ಇಸ್ರೇಲ್ ಗೆ ಶಸ್ತ್ರಾಸ್ತ್ರ ನಿರ್ಬಂಧ ವಿಧಿಸುವ ಒತ್ತಾಯ ಪರಿಗಣಿಸಲಿರುವ ವಿಶ್ವಸಂಸ್ಥೆ!

ಗಾಜಾದಲ್ಲಿ ನರಮೇಧ ನಡೆಯುವ ಅಪಾಯ ಇರುವುದನ್ನು ಉಲ್ಲೇಖಿಸಿ ಇಸ್ರೇಲ್ ಗೆ ಶಸ್ತ್ರಾಸ್ತ್ರ ನಿರ್ಬಂಧ (ನಿಷೇಧ) ವಿಧಿಸುವ ಕರಡು ನಿರ್ಣಯವನ್ನು ಪರಿಗಣಿಸಲು ವಿಶ್ವಸಂಸ್ಥೆ ಮಾನವ ಹಕ್ಕುಗಳ ಪರಿಷತ್ ಮುಂದಾಗಿದೆ.
ಇಸ್ರೇಲ್ ನಿಂದ ಪ್ರತಿದಾಳಿ
ಇಸ್ರೇಲ್ ನಿಂದ ಪ್ರತಿದಾಳಿ

ವಿಶ್ವಸಂಸ್ಥೆ: ಗಾಜಾದಲ್ಲಿ ನರಮೇಧ ನಡೆಯುವ ಅಪಾಯ ಇರುವುದನ್ನು ಉಲ್ಲೇಖಿಸಿ ಇಸ್ರೇಲ್ ಗೆ ಶಸ್ತ್ರಾಸ್ತ್ರ ನಿರ್ಬಂಧ (ನಿಷೇಧ) ವಿಧಿಸುವ ಕರಡು ನಿರ್ಣಯವನ್ನು ಪರಿಗಣಿಸಲು ವಿಶ್ವಸಂಸ್ಥೆ ಮಾನವ ಹಕ್ಕುಗಳ ಪರಿಷತ್ ಮುಂದಾಗಿದೆ. ಈ ಕರಡು ನಿರ್ಣಯವನ್ನು ಅಂಗೀಕರಿಸಿದ್ದೇ ಆದಲ್ಲಿ, ವಿಶ್ವಸಂಸ್ಥೆಯಲ್ಲಿನ ಹಕ್ಕುಗಳ ಸಂಸ್ಥೆ ಗಾಜಾದಲ್ಲಿನ ಯುದ್ಧದ ಬಗ್ಗೆ ಇದೇ ಮೊದಲ ಬಾರಿಗೆ ನಿಲುವು ತೆಗೆದುಕೊಂಡಂತಾಗುತ್ತದೆ.

ಗಾಜಾದ ಜನನಿಬಿಡ ಪ್ರದೇಶಗಳಲ್ಲಿ "ಇಸ್ರೇಲ್‌ನಿಂದ ವ್ಯಾಪಕ-ಪ್ರದೇಶದ ಪರಿಣಾಮಗಳೊಂದಿಗೆ ಸ್ಫೋಟಕ ಶಸ್ತ್ರಾಸ್ತ್ರಗಳ ಬಳಕೆಯನ್ನು" ಕರಡು ನಿರ್ಣಯ ಖಂಡಿಸಿದೆ ಮತ್ತು ಇಸ್ರೇಲ್ "ಜನಾಂಗೀಯ ಹತ್ಯೆಯನ್ನು ತಡೆಗಟ್ಟುವ ತನ್ನ ಕಾನೂನು ಜವಾಬ್ದಾರಿಯನ್ನು ಎತ್ತಿಹಿಡಿಯುತ್ತದೆ" ಎಂದು ಹೇಳಿದೆ.

ಇಸ್ರೇಲ್ ನಿಂದ ಪ್ರತಿದಾಳಿ
ಗಾಜಾದಲ್ಲಿ ಕದನ ವಿರಾಮಕ್ಕೆ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಆಗ್ರಹ: UN ನಡೆಗೆ ಹಮಾಸ್ ಸ್ವಾಗತ!

ಅಲ್ಬೇನಿಯಾ ಹೊರತುಪಡಿಸಿ ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ (OIC) 56 UN ಸದಸ್ಯ ರಾಷ್ಟ್ರಗಳ 55 ಪರವಾಗಿ ಪಾಕಿಸ್ತಾನ ಕರಡು ನಿರ್ಣಯವನ್ನು ಮುಂದಿಟ್ಟಿದೆ. ಈ ಕರಡು ನಿರ್ಣಯವನ್ನು ಬೊಲಿವಿಯಾ, ಕ್ಯೂಬಾ ಮತ್ತು ಜಿನೀವಾದಲ್ಲಿ ಪ್ಯಾಲೇಸ್ಟಿನಿಯನ್ ಮಿಷನ್ ಸಹ ಪ್ರಾಯೋಜಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com