ಸ್ಫೋಟಕಗಳೊಂದಿಗೆ ಆಗಮಿಸಿದ್ದ ಶಂಕಿತ: ಪ್ಯಾರಿಸ್ ನಲ್ಲಿನ ಇರಾನ್ ರಾಯಭಾರ ಕಚೇರಿಗೆ ಪೊಲೀಸ್ ನಿರ್ಬಂಧ!

ಪ್ಯಾರಿಸ್ ನಲ್ಲಿರುವ ಇರಾನ್ ರಾಯಭಾರ ಕಚೇರಿಗೆ ವ್ಯಕ್ತಿಯೋರ್ವ ಸ್ಫೋಟಕಗಳೊಂದಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಕಚೇರಿಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.
ಇರಾನ್ ರಾಯಭಾರ ಕಚೇರಿ ಇರುವ ಸ್ಥಳ
ಇರಾನ್ ರಾಯಭಾರ ಕಚೇರಿ ಇರುವ ಸ್ಥಳonline desk

ನವದೆಹಲಿ: ಪ್ಯಾರಿಸ್ ನಲ್ಲಿರುವ ಇರಾನ್ ರಾಯಭಾರ ಕಚೇರಿಗೆ ವ್ಯಕ್ತಿಯೋರ್ವ ಸ್ಫೋಟಕಗಳೊಂದಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಕಚೇರಿಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

ವ್ಯಕ್ತಿಯೋರ್ವ ಗ್ರೆನೇಡ್ ಅಥವಾ ಸ್ಫೋಟಕ ಬೆಲ್ಟ್ ನೊಂದಿಗೆ ರಾಯಭಾರ ಕಚೇರಿಗೆ ಪ್ರವೇಶಿಸಿದ್ದ ಸಾಕ್ಷಿ ಲಭ್ಯವಾಗಿದೆ. ರಾಯಭಾರ ಕಚೇರಿಯಿಂದ ಮನವಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಕಾವಲು ನಿಯೋಜಿಸಲಾಗಿದೆ.

ಇರಾನ್ ರಾಯಭಾರ ಕಚೇರಿ ಇರುವ ಸ್ಥಳ
ಹಲವು ಡ್ರೋನ್ ಗಳನ್ನು ಹೊಡೆದು ಉರುಳಿಸಿದ ಇರಾನ್, ಇಸ್ರೇಲ್ ಮೇಲೆ ಅಮೇರಿಕಾ ಶಂಕೆ!

ರಾಜಧಾನಿಯ 16 ನೇ ಜಿಲ್ಲೆಯಲ್ಲಿರುವ ದೂತವಾಸ ಕಚೇರಿಯ ಸುತ್ತಮುತ್ತಲ ಪ್ರದೇಶದ ಸುತ್ತ ಮುತ್ತ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ದೂತವಾಸ ಕಚೇರಿಗೆ ಸಂಪರ್ಕ ಕಲ್ಪಿಸುವ ಎರಡು ಮೆಟ್ರೋ ಮಾರ್ಗಗಳಲ್ಲಿ ಸಂಚಾರವನ್ನೂ ಸಹ ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಸ್ಫೋಟಕಗಳನ್ನು ಕೊಂಡೊಯ್ದ ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com