ಯುಎಸ್ ಡ್ರೋನ್ ಮೇಲೆ ರಷ್ಯಾದ ಜೆಟ್ ಇಂಧನ ಸುರಿದ ವಿಡಿಯೋ ಬಿಡುಗಡೆ ಮಾಡಿದ ಅಮೆರಿಕಾ!

ರಷ್ಯಾದ ಯುದ್ಧ ವಿಮಾನ ಮತ್ತು ಅಮೆರಿಕದ ಡ್ರೋನ್ ನಡುವಿನ ಮುಖಾಮುಖಿಯ ಸುದ್ದಿಯ ವಿಡಿಯೋವೊಂದು ಹೊರಬಿದ್ದಿದೆ. 
ರಷ್ಯಾದ ಜೆಟ್
ರಷ್ಯಾದ ಜೆಟ್

ನವದೆಹಲಿ: ರಷ್ಯಾದ ಯುದ್ಧ ವಿಮಾನ ಮತ್ತು ಅಮೆರಿಕದ ಡ್ರೋನ್ ನಡುವಿನ ಮುಖಾಮುಖಿಯ ಸುದ್ದಿಯ ವಿಡಿಯೋವೊಂದು ಹೊರಬಿದ್ದಿದೆ. 

ಮಾರ್ಚ್ 14 ರಂದು ಕಪ್ಪು ಸಮುದ್ರದ ಮೇಲೆ ಯುಎಸ್ ಡ್ರೋನ್ ಮತ್ತು ರಷ್ಯಾದ ಯುದ್ಧ ವಿಮಾನ ಮುಖಾಮುಖಿಯಾಗಿದ್ದು ಈ ವೇಳೆ ಡ್ರೋನ್ ಮೇಲೆ ರಷ್ಯಾದ ಜೆಟ್ ಇಂದನ ಸುರಿಯುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದನ್ನು ಅಮೆರಿಕಾ ಇದೀಗ ಬಿಡುಗಡೆ ಮಾಡಿದೆ. 

ಈ ಘರ್ಷಣೆಯಲ್ಲಿ  MQ 9 ಡ್ರೋನ್ ಕಪ್ಪು ಸಮುದ್ರಕ್ಕೆ ಬಿದ್ದಿತ್ತು. ಈ ಸಂಬಂಧ ಅಮೆರಿಕಾ ರಷ್ಯಾ ವಿರುದ್ಧ ಆರೋಪ ಮಾಡಿದ್ದು ಅಸುರಕ್ಷಿತ ಮತ್ತು ವೃತ್ತಿಪರವಲ್ಲದ ಪ್ರತಿಬಂಧದ ಎಂದು ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ ತನ್ನ ಡ್ರೋನ್ ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿದ್ದು ಅದು ಬೇರೆ ಯಾವುದೇ ದೇಶದ ಗಡಿಯನ್ನು ಉಲ್ಲಂಘಿಸಿಲ್ಲ ಎಂದು ಯುಎಸ್ ಮಿಲಿಟರಿ ಹೇಳಿತ್ತು.

ಮತ್ತೊಂದೆಡೆ, ಈ ಪ್ರದೇಶದ ಮೇಲೆ ಬೇಹುಗಾರಿಕೆ ನಡೆಸುತ್ತಿರುವಾಗ ಡ್ರೋನ್ ಅನ್ನು ನಾಶಮಾಡಲು ಪ್ರಯತ್ನಿಸಲಿಲ್ಲ ಎಂದು ರಷ್ಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದು ಡ್ರೋನ್ ಯುದ್ಧವನ್ನು ಅಭ್ಯಾಸ ಮಾಡುತ್ತಿರುವುದು ಕಂಡುಬಂದಿದ್ದು, ಈ ಪ್ರಯತ್ನದಲ್ಲಿ ಅದು ನೀರಿನ ಮೇಲ್ಮೈಗೆ ಡಿಕ್ಕಿ ಹೊಡೆದಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ನಮ್ಮ ವಿಮಾನಗಳು ಅಮೆರಿಕದ ಡ್ರೋನ್‌ಗೆ ಬಡಿದಿಲ್ಲ, ನಾವು ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಬಳಸಿಲ್ಲ ಎಂದು ಸಚಿವಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com