ಇಸ್ಲಾಮಾಬಾದ್: ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಐಎಸ್‌ಐ ಮುಖ್ಯಸ್ಥ, ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಮಿಲಿಟರಿ ಬಂಧಿಸಿದೆ.
ಫೈಜ್ ಹಮೀದ್ ವಿರುದ್ಧದ ದೂರುಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನದ ಸರ್ವೋಚ್ಛ ನ್ಯಾಯಾಲಯದ ಆದೇಶಗಳಿಗನುಗುಣವಾಗಿ ವಿವರವಾದ ತನಿಖೆಯನ್ನು ನ್ಯಾಯಾಲಯ ಕೈಗೊಂಡಿದೆ ಎಂದು ಸೇನೆಯ ಮಾಧ್ಯಮ ವಿಭಾಗ ಹೇಳಿದೆ.
ತನಿಖೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನಾ ಕಾಯ್ದೆಯ ನಿಬಂಧನೆಗಳಡಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗಿದೆ. ಅವರ ವಿರುದ್ಧ ಅಧಿಕಾರ ದುರುಪಯೋಗದ ಆರೋಪಗಳ ತನಿಖೆಗಾಗಿ ಏಪ್ರಿಲ್‌ನಲ್ಲಿ ತನಿಖಾ ಸಮಿತಿಯನ್ನು ಮಿಲಿಟರಿ ರಚಿಸಿತ್ತು ಎಂದು ವರದಿಯಾಗಿದೆ.
ಹಮೀದ್ ಅವರು 2019 ರಿಂದ 2021 ರವರೆಗೆ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥರಾಗಿದ್ದಾಗ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲ್ಪಟ್ಟಿದ್ದರು.
Advertisement