ರಷ್ಯಾ: ಪುಟಿನ್ ಗಾಗಿ ಯುದ್ಧಭೂಮಿಗಿಳಿದ ವಿಧ್ವಂಸಕಾರಿ ಚೆಚನ್ಯಾ ಸೇನೆ, ಸ್ನೇಹಿತ ಪ್ರಿಗೊಜಿನ್ ವಿರುದ್ಧವೇ ತೊಡೆ ತಟ್ಟಿದ ರಂಜಾನ್ ಕದಿರೊವ್

ರಷ್ಯಾದಲ್ಲಿ ಭುಗಿಲೆದ್ದಿರುವ ಆಂತರಿಕ ದಂಗೆಯಲ್ಲಿ ಇದೀಗ ವಿಧ್ವಂಸಕಾರಿ 'ಚೆಚನ್ಯಾ ಸೇನೆ ಯುದ್ಧಭೂಮಿಗಿಳಿದಿದ್ದು, ಸ್ನೇಹಿತ ಪ್ರಿಗೊಜಿನ್ ವಿರುದ್ಧವೇ ಚೆಚನ್ಯಾ ಸೇನಾ ಮುಖ್ಯಸ್ಥ ರಂಜಾನ್ ಕದಿರೊವ್ ತೊಡೆ ತಟ್ಟಿದ್ದಾರೆ.
ವಿಧ್ವಂಸಕಾರಿ ಚೆಚನ್ಯಾ ಸೇನೆ
ವಿಧ್ವಂಸಕಾರಿ ಚೆಚನ್ಯಾ ಸೇನೆ

ಮಾಸ್ಕೋ: ರಷ್ಯಾದಲ್ಲಿ ಭುಗಿಲೆದ್ದಿರುವ ಆಂತರಿಕ ದಂಗೆಯಲ್ಲಿ ಇದೀಗ ವಿಧ್ವಂಸಕಾರಿ 'ಚೆಚನ್ಯಾ ಸೇನೆ ಯುದ್ಧಭೂಮಿಗಿಳಿದಿದ್ದು, ಸ್ನೇಹಿತ ಪ್ರಿಗೊಜಿನ್ ವಿರುದ್ಧವೇ ಚೆಚನ್ಯಾ ಸೇನಾ ಮುಖ್ಯಸ್ಥ ರಂಜಾನ್ ಕದಿರೊವ್ ತೊಡೆ ತಟ್ಟಿದ್ದಾರೆ.

ಹೌದು.. ಯೆವ್ಗೆನಿ ಪ್ರಿಗೊಜಿನ್ ರಷ್ಯಾ ವಿರುದ್ಧ ದಂಗೆ ಪ್ರಕಟಿಸುತ್ತಲೇ ಅತ್ತ ಅಲರ್ಟ್ ಆಗಿರುವ ಚೆಚನ್ಯಾ ಸೇನೆ ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರ ಯುದ್ದ ಭೂಮಿಗಿಳಿಯುವುದಾಗಿ ಘೋಷಣೆ ಮಾಡಿದೆ. 

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಚೆಚನ್ಯಾ ಸೇನಾ ಮುಖ್ಯಸ್ಥ ರಂಜಾನ್ ಕದಿರೊವ್, 'ತಾನು ಮತ್ತು ತನ್ನ ಸೇನೆ ಯೆವ್ಗೆನಿ ಪ್ರಿಗೊಜಿನ್ ನೇತೃತ್ವದ ಖಾಸಗಿ ಸೇನೆ ವ್ಯಾಗ್ನರ್ ವಿರುದ್ಧ ಸೆಣಸಲು ಸಿದ್ಧವಾಗಿದ್ದೇವೆ. ದಂಗೆಯನ್ನು ಹತ್ತಿಕ್ಕಲು ಸಹಾಯ ಮಾಡಲು ತಾವು ಸರ್ವಸನ್ನದ್ಧವಾಗಿದ್ದು,  ಅಗತ್ಯವಿದ್ದರೆ ಕಠಿಣ ವಿಧಾನಗಳನ್ನು ಬಳಸಲು ಸಿದ್ಧವಾಗಿದ್ದೇವೆ. ಅಂತೆಯೇ ಪ್ರಿಗೋಜಿನ್ ನಡವಳಿಕೆಯನ್ನೂ ಟೀಕಿಸಿರುವ ರಂಜಾನ್ ಕದಿರೋವ್, "ಹಿಂಭಾಗದಲ್ಲಿರುವ ಚಾಕು" ಎಂದು ಟೀಕಿಸಿದ್ದು, ಪ್ರಿಗೋಜಿನ್ ರ ಯಾವುದೇ "ಪ್ರಚೋದನೆಗಳಿಗೆ" ಮಣಿಯದಂತೆ ರಷ್ಯಾದ ಸೈನಿಕರಿಗೆ ಕರೆ ನೀಡಿದ್ದಾರೆ.

20 ವರ್ಷಗಳ ಹಿಂದೆ ಚೆಚೆನ್ ಯುದ್ಧಗಳ ನಂತರ ರಷ್ಯಾದ ಮೊದಲ ಸಶಸ್ತ್ರ ದಂಗೆಯಲ್ಲಿ, ಪ್ರಿಗೋಜಿನ್‌ನ ವ್ಯಾಗ್ನರ್ ಮಿಲಿಷಿಯಾ ಗುಂಪು ಭಾರೀ ಶಸ್ತ್ರಸಜ್ಜಿತ ಹೋರಾಟಗಾರರು ರೋಸ್ಟೋವ್-ಆನ್-ಡಾನ್ ಬೀದಿಗಳಲ್ಲಿ ನಿಯಂತ್ರಣ ಸಾಧಿಸಿದ್ದು, ಇದು ಉಕ್ರೇನ್‌ನ ಗಡಿಗೆ ಹತ್ತಿರವಿರುವ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ವಾಸಿಸುವ ನಗರವಾಗಿದೆ. ಈ ರೋಸ್ಟೊವ್-ಆನ್-ಡಾನ್ ನಗರ ಉಕ್ರೇನ್‌ನಲ್ಲಿನ ಹೋರಾಟವನ್ನು ನೋಡಿಕೊಳ್ಳುವ ರಷ್ಯಾದ ಸೇನಾ ಪ್ರಧಾನ ಕಛೇರಿಯ ನೆಲೆಯಾಗಿದೆ. 

ರಷ್ಯಾ ರಕ್ಷಣಾ ಮುಖ್ಯಸ್ಥರ ವಿರುದ್ಧ ಪ್ರಿಗೋಜಿನ್ ಸರಣಿ ಆರೋಪ
ಇನ್ನು ರಷ್ಯಾ ವಿರುದ್ಧ ತಾವು ಬಂಡಾಯವೇಳಲು ಕಾರಣವನ್ನೂ ನೀಡಿರುವ ಪ್ರಿಗೋಜಿನ್, ರಷ್ಯಾ ಸೇನೆ ಯುದ್ಧಭೂಮಿಯಲ್ಲಿರುವ ತಮ್ಮ ಸೈನಿಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ.. ಸೂಕ್ತ ಸಂದರ್ಭಗಳಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ರಷ್ಯಾ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಮತ್ತು ಸಾಮಾನ್ಯ ಸಿಬ್ಬಂದಿ ಮುಖ್ಯಸ್ಥ ವ್ಯಾಲೆರಿ ಗೆರಾಸಿಮೊವ್ ಅವರನ್ನು ರೋಸ್ಟೊವ್‌ನಲ್ಲಿ ನೋಡಲು ಬರುವಂತೆ ಒತ್ತಾಯಿಸಿದ್ದಾರೆ. ಅದಾಗ್ಯೂ ರಷ್ಯಾ ಸೇನೆ ತನ್ನ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದು, ಮಾತ್ರವಲ್ಲದೇ ತನ್ನದೇ ಸೇನಾ ಹೆಲಿಕಾಪ್ಟರ್ ಗಳನ್ನು ಕ್ಷಿಪಣಿಗಳ ಮೂಲಕ ನಾಶಪಡಿಸಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com