ಟೆಲ್ ಅವಿವ್: ಗಾಜಾಪಟ್ಟಿಯ ಅಲ್ ಅಹಿಲ್ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಪ್ಯಾಲೆಸ್ತೇನ್ ಆರೋಪವನ್ನು ಇಸ್ರೇಲ್ ಸೇನೆ ನಿರಾಕರಿಸಿದೆ.
ಇದೇ ವೇಳೆ ಸ್ಫೋಟದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂಬ ಹಮಾಸ್ ನ ಆರೋಪದಲ್ಲಿನ ತಪ್ಪುಗಳನ್ನು ತೋರಿಸಿರುವ ಐಡಿಎಫ್ ನ ವಕ್ತಾರ ಲೆಫ್ಟಿನೆಂಟ್ ಕರ್ನಲ್ , ಜೊನಾಥನ್ ಕಾನ್ರಿಕಸ್, ಸ್ಫೋಟದ ಹಿಂದೆ ಇಸ್ಲಾಮಿಕ್ ಜಿಹಾದ್ ನ ಕೈವಾಡವಿದೆ ಎಂಬ ಇಸ್ರೇಲ್ ಪ್ರಧಾನಿಯ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರಾಥಮಿಕ ವಿಶ್ಲೇಷಣೆಗಳ ಪ್ರಕಾರ ರಾಕೆಟ್ ಕಾರು ನಿಲ್ದಾಣದಲ್ಲಿ ಸ್ಫೋಟಗೊಂಡಿದ್ದು, ಯಾರೂ ಸಾವನ್ನಪ್ಪಿರುವ ಸಾಧ್ಯತೆಗಳಿಲ್ಲ ಎಂದು ಹೇಳಿದ್ದಾರೆ.
"ಈ ಪ್ರದೇಶವು ಸಾಕಷ್ಟು ಕಪ್ಪು ಬಣ್ಣದ್ದಾಗಿದೆ ಎಂದು ನಾವು ನೋಡಬಹುದು, ಇಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ ಎಂದು ತೋರುತ್ತದೆ. ಇದು ನಿಜವಾಗಿಯೂ ರಾಕೆಟ್ ಪ್ರಭಾವ ಬೀರಿದ ಕೇಂದ್ರವಾಗಿದೆ, ರಾಕೆಟ್‌ನ ಪ್ರಭಾವದ ಬಿಂದುವಾಗಿದ್ದು. ರಾಕೆಟ್‌ನಿಂದ ಪರಿಣಾಮ ಉಂಟಾದ ಸುಮಾರು 15 ಕಾರುಗಳು ಇಲ್ಲಿವೆ ಎಂಬುದು ಕಾಣುತ್ತಿದೆ. ಬೆಂಕಿಯ ಅವಶೇಷಗಳು ಕಾಣುತ್ತಿವೆ. ಆದರೆ ಶವಗಳು ಕಾಣುತ್ತಿಲ್ಲ ಎಂದು ಹೇಳಿದ್ದಾರೆ
ಇದೇ ವೇಳೆ ನೂರಾರು ಜನ ಸಾವನ್ನಪ್ಪಿದ್ದಾರೆ ಎಂಬ ಹಮಾಸ್ ಆರೋಗ್ಯ ಸಚಿವರ ಹೇಳಿಕೆಯನ್ನು ಪ್ರಶ್ನಿಸಿರುವ ಐಡಿಎಫ್, "ನಿಜವಾಗಿಯೂ ಇಲ್ಲಿ 500 ಮಂದಿ ಕೊಲ್ಲಲ್ಪಟ್ಟಿದ್ದರೆ ಅಥವಾ 471 ಜನರು ಸಾವನ್ನಪ್ಪಿದ್ದಾರೆ ಎಂಬುದು ಗಾಜಾದಲ್ಲಿ ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯದ ಇತ್ತೀಚಿನ ಅಪ್‌ಡೇಟ್ ಆಗಿದ್ದರೆ, ಎಲ್ಲಾ ದೇಹಗಳು ಎಲ್ಲಿವೆ...? ಇಷ್ಟು ಜನರು ಕೊಲ್ಲಲ್ಪಟ್ಟರು, ದೇಹಗಳು ಎಲ್ಲಿವೆ" ಎಂದು ಲೆಫ್ಟಿನೆಂಟ್ ಕರ್ನಲ್ ಕಾನ್ರಿಕಸ್ ಪ್ರಶ್ನಿಸಿದ್ದಾರೆ.
Advertisement