24 ಗಂಟೆಗಳಲ್ಲಿ 400 ಭಯೋತ್ಪಾದಕರ ಟಾರ್ಗೆಟ್ ಗಳ ಮೇಲೆ ದಾಳಿ: ಐಡಿಎಫ್

ಹಮಾಸ್ ನೊಂದಿಗಿನ ಸಂಘರ್ಷದ ನಡುವೆಯೇ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) 24 ಗಂಟೆಗಳಲ್ಲಿ 400 ಕ್ಕೂ ಹೆಚ್ಚಿನ ಭಯೋತ್ಪಾದಕರ ಟಾರ್ಗೆಟ್ ಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದೆ. 
ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ
ಗಾಜಾಪಟ್ಟಿ ವಶಕ್ಕೆ ಇಸ್ರೇಲ್ ಸೇನೆಗೆ ಆದೇಶ

ನವದೆಹಲಿ: ಹಮಾಸ್ ನೊಂದಿಗಿನ ಸಂಘರ್ಷದ ನಡುವೆಯೇ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) 24 ಗಂಟೆಗಳಲ್ಲಿ 400 ಕ್ಕೂ ಹೆಚ್ಚಿನ ಭಯೋತ್ಪಾದಕರ ಟಾರ್ಗೆಟ್ ಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದೆ. 

ಮುಗ್ಧ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. 

ಈ ಬಗ್ಗೆ ಇಸ್ರೇಲ್ ಸೇನೆ ಟ್ವೀಟ್ ಮಾಡಿದ್ದು, ಹಮಾಸ್ ಭಯೋತ್ಪಾದಕರ ಸಾಮರ್ಥ್ಯ ಕುಗ್ಗಿಸುವ ನಿಟ್ಟಿನಲ್ಲಿ, 400 ಕ್ಕೂ ಹೆಚ್ಚಿನ ಭಯೋತ್ಪಾದಕ ತಾಣಗಳ ಮೇಲೆ 24 ಗಂಟೆಗಳಲ್ಲಿ ದಾಳಿ ನಡೆಸಲಾಗಿದೆ. ಹಮಾಸ್ ನ ಗನ್ ಮ್ಯಾನ್ ಗಳು ಇಸ್ರೇಲ್ ಕಡೆಗೆ ರಾಕೆಟ್ ಗಳನ್ನು ತಿರುಗಿಸಿದ್ದಾರೆ. ಸಮುದ್ರದ ಮೂಲಕ ಇಸ್ರೇಲ್ ಒಳಗೆ ನುಗ್ಗಲು ಹಮಾಸ್ ನ ಕಾರ್ಯನಿರ್ವಹಣೆಯಲ್ಲಿರುವ ಟನಲ್ ಶಾಫ್ಟ್ ಗಳು ಭಯೋತ್ಪಾದಕರಿಗೆ ಅವಕಾಶ ನೀಡುತ್ತಿದೆ. ಹಮಾಸ್ ಕಮಾಂಡ್ ಸೆಂಟರ್‌ಗಳನ್ನು ಕಾರ್ಯಕರ್ತರು ಬಳಸುತ್ತಾರೆ ಮತ್ತು ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುತ್ತಾರೆ. ಅಮಾಯಕ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು  ಐಡಿಎಫ್ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ ಎಂದು ಇಸ್ರೇಲ್ ಹೇಳಿದೆ.

ಏತನ್ಮಧ್ಯೆ, ಐಡಿಎಫ್ ಚೀಫ್ ಆಫ್ ಸ್ಟಾಫ್, ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಮಾತನಾಡಿ, ಇಸ್ರೇಲ್, ಹಮಾಸ್ ನ್ನು "ಸಂಪೂರ್ಣ ನಾಶವಾಗುವ" ಸ್ಥಿತಿಗೆ ತರಲು ಬಯಸುತ್ತದೆ ಎಂದು ಹೇಳಿದರು. ದಕ್ಷಿಣದಲ್ಲಿ ಕಾರ್ಯಾಚರಣೆಗೆ ಇಸ್ರೇಲ್ ಚೆನ್ನಾಗಿ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com