ಒತ್ತೆಯಾಳುಗಳ ಬಿಡುಗಡೆಗೆ ಕ್ರಮ ಕೈಗೊಳ್ಳಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಸಾರ್ವಜನಿಕರ ಒತ್ತಾಯ!

ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒತ್ತಡ ಹೆಚ್ಚುತ್ತಿರುವ ಮಧ್ಯೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡೆಗೆ ಹಲವು ಕಡೆಗಳಿಂದ ವಿರೋಧ ವ್ಯಕ್ತವಾಗಿದೆ.
ಬೆಂಜಮಿನ್ ನೆತನ್ಯಾಹು
ಬೆಂಜಮಿನ್ ನೆತನ್ಯಾಹು
Updated on

ಇಸ್ರೇಲ್: ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒತ್ತಡ ಹೆಚ್ಚುತ್ತಿರುವ ಮಧ್ಯೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡೆಗೆ ಹಲವು ಕಡೆಗಳಿಂದ ವಿರೋಧ ವ್ಯಕ್ತವಾಗಿದೆ.

ಸುಮಾರು 240 ಒತ್ತೆಯಾಳುಗಳ ಕುಟುಂಬಗಳು ಮತ್ತು ಬೆಂಬಲಿಗರು ಟೆಲ್ ಅವಿವ್‌ನಿಂದ ಜೆರುಸಲೆಮ್‌ಗೆ ಮೆರವಣಿಗೆ ನಡೆಸಿದರು, ಸರ್ಕಾರದ ಕ್ರಮಕ್ಕೆ ಒತ್ತಾಯಿಸಿ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ. 

ಅಪಹರಣಕ್ಕೊಳಗಾದವರಲ್ಲಿ ಒಬ್ಬರ ಸಂಬಂಧಿ ಗಿಲ್ ಡಿಕ್‌ಮನ್, ಒತ್ತೆಯಾಳುಗಳ ಸುರಕ್ಷಿತ ವಾಪಸಾತಿಗೆ ಆದ್ಯತೆ ನೀಡುವಂತೆ ಪ್ರಧಾನ ಮಂತ್ರಿಯನ್ನು ಒತ್ತಾಯಿಸಿದರು, ನೆತನ್ಯಾಹು ಅವರ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ, ಇದು ಇಸ್ರೇಲ್ ಗೆ ಕಳವಳಕಾರಿ ವಿಷಯವಾಗಿದೆ. 

ಗಾಜಾದಲ್ಲಿ ಇಸ್ರೇಲ್‌ ಯುದ್ಧವು ಆರು ವಾರಗಳವರೆಗೆ ವಿಸ್ತರಿಸುತ್ತಿದ್ದಂತೆ, ಸಾರ್ವಜನಿಕ ಅಭಿಪ್ರಾಯವು ನೆತನ್ಯಾಹು ವಿರುದ್ಧ ತಿರುಗಿಬಿದ್ದಿದೆ. ಹಮಾಸ್ ವಿರುದ್ಧದ ಸೇನಾ ಕಾರ್ಯಾಚರಣೆಗೆ ವ್ಯಾಪಕ ಬೆಂಬಲದ ಹೊರತಾಗಿಯೂ, ಸಮೀಕ್ಷೆಗಳು ಪ್ರಧಾನ ಮಂತ್ರಿ ಮತ್ತು ಅವರ ಒಕ್ಕೂಟದ ಪರವಾಗಿ ಹೆಚ್ಚು ವಿರೋಧ ಕಾಣುತ್ತಿದೆ. 

ಪ್ರತಿಪಕ್ಷದ ನಾಯಕ ಯೈರ್ ಲ್ಯಾಪಿಡ್ ನೆತನ್ಯಾಹು ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸಾಮಾಜಿಕ ಅಥವಾ ಭದ್ರತಾ ದೃಷ್ಟಿಕೋನದಿಂದ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿರುವ ಪ್ರಧಾನಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಲ್ಯಾಪಿಡ್ ಇಸ್ರೇಲ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಗಾಗಿ ಒಪ್ಪಂದಕ್ಕೆ ಬರಲು ಪ್ರಯತ್ನಗಳು ಸವಾಲುಗಳನ್ನು ಎದುರಿಸಿವೆ. ಗಾಜಾದ ನಾಗರಿಕ ಜನಸಂಖ್ಯೆಗೆ ಪರಿಸ್ಥಿತಿಗಳನ್ನು ಸರಾಗಗೊಳಿಸುವ ಇಸ್ರೇಲಿ ಸರ್ಕಾರದ ಪ್ರಯತ್ನಗಳು ನೆತನ್ಯಾಹು ಅವರ ಬಲಪಂಥೀಯ ಒಕ್ಕೂಟದಿಂದ ಟೀಕೆಗೆ ಒಳಗಾಗಿವೆ.

ಇಂಧನ ಟ್ಯಾಂಕರ್‌ಗಳನ್ನು ಗಾಜಾಕ್ಕೆ ಅನುಮತಿಸುವ ನಿರ್ಧಾರವನ್ನು ವಿತ್ತ ಸಚಿವ ಬೆಜಲೆಲ್ ಸ್ಮೊಟ್ರಿಚ್ ಟೀಕಿಸಿದ್ದಾರೆ. ಕೆಲವು ಕುಟುಂಬಗಳು ಇಸ್ರೇಲಿ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೇಸ್ಟಿನಿಯನ್ ಕೈದಿಗಳಿಗೆ ಒತ್ತೆಯಾಳುಗಳ ವಿನಿಮಯವನ್ನು ಪ್ರಸ್ತಾಪಿಸುವ ಒಪ್ಪಂದ ಪ್ರತಿಪಾದಿಸುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com