Japan military chopper crash: ಪೆಸಿಫಿಕ್ ಸಾಗರದಲ್ಲಿ ಜಪಾನ್ ಸೇನಾ ಕಾಪ್ಟರ್ ಗಳ ಅಪಘಾತ; ಓರ್ವ ಸಾವು, 7 ಮಂದಿ ನಾಪತ್ತೆ!

ಜಪಾನ್ ಸೇನಾ ಕಾಪ್ಟರ್ ಗಳು ತರಬೇತಿ ಫೆಸಿಫಿಕ್ ಮಹಾಸಾಗರದಲ್ಲಿ ಪತನವಾಗಿದ್ದು, ಕಾಪ್ಟರ್ ಗಳಲ್ಲಿದ್ದವರ ಪೈಕಿ ಓರ್ವ ಸಾವನ್ನಪ್ಪಿದ್ದರೆ, 7 ಮಂದಿ ನಾಪತ್ತೆಯಾಗಿದ್ದಾರೆ.
ಜಪಾನ್ ಸೇನಾ ಕಾಪ್ಟರ್ ಗಳ ಅಪಘಾತ
ಜಪಾನ್ ಸೇನಾ ಕಾಪ್ಟರ್ ಗಳ ಅಪಘಾತ

ಟೋಕಿಯೋ: ಜಪಾನ್ ಸೇನಾ ಕಾಪ್ಟರ್ ಗಳು ತರಬೇತಿ ಫೆಸಿಫಿಕ್ ಮಹಾಸಾಗರದಲ್ಲಿ ಪತನವಾಗಿದ್ದು, ಕಾಪ್ಟರ್ ಗಳಲ್ಲಿದ್ದವರ ಪೈಕಿ ಓರ್ವ ಸಾವನ್ನಪ್ಪಿದ್ದರೆ, 7 ಮಂದಿ ನಾಪತ್ತೆಯಾಗಿದ್ದಾರೆ.

ಫೆಸಿಫಿಕ್ ಮಹಾಸಾಗರದಲ್ಲಿ ನಡೆಯುತ್ತಿದ್ದ ಸೇನಾ ತರಬೇತಿ ವೇಳೆ ಈ ಅಪಘಾತ ಸಂಭವಿಸಿದ್ದು, ಜಪಾನಿನ ಎರಡು ಸಮುದ್ರಯಾನ ಸ್ವ-ರಕ್ಷಣಾ ಪಡೆ ಹೆಲಿಕಾಪ್ಟರ್‌ಗಳು ಪರಸ್ಪರ ಢಿಕ್ಕಿಯಾಗಿ ಪತನಗೊಂಡಿದೆ. ಈ ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ರಕ್ಷಣಾ ಸಚಿವರನ್ನು ಉಲ್ಲೇಖಿಸಿ ಕ್ಯೋಡೋ ನ್ಯೂಸ್ ವರದಿ ಮಾಡಿದೆ.

ಜಪಾನ್ ಸೇನಾ ಕಾಪ್ಟರ್ ಗಳ ಅಪಘಾತ
65 ಯುದ್ಧ ಕೈದಿಗಳಿದ್ದ ರಷ್ಯಾ ಸೇನಾ ವಿಮಾನ ಉಕ್ರೇನ್ ಗಡಿಯಲ್ಲಿ ಪತನ

ಫೆಸಿಫಿಕ್ ಮಹಾಸಾಗರದಲ್ಲಿ ರಾತ್ರಿ ಜಲಾಂತರ್ಗಾಮಿ ವಿರೋಧಿ ಡ್ರಿಲ್‌ನಲ್ಲಿ ಇಜು ದ್ವೀಪ ಸಮೂಹದಲ್ಲಿ ತೋರಿಶಿಮಾ ದ್ವೀಪದಿಂದ ಪೂರ್ವಕ್ಕೆ 270 ಕಿಲೋಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದ Izu ದ್ವೀಪ ಸರಪಳಿಯು ಟೋಕಿಯೊದ ದಕ್ಷಿಣದಲ್ಲಿದೆ. ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಜಪಾನ್‌ನ ರಕ್ಷಣಾ ಸಚಿವ ಮಿನೋರು ಕಿಹರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎರಡು ಫ್ಲೈಟ್ ರೆಕಾರ್ಡರ್‌ಗಳು "ಅತ್ಯಂತ ಹತ್ತಿರದ ಸ್ಥಳಗಳಲ್ಲಿ" ಕಂಡುಬಂದಿವೆ. ಅಪಘಾತದ ನಂತರದ ಹುಡುಕಾಟದ ಸಮಯದಲ್ಲಿ ಇತರ ವಿಮಾನದ ಅವಶೇಷಗಳು ಸಹ ಕಂಡುಬಂದಿವೆ. ಘಟನೆಯ ನಂತರ, SH-60K ಹೆಲಿಕಾಪ್ಟರ್‌ಗಳನ್ನು ಒಳಗೊಂಡಿರುವ MSDF ತರಬೇತಿಯನ್ನು ಅಮಾನತುಗೊಳಿಸಲಾಗಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com