ಟರ್ಕಿ ಶೃಂಗಸಭೆಯಲ್ಲಿ ಉಕ್ರೇನ್-ರಷ್ಯಾ ಪ್ರತಿನಿಧಿಗಳ ಬೀದಿ ಜಗಳ, ಪರಸ್ಪರ ಎಳೆದಾಟ!

ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಇತ್ತ ಉಭಯ ದೇಶಗಳ ಸರ್ಕಾರದ ಪ್ರತಿನಿಧಿಗಳು ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ.
ಉಕ್ರೇನ್-ರಷ್ಯಾ ಪ್ರತಿನಿಧಿಗಳ ಬೀದಿ ಜಗಳ
ಉಕ್ರೇನ್-ರಷ್ಯಾ ಪ್ರತಿನಿಧಿಗಳ ಬೀದಿ ಜಗಳ

ಅಂಕಾರಾ: ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಇತ್ತ ಉಭಯ ದೇಶಗಳ ಸರ್ಕಾರದ ಪ್ರತಿನಿಧಿಗಳು ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ.

ಹೌದು.. ರಷ್ಯಾ(Russia) ಹಾಗೂ ಉಕ್ರೇನ್(Ukraine) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ನಡೆದ ಸಮ್ಮೇಳನದಲ್ಲಿ ಉಕ್ರೇನ್ ಸಂಸದ ಓಲೆಕ್ಸಾಂಡರ್ ಮಾರಿಕೋವ್ಸ್ಕಿ ರಷ್ಯಾದ ಪ್ರತಿನಿಧಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾರಿಕೋವ್ಸ್ಕಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದು, ನ್ಯೂಸ್‌ವೀಕ್ ಮಾರಿಕೋವ್‌ಸ್ಕಿ ಅವರ ಪೋಸ್ಟ್ ಅನ್ನು ಉಲ್ಲೇಖಿಸಿ ಘಟನೆಯ ಬಗ್ಗೆ ವರದಿ ಮಾಡಿದೆ. 

ವರದಿಯಲ್ಲಿರುವಂತೆ ರಷ್ಯಾ ಪ್ರತಿನಿಧಿ ಉಕ್ರೇನ್​ ಸಂಸದರಿಂದ ಬಲವಂತವಾಗಿ ಧ್ವಜವನ್ನು ಕಿತ್ತುಕೊಂಡಿದ್ದರು, ಅದಕ್ಕೆ ಕೋಪಗೊಂಡು ಉಕ್ರೇನ್ ಸಂಸದರು ರಷ್ಯಾ ಪ್ರತಿನಿಧಿಗೆ ಥಳಿಸಿದ್ದಾರೆ. ಈ ಘಟನೆಯು ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯನ್ನು ಎತ್ತಿ ತೋರಿಸುತ್ತದೆ ಎಂದು ವರದಿ ಮಾಡಲಾಗಿದೆ. 

ಇದು ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಡೆಯಿಂದ ಸಂಘರ್ಷದಿಂದ ಉಲ್ಬಣಗೊಂಡಿದೆ ಎಂದು ಹೇಳಲಾಗಿದ್ದು, ಕಳೆದ ವರ್ಷದ ಫೆಬ್ರುವರಿಯಲ್ಲಿ ಆರಂಭವಾದ ಸಂಘರ್ಷ ಇದೀಗ ಪ್ರಮುಖ ನಗರಗಳಾದ ಕೈವ್, ಖೆರ್ಸನ್, ಒಡೆಸಾ ಮತ್ತು ಬಖ್‌ಮುತ್‌ಗಳಿಗೂ ವ್ಯಾಪಿಸಿದೆ.

ಕ್ರೆಮ್ಲಿನ್ ಮೇಲಿನ ದಾಳಿ
ಮಾಸ್ಕೋ ಗುರುವಾರ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿಯ ಮಾಸ್ಟರ್ ಮೈಂಡ್ ಎಂದು ಅಮೆರಿಕ ಆರೋಪಿಸಿದೆ, ವಾಷಿಂಗ್ಟನ್ ಇದನ್ನು ನಿರಾಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com