Maldives Election: ಭಾರತ ವಿರೋಧಿ ನಿಲುವಿನ ಮಹಮದ್ ಮುಯಿಜುಗೆ ಬಹುಮತ, ಮತ್ತೆ ಅಧಿಕಾರಕ್ಕೆ!

ಭಾರತ ವಿರೋಧಿ ಮನಸ್ಥಿತಿಯ ಅಧ್ಯಕ್ಷ ಮೊಹಮ್ಮದ್‌ ಮುಯಿಜು (Mohamed Muizzu) ಮಾಲ್ಡೀವ್ಸ್‌ನಲ್ಲಿ ನಡೆದ ಚುನಾವಣೆಯಲ್ಲಿ (Maldives Election) ಭಾರಿ ಬಹುಮತದಲ್ಲಿ ಆರಿಸಿ ಬಂದಿದ್ದು, ಮತ್ತೆ ಸರ್ಕಾರ ರಚನೆ ಮಾಡಲಿದ್ದಾರೆ.
President Muizzu wins parliamentary election
ಮಹಮದ್ ಮುಯಿಜು
Updated on

ಮಾಲೆ: ಭಾರತ ವಿರೋಧಿ ಮನಸ್ಥಿತಿಯ ಅಧ್ಯಕ್ಷ ಮೊಹಮ್ಮದ್‌ ಮುಯಿಜು (Mohamed Muizzu) ಮಾಲ್ಡೀವ್ಸ್‌ನಲ್ಲಿ ನಡೆದ ಚುನಾವಣೆಯಲ್ಲಿ (Maldives Election) ಭಾರಿ ಬಹುಮತದಲ್ಲಿ ಆರಿಸಿ ಬಂದಿದ್ದು, ಮತ್ತೆ ಸರ್ಕಾರ ರಚನೆ ಮಾಡಲಿದ್ದಾರೆ.

ಮಾಲ್ಡೀವ್ಸ್‌ನ ಸಂಸತ್ತಿಗೆ (ಮಜ್ಲಿಸ್) ನಡೆದ ಚುನಾವಣೆಯಲ್ಲಿ ಚೀನಾ ಪರ (Pro China) ಆಡಳಿತ ನೀಡುತ್ತಿರುವ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಪಕ್ಷ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.

ಆಡಳಿತ ಪಕ್ಷವಾಗಿರುವ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಮಾಲ್ಡೀವ್ಸ್‌ನ 93 ಸ್ಥಾನಗಳ ಪೈಕಿ 86ರಲ್ಲಿ ಸ್ಪರ್ಧಿಸಿತ್ತು. ಇದೀಗ ಫಲಿತಾಂಶ ಪ್ರಕಟ ಬಳಿಕ ಮಾಲ್ಡೀವ್ಸ್ ಸಂಸತ್ತಿನಲ್ಲಿ PNC ಬಹುಮತವನ್ನು ಪಡೆದುಕೊಂಡಿದೆ.

President Muizzu wins parliamentary election
ಮಾಲ್ಡೀವ್ಸ್ ಸಂಸತ್ ಚುನಾವಣೆ: ಚೀನಾ ಬೆಂಬಲಿತ ಮುಯಿಝಗೆ ಭರ್ಜರಿ ಗೆಲುವು, ಭಾರತದ ಪರ MDPಗೆ ಹೀನಾಯ ಸೋಲು!

ಮೂಲಗಳ ಪ್ರಕಾರ 86 ಸ್ಥಾನಗಳ ಪೈಕಿ ಪಿಎನ್‌ಸಿ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಕೇವಲ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸ್ವತಂತ್ರ ಅಭ್ಯರ್ಥಿಗಳು 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಾಲ್ಡೀವ್ಸ್ ಡೆವಲಪ್ಮೆಂಟ್ ಅಲಯನ್ಸ್ ಎರಡು ಸ್ಥಾನಗಳಲ್ಲಿ ಗೆಲುವು ಪಡೆದಿದೆ.

ಮುಯಿಜುಗೆ ಅನಿವಾರ್ಯವಾಗಿದ್ದ ಗೆಲುವು

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಪಕ್ಷ ನಾಯಕ ಮೊಹಮ್ಮದ್‌ ಸೋಲಿಹ್ ಅವರನ್ನು ಸೋಲಿಸುವ ಮೂಲಕ ಮುಯಿಝು ಅಧ್ಯಕ್ಷರಾದರು. ಸೊಲಿಹ್ ಅವರ ಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು ಪ್ರಸ್ತುತ ಸಂಸತ್ತಿನಲ್ಲಿ ಬಹುಮತವನ್ನು ಹೊಂದಿತ್ತು.

ಇದು ಮುಯಿಜುಗೆ ಹೊಸ ವಿಧೇಯಕಗಳನ್ನು ತರಲು ಅಡ್ಡಿಯುಂಟುಮಾಡಿತ್ತು. ಚೀನಾ ಪರವಾದ ಹೊಸ ಕಾನೂನುಗಳನ್ನು ಮಾಡಲು ಹಾಲಿ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಪಕ್ಷಕ್ಕೆ ಸಂಸತ್ತಿನ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು. ಇದೀಗ ನಿರೀಕ್ಷೆಯಂತೆಯೇ ಮುಯಿಜು ಜಯಭೇರಿ ಭಾರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com