ನೆಲ, ಸಮುದ್ರ ಮತ್ತು ವಾಯುಮಾರ್ಗ ಮೂಲಕ ಪ್ರವೇಶಿಸಿದ ಗಾಜಾ ಉಗ್ರರ ಜೊತೆ ಯುದ್ಧ: ಇಸ್ರೇಲ್ ಸೇನೆ

ಪ್ಯಾಲೆಸ್ತೀನ್ ಎನ್‌ಕ್ಲೇವ್‌ನಿಂದ ಇಸ್ರೇಲ್ ಮೇಲೆ ರಾಕೆಟ್‌ ದಾಳಿ ನಂತರ ಪ್ಯಾರಾಗ್ಲೈಡರ್‌ಗಳನ್ನು ಬಳಸಿ ಭೂಮಿ, ಸಮುದ್ರ ಮತ್ತು ವಾಯುಮಾರ್ಗದಲ್ಲಿ ಇಸ್ರೇಲ್‌ಗೆ ಪ್ರವೇಶಿಸಿದ ಗಾಜಾ ಉಗ್ರರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. 
ಅಕ್ಟೋಬರ್ 7 ರ ಶನಿವಾರದಂದು ಇಸ್ರೇಲ್‌ನ ಅಶ್ಕೆಲೋನ್‌ನಲ್ಲಿ ಗಾಜಾ ಪಟ್ಟಿಯಿಂದ ರಾಕೆಟ್ ದಾಳಿಯಲ್ಲಿ ಕಾರುಗಳು ಬೆಂಕಿಗಾಹುತಿಯಾಗಿವೆ
ಅಕ್ಟೋಬರ್ 7 ರ ಶನಿವಾರದಂದು ಇಸ್ರೇಲ್‌ನ ಅಶ್ಕೆಲೋನ್‌ನಲ್ಲಿ ಗಾಜಾ ಪಟ್ಟಿಯಿಂದ ರಾಕೆಟ್ ದಾಳಿಯಲ್ಲಿ ಕಾರುಗಳು ಬೆಂಕಿಗಾಹುತಿಯಾಗಿವೆ

ಜೆರುಸಲೇಂ: ಪ್ಯಾಲೆಸ್ತೀನ್ ಎನ್‌ಕ್ಲೇವ್‌ನಿಂದ ಇಸ್ರೇಲ್ ಮೇಲೆ ರಾಕೆಟ್‌ ದಾಳಿ ನಂತರ ಪ್ಯಾರಾಗ್ಲೈಡರ್‌ಗಳನ್ನು ಬಳಸಿ ಭೂಮಿ, ಸಮುದ್ರ ಮತ್ತು ವಾಯುಮಾರ್ಗದಲ್ಲಿ ಇಸ್ರೇಲ್‌ಗೆ ಪ್ರವೇಶಿಸಿದ ಗಾಜಾ ಉಗ್ರರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. 

"ಇದು ಪ್ಯಾರಾಗ್ಲೈಡರ್‌, ಸಮುದ್ರ ಮತ್ತು ನೆಲದ ಮೂಲಕ ನಡೆದ ಸಂಯೋಜಿತ ದಾಳಿಯಾಗಿದೆ ಎಂದು ಸೇನಾ ವಕ್ತಾರ ರಿಚರ್ಡ್ ಹೆಕ್ಟ್ ಸುದ್ದಿಗಾರರಿಗೆ ತಿಳಿಸಿದರು.

ಈಗ ನಾವು ಯುದ್ಧ ಮಾಡುತ್ತಿದ್ದೇವೆ.ಗಾಜಾ ಪಟ್ಟಿಯ ಸುತ್ತಲಿನ ಕೆಲವು ಸ್ಥಳಗಳಲ್ಲಿ ಹೋರಾಡುತ್ತಿದ್ದೇವೆ, ನಮ್ಮ ಪಡೆಗಳು ಈಗ ನೆಲದ ಮೇಲೆ ಹೋರಾಡುತ್ತಿವೆ ಎಂದು ಅವರು ಸೇನೆ ತಿಳಿಸಿದೆ. 

ಯುದ್ಧದಲ್ಲಿ ಇದುವರೆಗೆ ಹಲವು ಸಾವು ನೋವು ಉಂಟಾಗಿದ್ದರೂ ವಿವರಗಳು ಲಭ್ಯವಾಗಿಲ್ಲ. ಪ್ಯಾಲೇಸ್ತೀನ್  ಉಗ್ರಗಾಮಿಗಳು ಅನೇಕ ಇಸ್ರೇಲಿಯನ್ನರನ್ನು ಬಂಧಿಸಿದ್ದಾರೆ. ಹಾಗೆಯೇ ಉತ್ತರ ಇಸ್ರೇಲ್, ವೈರಿಗಳಾದ ಲೆಬನಾನ್ ಮತ್ತು ಸಿರಿಯಾ ಮತ್ತು ಆಕ್ರಮಿತ ವೆಸ್ಟ್ ಬ್ಯಾಂಕ್‌ಗೆ ಸಾವಿರಾರು ಮಿಲಿಟರಿಗಳನ್ನು ಕಳುಹಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತೀಯ ಸ್ಥಳೀಯ ಕಾಲಮಾನ ಇಂದು ಬೆಳಗ್ಗೆ ಸುಮಾರು 10:30 ಕ್ಕೆ ಗಾಜಾದಿಂದ ಕನಿಷ್ಠ 2,200 ರಾಕೆಟ್‌ಗಳನ್ನು ಹಾರಿಸಲಾಯಿತು, ಆದರೆ ಹಮಾಸ್ ಉಗ್ರಗಾಮಿಗಳು ಈ ಸಂಖ್ಯೆಯನ್ನು 5,000 ಕ್ಕಿಂತ ಹೆಚ್ಚು ಎಂದು ವಕ್ತಾರರು ತಿಳಿಸಿದ್ದಾರೆ.

ಹಮಾಸ್ ನಿಯಂತ್ರಣವನ್ನು ತೆಗೆದುಕೊಂಡ ನಂತರ ಇಸ್ರೇಲ್ 2007 ರಲ್ಲಿ ಗಾಜಾವನ್ನು ದುರ್ಬಲಗೊಳಿಸುವ ದಿಗ್ಬಂಧನವನ್ನು ವಿಧಿಸಿತು. ಅಲ್ಲಿಂದೀಚೆಗೆ ಅನೇಕ ಗಡಿಯಾಚೆಗಿನ ಯುದ್ಧಗಳು ನಡೆದಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com