ಗಾಜಾದ ಅಲ್-ಶಿಫಾ ಆಸ್ಪತ್ರೆಯ ನಿರ್ದೇಶಕರನ್ನು ಇಸ್ರೇಲ್ ಬಂಧಿಸಿದೆ: ಆಸ್ಪತ್ರೆ ವೈದ್ಯ

ಗಾಜಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾದ ನಿರ್ದೇಶಕರು ಮತ್ತು ಇತರ ಹಲವಾರು ವೈದ್ಯಕೀಯ ಸಿಬ್ಬಂದಿಯನ್ನು ಇಸ್ರೇಲಿ ಪಡೆಗಳು ಗುರುವಾರ ಬಂಧಿಸಿವೆ ಎಂದು ಅಲ್-ಶಿಫಾ ಆಸ್ಪತ್ರೆಯ ವೈದ್ಯರೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ.
ಮೊಹಮ್ಮದ್ ಅಬು ಸಲ್ಮಿಯಾ
ಮೊಹಮ್ಮದ್ ಅಬು ಸಲ್ಮಿಯಾ

ಗಾಜಾ: ಗಾಜಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾದ ನಿರ್ದೇಶಕರು ಮತ್ತು ಇತರ ಹಲವಾರು ವೈದ್ಯಕೀಯ ಸಿಬ್ಬಂದಿಯನ್ನು ಇಸ್ರೇಲಿ ಪಡೆಗಳು ಗುರುವಾರ ಬಂಧಿಸಿವೆ ಎಂದು ಅಲ್-ಶಿಫಾ ಆಸ್ಪತ್ರೆಯ ವೈದ್ಯರೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ.

ಹಮಾಸ್ ಉಗ್ರರು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಇಸ್ರೇಲ್ ನ ಪ್ರತಿದಾಳಿಯ ಪ್ರಮುಖ ಕೇಂದ್ರವಾಗಿರುವ ಅಲ್-ಶಿಫಾ ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸಲ್ಮಿಯಾ ಅವರನ್ನು ಬಂಧಿಸಲಾಗಿದೆ.

ಕಳೆದ ವಾರ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಇಸ್ರೇಲಿ ಸೇನೆ, ಹಮಾಸ್ ಉಗ್ರರು ದಾಳಿ ನಡೆಸಲು ಗಾಜಾ ನಗರದ ಆಸ್ಪತ್ರೆಯ ಕೆಳಗಿರುವ ಸುರಂಗ ಸಂಕೀರ್ಣವನ್ನು ಬಳಸಿದ್ದಾರೆ ಎಂದು ಆರೋಪಿಸಿದೆ.

ಹಮಾಸ್ ಮತ್ತು ಆಸ್ಪತ್ರೆ ಅಧಿಕಾರಿಗಳು ಪದೇ ಪದೇ ಇಸ್ರೇಲ್ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ.

"ಆಸ್ಪತ್ರೆಯ ನಿರ್ದೇಶಕ ಡಾ. ಮೊಹಮ್ಮದ್ ಅಬು ಸಲ್ಮಿಯಾ ಅವರನ್ನು ಹಲವಾರು ಹಿರಿಯ ವೈದ್ಯರೊಂದಿಗೆ ಬಂಧಿಸಲಾಗಿದೆ" ಎಂದು ಆಸ್ಪತ್ರೆಯ ವಿಭಾಗವೊಂದರ ಮುಖ್ಯಸ್ಥ ಖಾಲಿದ್ ಅಬು ಸಮ್ರಾ ಅವರು ತಿಳಿಸಿದ್ದಾರೆ.

ಆಸ್ಪತ್ರೆಯ ನಿರ್ದೇಶಕರನ್ನು, ಒಬ್ಬ ವೈದ್ಯರನ್ನು ಮತ್ತು ಇಬ್ಬರು ದಾದಿಯರನ್ನು ಬಂಧಿಸಲಾಗಿದೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ.

ಸಲ್ಮಿಯಾ ಮತ್ತು ಅವರ ಸಹೋದ್ಯೋಗಿಗಳ ಬಂಧನವನ್ನು "ಬಲವಾಗಿ ಖಂಡಿಸುವುದಾಗಿ" ಹಮಾಸ್ ಹೇಳಿದ್ದು, ರೆಡ್‌ಕ್ರಾಸ್‌ನ ಅಂತರರಾಷ್ಟ್ರೀಯ ಸಮಿತಿ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು ಅವರ "ತಕ್ಷಣದ ಬಿಡುಗಡೆ"ಗೆ ಕೆಲಸ ಮಾಡಬೇಕು ಎಂದು ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com