ಈ ದೇಶದಲ್ಲಿ WhatsApp, Instagram, TikTok ಮತ್ತು YouTube ಗೆ ನಿಷೇಧ! ಕಾರಣ...

ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಬಾಂಗ್ಲಾದೇಶ ಸರ್ಕಾರ ಈ ದಿಟ್ಟ ಕ್ರಮ ಕೈಗೊಂಡಿದೆ.
Social Media Apps Banned in This Country
ಬಾಂಗ್ಲಾದೇಶದಲ್ಲಿ ಸಾಮಾಜಿಕ ಜಾಲತಾಣಗಳ ನಿಷೇಧ
Updated on

ಢಾಕಾ: WhatsApp, Instagram, TikTok, and YouTube ಆಧುನಿಕ ಜಗತ್ತಿನ ಯುವಕರ ಅಚ್ಚಮೆಚ್ಚಿನ ಸಾಮಾಜಿಕ ಜಾಲತಾಣಗಳು.. ಆದರೆ ಇವುಗಳನ್ನು ಒಂದು ದೇಶ ಇದೀಗ ಸಂಪೂರ್ಣವಾಗಿ ನಿಷೇಧಿಸಿದೆ..

ಹೌದು.. ಅಚ್ಚರಿಯಾದರೂ ಸತ್ಯ...ನೆರೆಯ ಬಾಂಗ್ಲಾದೇಶ ಸರ್ಕಾರ ಇದೀಗ ಖ್ಯಾತ ಸಾಮಾಜಿಕ ಜಾಲತಾಣಗಳಾದ WhatsApp, Instagram, TikTok, and YouTubeಗಳನ್ನು ನಿಷೇಧಿಸಿದೆ. ಪ್ರಸ್ತುತ ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಬಾಂಗ್ಲಾದೇಶ ಸರ್ಕಾರ ಈ ದಿಟ್ಟ ಕ್ರಮ ಕೈಗೊಂಡಿದೆ.

ಯುವಕರ ಹೋರಾಟ ಮತ್ತು ಪ್ರತಿಭಟನೆಗಳ ವಿಚಾರಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಮತ್ತಷ್ಟು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂಬ ಆರೋಪದ ಮೇರೆಗೆ ಸರ್ಕಾರದ ಇದೀಗ WhatsApp, Instagram, TikTok ಮತ್ತು YouTube ಸೇರಿದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಿದೆ.

ಈ ಸರ್ಕಾರದ ಕ್ರಮವು ತನ್ನ ನಾಗರಿಕರನ್ನು ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಬಳಸದಂತೆ ನಿರ್ಬಂಧಿಸಿದ್ದು, ಈ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಿಗೆ ಪ್ರವೇಶ ನಿರ್ಬಂಧವು ಬಾಂಗ್ಲಾದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಟರ್ಕಿಯಿಂದ ಸ್ಪೂರ್ತಿ

ಇನ್ನು ಬಾಂಗ್ಲಾದೇಶದ ಸರ್ಕಾರದ ಈ ಕ್ರಮದ ಹಿಂದೆ ಟರ್ಕಿ ಕೈಗೊಂಡ ನಿರ್ಧಾರಗಳಿವೆ ಎನ್ನಲಾಗಿದೆ. ಈ ಹಿಂದೆ ಟರ್ಕಿ ದೇಶದಲ್ಲೂ ಪ್ರತಿಭಟನೆ ಮತ್ತು ಹಿಂಸಾಚಾರ ಭುಗಿಲೆದ್ದಾಗ ಅಲ್ಲಿನ ಸರ್ಕಾರ ಕೂಡ ಇದೇ ರೀತಿ ಅಲ್ಲಿನ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಬಳಸದಂತೆ ನಿರ್ಬಂಧಿಸಿತ್ತು. ಟರ್ಕಿ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಅಲ್ಲಿನ ಸರ್ಕಾರ ಮೊದಲು Instagram ಅನ್ನು ನಿಷೇಧಿಸಿತ್ತು.

ಇದೀಗ ಬಾಂಗ್ಲಾದೇಶ ಸರ್ಕಾರ ಕೂಡ ಅದೇ ರೀತಿಯ ಕ್ರಮಕೈಗೊಂಡಿದ್ದು ಮೆಟಾ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಿದೆ. ಪ್ರತಿಭಟನೆ ಹಿನ್ನಲೆಯಲ್ಲಿ ಈಗಾಗಸೇ ಬಾಂಗ್ಲಾದೇಶದಾದ್ಯಂತ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಜುಲೈ 28 ರವರೆಗೆ ಮೊಬೈಲ್ ನೆಟ್‌ವರ್ಕ್‌ಗಳು ಆಫ್‌ಲೈನ್‌ನಲ್ಲಿದ್ದವು. ಇದೀಗ ಒಂದೊಂದೇ ಪ್ರದೇಶದಲ್ಲಿ ಬಾಂಗ್ಲಾದೇಶ ಸರ್ಕಾರ ಜುಲೈ 23ರಿಂದ ಕ್ರಮೇಣ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಭಾಗಶಃ ಮರುಸ್ಥಾಪಿಸಿತ್ತಿದೆ.

Social Media Apps Banned in This Country
ಬಾಂಗ್ಲಾದೇಶ ಹಿಂಸಾಚಾರ: 151 ಮಂದಿ ಸಾವು; ಉದ್ಯೋಗ ಕೋಟಾ ರದ್ದುಪಡಿಸಿದ ಸುಪ್ರೀಂ ಕೋರ್ಟ್; ಪ್ರತಿಭಟನೆ ಕೈಬಿಡುವಂತೆ ಸೂಚನೆ

ಆಗಸ್ಟ್ 1 ರಂದು ದೇಶದ ಇಂಟರ್ನೆಟ್ ವೇಗವು ಸಾಮಾನ್ಯ ಮಟ್ಟಕ್ಕೆ ಮರಳಿದೆ. ಆದಾಗ್ಯೂ, ಲಕ್ಷಾಂತರ ಮೊಬೈಲ್ ನೆಟ್‌ವರ್ಕ್ ಬಳಕೆದಾರರು ಫೇಸ್‌ಬುಕ್ ನಿರ್ಬಂಧದಿಂದಾಗಿ, ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ಗಳ (ವಿಪಿಎನ್‌ಗಳು) ಬಳಕೆ ವ್ಯಾಪಕವಾಗುತ್ತಿದೆ ಎಂದು ಹೇಳಲಾಗಿದೆ.

ಮತ್ತೆ ಹಿಂಸಾಚಾರ ಭುಗಿಲೇಳಬಾರದು ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com