'ವಾರಿಸ್ ಪಂಜಾಬ್‌ ದೇ' ಕಾನೂನು ಸಲಹೆಗಾರ
'ವಾರಿಸ್ ಪಂಜಾಬ್‌ ದೇ' ಕಾನೂನು ಸಲಹೆಗಾರ

ಪಂಜಾಬ್ ಪೊಲೀಸರಿಂದ ಅಮೃತಪಾಲ್ ಸಿಂಗ್ ಬಂಧನ: ''ನಕಲಿ ಎನ್ಕೌಂಟರ್''ಗೆ ಸ್ಕೆಚ್ ಎಂದ 'ವಾರಿಸ್ ಪಂಜಾಬ್‌ ದೇ' ಕಾನೂನು ಸಲಹೆಗಾರ

ಪರಾರಿಯಲ್ಲಿದ್ದ ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ನಕಲಿ ಎನ್ಕೌಂಟರ್ ಮೂಲಕ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು 'ವಾರಿಸ್ ಪಂಜಾಬ್‌ ದೇ' ಕಾನೂನು ಸಲಹೆಗಾರ ಇಮಾನ್ ಸಿಂಗ್ ಖಾರಾ ಭಾನುವಾರ ಹೇಳಿದ್ದಾರೆ.

ಚಂಡೀಗಢ: ಪರಾರಿಯಲ್ಲಿದ್ದ ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ನಕಲಿ ಎನ್ಕೌಂಟರ್ ಮೂಲಕ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು 'ವಾರಿಸ್ ಪಂಜಾಬ್‌ ದೇ' ಕಾನೂನು ಸಲಹೆಗಾರ ಇಮಾನ್ ಸಿಂಗ್ ಖಾರಾ ಭಾನುವಾರ ಹೇಳಿದ್ದಾರೆ.

ಅಮೃತಪಾಲ್ ಸಿಂಗ್ ಇನ್ನೂ ತಲೆಮರೆಸಿಕೊಂಡಿದ್ದಾನೆ ಮತ್ತು ಆತನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪಂಜಾಬ್ ಪೊಲೀಸರ ಹೇಳಿಕೆಯ ಹೊರತಾಗಿಯೂ, ವಕೀಲ ಇಮಾನ್ ಸಿಂಗ್ ಖರಾ ಅವರು ಖಲಿಸ್ತಾನ್ ಬೆಂಬಲಿತ ನಾಯಕ ಅಮೃತ್ ಪಾಲ್ ಸಿಂಗ್ ರನ್ನು ಶಾಕೋಟ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಪೊಲೀಸರಿಂದ "ನಕಲಿ ಎನ್‌ಕೌಂಟರ್" ಶಂಕೆ
ಇನ್ನು ಇದೇ ವೇಳೆ ಪಂಜಾಬ್ ಪೊಲೀಸರು "ನಕಲಿ ಎನ್‌ಕೌಂಟರ್"ನಲ್ಲಿ ಅಮೃತ್ ಪಾಲ್ ಸಿಂಗ್ ರನ್ನು ಕೊಲೆಗೈಯ್ಯಲು ಸಂಚು ರೂಪಿಸಿದ್ದು ಇದೇ ಕಾರಣಕ್ಕೆ ಆತನ ಬಂಧನ ಕಾರ್ಯಾಚರಣೆಯ ನಾಟಕವಾಡುತ್ತಿದ್ದಾರೆ ಎಂದು ಇಮಾನ್ ಸಿಂಗ್ ಖಾರಾ ಆರೋಪಿಸಿದ್ದಾರೆ. ಅಮೃತಪಾಲ್ ಸಿಂಗ್ ಅವರ ಜೀವ ಬೆದರಿಕೆಯನ್ನು ಉಲ್ಲೇಖಿಸಿ, ವಕೀಲ ಖಾರಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ರಿಟ್ ಅರ್ಜಿ ಕೂಡ ಸಲ್ಲಿಸಿದ್ದಾರೆ.

"ಇಂದು ನಾನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ರಿಟ್ ಅರ್ಜಿಯನ್ನು (ಇಮಾನ್ ಸಿಂಗ್ ಖರಾ ವರ್ಸಸ್ ಪಂಜಾಬ್ ಸರ್ಕಾರ) ಸಲ್ಲಿಸಿದ್ದೇನೆ. ಇದು ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಯಾಗಿದೆ" ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ‘ಭಾರತದ ಸಂವಿಧಾನದ 21ನೇ ವಿಧಿ ಪ್ರಕಾರ ಬದುಕುವ ಹಕ್ಕು, ನ್ಯಾಯಾಲಯದ ವಿಚಾರಣೆ ಇಲ್ಲದೆ ಪೊಲೀಸರು ಯಾರನ್ನೂ ಹೊಡೆಯುವಂತಿಲ್ಲ. ಈ ಅರ್ಜಿಯಲ್ಲಿ ಅಮೃತಪಾಲ್ ಸಿಂಗ್ ಅವರಿಗೆ ಜೀವ ಬೆದರಿಕೆಯಿದ್ದು, ಅವರನ್ನು ಶಾಹಕೋಟ್ ಪೊಲೀಸ್ ಠಾಣೆಯಲ್ಲಿ ಬಂಧಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಒಬ್ಬ ವ್ಯಕ್ತಿಯನ್ನು ಹಾಜರುಪಡಿಸುವುದು ಅವರ [ಪೊಲೀಸರ] ಕರ್ತವ್ಯದ ಹೊರತಾಗಿಯೂ, ಪೊಲೀಸರು ಅವರನ್ನು [ಅಮೃತಪಾಲ್ ಸಿಂಗ್] ಇನ್ನೂ ಹಾಜರುಪಡಿಸಲಿಲ್ಲ. ಪೊಲೀಸರು ನಕಲಿ ಎನ್ಕೌಂಟರ್ ದುರುದ್ದೇಶದಿಂದಲೇ ಕೋರ್ಟ್ ಗೆ ಅಮೃತ್ ಪಾಲ್ ಸಿಂಗ್ ರನ್ನು ಹಾಜರುಪಡಿಸಿಲ್ಲ ಎಂದು ಇಮಾನ್ ಸಿಂಗ್ ಖಾರಾ ಆರೋಪಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com