
ಖಲಿಸ್ಥಾನದ ಬೆಂಬಲಿಗರು (ಸಂಗ್ರಹ ಚಿತ್ರ)
ಸ್ಯಾನ್ ಫ್ರಾನ್ಸಿಸ್ಕೋ: ಖಲೀಸ್ಥಾನಿ ಪರ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತವಾಸ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಭಾರತೀಯ ಅಮೇರಿಕನ್ನರು ಈ ದಾಳಿಯನ್ನು ಖಂಡಿಸಿದ್ದು, ಘಟನೆಗೆ ಹೊಣೆಗಾರರಾಗಿರುವವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಭಾರತೀಯ ದೂತವಾಸ ಕಚೇರಿಗಳ ಮೇಲೆ ಖಲಿಸ್ಥಾನಿಗಳ ದಾಳಿ ನಡೆದಿರುವ ಲಂಡನ್ ಹಾಗೂ ಎಸ್ಎಫ್ಒ ನಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯದ ಬಗ್ಗೆ ಗಾಬರಿಯಾಗುತ್ತಿದೆ ಎಂದು ಇಂಡಿಯಾ ಅಂಡ್ ಇಂಡಿಯನ್ ಡಯಾಸ್ಪೊರಾ ಸ್ಟಡೀಸ್' (ಎಫ್ಐಐಡಿಎಸ್) ಹೇಳಿದೆ.
ಇದನ್ನೂ ಓದಿ: ಪಂಜಾಬ್ ಪೊಲೀಸರಿಂದ ಅಮೃತಪಾಲ್ ಸಿಂಗ್ ಬಂಧನ: ''ನಕಲಿ ಎನ್ಕೌಂಟರ್''ಗೆ ಸ್ಕೆಚ್ ಎಂದ 'ವಾರಿಸ್ ಪಂಜಾಬ್ ದೇ' ಕಾನೂನು ಸಲಹೆಗಾರ
ಖಲಿಸ್ಥಾನ ಪರ ಘೋಷಣೆಗಳನ್ನು ಕೂಗಿರುವ ಕಿಡಿಗೇಡಿಗಳು, ದೂತವಾಸದ ಆವರಣದಲ್ಲಿ ಖಲಿಸ್ಥಾನ ಧ್ವಜ ಇರಿಸಿದ್ದಾರೆ. ತಕ್ಷಣವೇ ದೂತವಾಸ ಸಿಬ್ಬಂದಿಗಳು ಧ್ವಜವನ್ನು ತೆಗೆದುಹಾಕಿದ್ದಾರೆ.
ತಕ್ಷಣವೇ ಆಕ್ರೋಶಗೊಂಡ ಗುಂಪು ದೂತವಾಸ ಕಚೇರಿಯ ಆವರಣಕ್ಕೆ ನುಗ್ಗಿ ಬಾಗಿಲು ಹಾಗೂ ಕಿಟಕಿಗಳನ್ನು ರಾಡ್ ನಿಂದ ಧ್ವಂಸಗೊಳಿಸಿದರು. ಈ ಘಟನೆಯ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಲಭ್ಯವಾಗಿಲ್ಲ.