ವಾಷಿಂಗ್ ಟನ್: ತೀವ್ರಗಾಮಿ ಅಮೃತ್ ಪಾಲ್ ಸಿಂಗ್ ನ್ನು ಬೆಂಬಲಿಸಿ ಐತಿಹಾಸಿಕ ಟೈಮ್ಸ್ ಸ್ಕ್ವೇರ್ ಎದುರು ಖಲೀಸ್ತಾನ ಬೆಂಬಲಿಗರು ಇಂದು ಪ್ರತಿಭಟನೆ ನಡೆಸಿದರು.
ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕಾರರು, ರಿಚ್ಮಂಡ್ ಹಿಲ್ ನಲ್ಲಿರುವ ಬಾಬಾ ಮಖನ್ ಶಾ ಲುಬಾನ ಸಿಕ್ ಕೇಂದ್ರದಿಂದ ಕಾರ್ ರ್ಯಾಲಿ ಪ್ರಾರಂಭಿಸಿ ಟೈಮ್ಸ್ ಸ್ಕ್ವೇರ್ ಬಳಿ ಪೂರ್ಣಗೊಳಿಸಿದರು.
ಟೈಮ್ಸ್ ಸ್ಕ್ವೇರ್ ಬಳಿ ಖಲಿಸ್ತಾನ ಧ್ವಜ ಹಾಗೂ ಎಲ್ ಇಡಿ ಮೊಬೈಲ್ ಬಿಲ್ ಬೋರ್ಡ್ ಗಳನ್ನು ಹೊಂದಿದ ಟ್ರಕ್ ಗಳಲ್ಲಿ ಅಮೃತ್ ಪಾಲ್ ಸಿಂಗ್ ಅವರ ಫೋಟೊಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಮಹಿಳೆಯರು ಹಾಗೂ ಮಕ್ಕಳೂ ಭಾಗವಹಿಸಿ ಖಲೀಸ್ತಾನ ಧ್ವಜ ಹಿಡಿದು ಘೋಷಣೆ ಕೂಗಿದ್ದು ವಿಶೇಷವಾಗಿತ್ತು.
ಪ್ರತಿಭತನಾನಿರತರು ಅಮೃತ್ ಪಾಲ್ ಸಿಂಗ್ ಅವರ ಬಿಡುಗಡೆಗೆ ಆಗ್ರಹಿಸಿದ್ದು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು. ಇದಷ್ಟೇ ಅಲ್ಲದೇ ಟೈಮ್ಸ್ ಸ್ಕ್ವೇರ್ ನ ಬಿಲ್ ಬೋರ್ಡ್ ಗಳಲ್ಲಿ ಅಮೃತ್ ಪಾಲ್ ಸಿಂಗ್ ಅವರ ಫೋಟೋವನ್ನು ಪ್ರದರ್ಶಿಸಿದರು.
Advertisement