ಹಮಾಸ್ ನಾಯಕನ 3 ಮಕ್ಕಳು ಇಸ್ರೇಲ್ ದಾಳಿಗೆ ಬಲಿ!

ಇಸ್ರೇಲ್ ದಾಳಿಗೆ ಹಮಾಸ್ ನ ನಾಯಕನ 3 ಮಕ್ಕಳು ಸಾವನ್ನಪ್ಪಿದ್ದಾರೆ.
ಇಸ್ಮೈಲ್ ಹನಿಯೆಹ್
ಇಸ್ಮೈಲ್ ಹನಿಯೆಹ್ online desk

ಗಾಜಾ: ಇಸ್ರೇಲ್ ದಾಳಿಗೆ ಹಮಾಸ್ ನ ನಾಯಕನ 3 ಮಕ್ಕಳು ಸಾವನ್ನಪ್ಪಿದ್ದಾರೆ. ಇಸ್ಮೈಲ್ ಹನಿಯೆಹ್ ಎಂಬಾತನ ಮಕ್ಕಳು ಸೇನಾ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಐಡಿಎಫ್ ಹೇಳಿದೆ.

ಅಮಿರ್ ಹನಿಯೆಹ್ (ಹಮಾಸ್ ನ ಸೆಲ್ ಕಮಾಂಡರ್) ಮೊಹಮ್ಮದ್ ಹಾಗೂ ಹಜೀಮ್ ಹನಿಯೆಹ್ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟವರಾಗಿದ್ದಾರೆ.

ಹನಿಯೆಹ್ ನ ನಾಲ್ವರು ಮೊಮ್ಮಕ್ಕಳೂ ಸಹ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಐಡಿಎಫ್ ಹೇಳಿದೆ. ಇಸ್ರೇಲ್ ರಕ್ಷಣಾ ಪಡೆ ಈದ್ ನ ಮೊದಲ ದಿನದಂದು ಶತಿ ನಿರಾಶ್ರಿತರ ಕ್ಯಾಂಪ್ ಮೇಲೆ ಸೇನಾ ದಾಳಿ ನಡೆಸಿತ್ತು. ಏತನ್ಮಧ್ಯೆ, ಇಸ್ರೇಲಿ ಸೈನ್ಯದಿಂದ ತಮ್ಮ ಕುಟುಂಬಗಳನ್ನು ಗುರಿಯಾಗಿಸಿಕೊಂಡರೆ ಪ್ಯಾಲೆಸ್ತೀನ್ ನಾಯಕರು ಹಿಂದೆ ಸರಿಯುವುದಿಲ್ಲ ಮತ್ತು ಕದನ ವಿರಾಮದ ಮಾತುಕತೆಗಳಲ್ಲಿ ಹಮಾಸ್‌ನ ಬೇಡಿಕೆಗಳ ಮೇಲೆ ಹತ್ಯೆಗಳು ಪರಿಣಾಮ ಬೀರುವುದಿಲ್ಲ ಎಂದು ಹನಿಯೆಹ್ ಅಲ್ ಜಜೀರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇಸ್ಮೈಲ್ ಹನಿಯೆಹ್
ಗಾಜಾ-ಇಸ್ರೇಲ್ ಬಿಕ್ಕಟ್ಟು ತೀವ್ರ: ಪ್ಯಾಲೆಸ್ಟೀನ್‌ಗೆ ಅನುದಾನ ಕಡಿತ ಮಾಡದಂತೆ ವಿಶ್ವಸಂಸ್ಥೆ ಮನವಿ

ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ, ಹನಿಯೆಹ್ ತನ್ನ ಮಕ್ಕಳಾದ ಹಝೆಮ್, ಅಮೀರ್ ಮತ್ತು ಮೊಹಮ್ಮದ್ ಮತ್ತು ತನ್ನ ಹಲವಾರು ಮೊಮ್ಮಕ್ಕಳನ್ನು ಬುಧವಾರ ಕೊಂದಿದ್ದಾರೆ ಎಂದು ದೃಢಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com