ಇರಾನ್
ಇರಾನ್online desk

ಹಲವು ಡ್ರೋನ್ ಗಳನ್ನು ಹೊಡೆದು ಉರುಳಿಸಿದ ಇರಾನ್, ಇಸ್ರೇಲ್ ಮೇಲೆ ಅಮೇರಿಕಾ ಶಂಕೆ!

ಮಧ್ಯಪ್ರಾಚ್ಯ ಮತ್ತೊಮ್ಮೆ ಯುದ್ಧಗ್ರಸ್ತವಾಗಿದ್ದು, ಇಸ್ರೇಲ್ ನಿಂದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯ ಸಾಧ್ಯತೆಯ ಹಿನ್ನೆಲೆಯಲ್ಲಿ ಇರಾನ್ ಇಂದು ಬೆಳಿಗ್ಗೆ ತನ್ನ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ.

ಇರಾನ್: ಮಧ್ಯಪ್ರಾಚ್ಯ ಮತ್ತೊಮ್ಮೆ ಯುದ್ಧಗ್ರಸ್ತವಾಗಿದ್ದು, ಇಸ್ರೇಲ್ ನಿಂದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯ ಸಾಧ್ಯತೆಯ ಹಿನ್ನೆಲೆಯಲ್ಲಿ ಇರಾನ್ ಇಂದು ಬೆಳಿಗ್ಗೆ ತನ್ನ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ.

ಎಬಿಸಿ ನ್ಯೂಸ್ ಪ್ರಕಾರ ಇಸ್ರೇಲ್ ಇರಾನ್ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಸ್ಫಹಾನ್ ನಲ್ಲಿ ಬೃಹತ್ ಸ್ಫೋಟದ ಶಬ್ದ ಕೇಳಿಬಂದಿದೆ. ಇದೇ ವೇಳೆ ಇಸ್ರೇಲ್ ತನ್ನ ಮೇಲೆ ನಡೆದ ದಾಳಿಗೆ ಪ್ರತಿದಾಳಿಯನ್ನು ನಡೆಸಿದೆ ಎಂದು ಅಮೇರಿಕ ಮಾಧ್ಯಮ ವರದಿ ಪ್ರಕಟಿಸಿದೆ.

ಇರಾನ್ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಹಲವಾರು ನಗರಗಳಲ್ಲಿ ಸಕ್ರಿಯಗೊಳಿಸಿದೆ ಎಂದು ದೇಶದ ಅಧಿಕೃತ ಪ್ರಸಾರಕರು ಹೇಳಿದ ನಂತರ, ಕೇಂದ್ರ ನಗರವಾದ ಇಸ್ಫಹಾನ್ ಬಳಿ ಸ್ಫೋಟಗಳು ಕೇಳಿಬಂದವು ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಇರಾನ್
ಇರಾನ್ ಸೀಜ್ ಮಾಡಿದ ಹಡಗಿನಲ್ಲಿದ್ದ 17 ಭಾರತೀಯ ಸಿಬ್ಬಂದಿ: ತಾಯ್ನಾಡಿಗೆ ಮರಳಿದ ಕೇರಳದ ಏಕೈಕ ಮಹಿಳೆ

ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿದ್ದರೂ, ತಾನು ಹಲವಾರು ಡ್ರೋನ್‌ಗಳನ್ನು ಹೊಡೆದುರುಳಿಸಿದ್ದು, ಸದ್ಯಕ್ಕೆ ಯಾವುದೇ ಕ್ಷಿಪಣಿ ದಾಳಿ ನಡೆದಿಲ್ಲ" ಎಂದು ಇರಾನ್ ಹೇಳಿದೆ. ಇರಾನ್‌ನಲ್ಲಿ ಸ್ಫೋಟಗಳ ವರದಿಗಳ ನಂತರ 'ಈ ಸಮಯದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

Related Stories

No stories found.

Advertisement

X
Kannada Prabha
www.kannadaprabha.com