ್ನು ವಶಕ್ಕೆ ಪಡೆದಿದ್ದಾಗಿ ಹೇಳಿದ್ದಾರೆ.
ಒಂದೇ ಒಂದು ಗುಂಡನ್ನೂ ಹಾರಿಸದೇ ದಕ್ಷಿಣ ರಷ್ಯಾದ ಸೇನಾ ಕೇಂದ್ರ ಕಚೇರಿಯನ್ನು ವಶಪಡಿಸಿಕೊಂಡಿರುವುದಾಗಿ ಹೇಳಿರುವ ವಾಗ್ನರ್, ತಮಗೆ ಸ್ಥಳೀಯರ ಬೆಂಬಲವೂ ಇದೆ ಎಂದು ತಿಳಿಸಿದ್ದಾರೆ.
ಪ್ರಿಗೋಜಿನ್ ಪಡೆಯ ಫೈಟರ್ ಗಳು ರಷ್ಯಾ ಆಕ್ರಮಿತ ಉಕ್ರೇನ್ ಗೆ ನುಗ್ಗಿದ್ದು, ದಕ್ಷಿಣದ ನಗರದಲ್ಲಿನ ಸೇನಾ ಕಚೇರಿಯನ್ನು ವಶಕ್ಕೆ ಪಡೆದಿದ್ದಾರೆ. ಇದು ಉಕ್ರೇನ್ ನಲ್ಲಿರುವ ಮಾಸ್ಕೋ ಪಡೆಗಳ ಕಾರ್ಯಾಚರಣೆಯ ಪ್ರಮುಖ ಕೇಂದ್ರವಾಗಿದೆ.
ರಾಷ್ಟ್ರ ನಮಗೇಕೆ ಬೆಂಬಲ ನೀಡುತ್ತದೆ? ಏಕೆಂದರೆ ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಪ್ರಿಗೋಜಿನ್ ಟೆಲಿಗ್ರಾಮ್ ಮೂಲಕ ಪ್ರಕಟಿಸಿರುವ ತಮ್ಮ ಇತ್ತೀಚಿನ ಆಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ರೊಸ್ತೋವ್ ನ್ನು ಒಂದೇ ಒಂದೂ ಗುಂಡು ಹಾರಿಸದೇ ನಾವು (ಸೇನೆ) ಕೇಂದ್ರ ಕಚೇರಿಯನ್ನು ವಶಪಡಿಸಿಕೊಂಡಿದ್ದೇವೆ, ”ಎಂದು ಅವರು ಹೇಳಿದರು. ನಮ್ಮ ಪಡೆಗಳು ಒಬ್ಬನೇ ಒಬ್ಬ ಸೈನಿಕನನ್ನೂ ಮುಟ್ಟಿಲ್ಲ. ನಮ್ಮ ದಾರಿಯಲ್ಲಿ ನಾವು ಯಾರನ್ನೂ ಹತ್ಯೆ ಮಾಡಿಲ್ಲ, ಆದರೆ ನಮ್ಮ ಯೋಧರ ಮೇಲೆ ಫಿರಂಗಿ ಮತ್ತು ನಂತರ ಹೆಲಿಕಾಪ್ಟರ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಪ್ರಿಗೊಜಿನ್ ಹೇಳಿದ್ದಾರೆ. ರೊಸ್ತೋವ್ ನಲ್ಲಿಯೂ ಸ್ಥಳೀಯರ ಬೆಂಬಲ ನಮಗೆ ಇದೆ ಎಂದು ಪುಟಿನ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ