Arshad Nadeem
ಪಾಕ್ ಅಥ್ಲೀಟ್ ಅರ್ಷದ್ ನದೀಮ್

Olympics 2024: ಚಿನ್ನ ಗೆದ್ದಿದ್ದ ಪಾಕಿಸ್ತಾನ ಅಥ್ಲೀಟ್ Arshad Nadeem ಸುಮಾರು 3 ಕೋಟಿ ರೂ ತೆರಿಗೆ ಕಟ್ಟಬೇಕೇ?

ಪಾಕಿಸ್ತಾನ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ನಿಯಮಗಳು ಹೇಳುವ ಪ್ರಕಾರ, ಆಟಗಾರರರು ಪಡೆದ ಬಹುಮಾನದ ಹಣಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸಬೇಕಾಗುತ್ತದೆ.
Published on

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಜಾವೆಲಿನ್‌ ಥ್ರೋ (Javelin Throw) ಸ್ಪರ್ಧೆಯಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಸಾಧನೆ ಮಾಡಿರುವ ಪಾಕಿಸ್ತಾನದ ಅರ್ಷದ್​ ನದೀಮ್ (Arshad Nadeem)​ಗೆ ಸುಮಾರು 3 ರಿಂದ 6 ಕೋಟಿ ರೂ. ತೆರಿಗೆ ಪಾವತಿಸುವಂತೆ ಸೂಚಿಸಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ 2024ರ (Paris Olympics 2024) ಜಾವೆಲಿನ್‌ ಥ್ರೋ (Javelin Throw) ಸ್ಪರ್ಧೆಯಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಸಾಧನೆ ಮಾಡಿರುವ ಪಾಕಿಸ್ತಾನದ ಅರ್ಷದ್​ ನದೀಮ್​ (Arshad Nadeem)ಗೆ ಸುಮಾರು 3 ರಿಂದ 6 ಕೋಟಿ ರೂ. ತೆರಿಗೆ ಪಾವತಿಸಬೇಕಾಗುತ್ತದೆ ಎನ್ನಲಾಗಿದೆ.

Arshad Nadeem
Olympics 2024: "Rivalry ಇದೆ ಆದರೆ..."; ಭಾರತದ Neeraj Chopra ಕುರಿತು ಪಾಕಿಸ್ತಾನದ Arshad Nadeem ಹೆಮ್ಮೆಯ ಮಾತು!

ಪಾಕಿಸ್ತಾನ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ನಿಯಮಗಳು ಹೇಳುವ ಪ್ರಕಾರ, ಆಟಗಾರರರು ಪಡೆದ ಬಹುಮಾನದ ಹಣಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸಬೇಕಾಗುತ್ತದೆ. ಅರ್ಷದ್​ ನದೀಮ್​ ಈವರೆಗೂ 20 ಕೋಟಿ ರೂ. ಬಹುಮಾನ ಮೊತ್ತವನ್ನು ಸ್ವೀಕರಿಸಿದ್ದು, ಈ ಮೊತ್ತಕ್ಕೆ ಅವರು ತೆರಿಗೆಯನ್ನು ಪಾವತಿಸಬೇಕಿದೆ. ಫೈಲರ್‌ಗಳು ಮತ್ತು ನಾನ್‌ಫೈಲರ್‌ಗಳಿಗೆ (ತೆರಿಗೆ ಪಾವತಿಸುವವರು ಮತ್ತು ಪಾವತಿಸದವರು) ತೆರಿಗೆ ದರ ವಿಭಿನ್ನವಾಗಿದೆ.

ಫೈಲರ್‌ಗಳು ಒಟ್ಟು ಮೊತ್ತದ ಶೇಕಡಾ 15 ರಷ್ಟು ಪಾವತಿಸಬೇಕಾಗುತ್ತದೆ, ಆದರೆ ಫೈಲ್ ಮಾಡದವರು ಸ್ವೀಕರಿಸಿರುವ ಮೊತ್ತದ ಶೇಕಡಾ 30 ರಷ್ಟು ಪಾವತಿಸಬೇಕಾಗುತ್ತದೆ. ಅರ್ಷದ್ ತೆರಿಗೆ ಸಲ್ಲಿಸುವವರಾಗಿದ್ದರೆ, ಅವರು ಬಹುಮಾನದ ಮೊತ್ತದಲ್ಲಿ 3 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ಇಲ್ಲವಾದಲ್ಲಿ 6 ಕೋಟಿ ರೂ. ಮೊತ್ತ ಪಾವತಿಸಬೇಕಾಗುತ್ತದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಬಹುಮಾನದ ಮೇಲೆ ತೆರಿಗೆ

ಚಿನ್ನ ಗೆದ್ದ ನದೀಮ್​ಗೆ ಪಾಕಿಸ್ತಾನ ಪ್ರಾಂತ್ಯದ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ 10 ಕೋಟಿ ರೂ., ಸಿಂಧ್ ಸರ್ಕಾರ ಐದು ಕೋಟಿ ರೂ., ವಿಶ್ವ ಅಥ್ಲೀಟ್ ಫೆಡರೇಶನ್ ಒಂದು ಕೋಟಿ 40 ಲಕ್ಷ ಬಹುಮಾನ ಘೋಷಿಸಿದ್ದು, ಸಿಂಧ್ ಗವರ್ನರ್ ಕಮ್ರಾನ್ ತೆಸ್ಸೋರಿ, ಕ್ರಿಕೆಟಿಗ ಅಹ್ಮದ್ ಶೆಹಜಾದ್ ಮತ್ತು ಓರ್ಷ ಗಾಯಕ 30 ಲಕ್ಷಗಳನ್ನು ನೀಡಿದ್ದಾರೆ.

ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಿಯಾನ್‌ ಚಾನುವಿನಲ್ಲಿನ ಬಡ ಪಂಜಾಬಿ ಕುಟುಂಬದಲ್ಲಿ ಜನಿಸಿದ ಅರ್ಷದ್‌ ನದೀಮ್‌, ಇಂದು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಂದೆ ಮುಹಮ್ಮದ್‌ ಅಶ್ರಫ್‌ ಗಾರೆ ಮೇಸ್ತ್ರಿ ಆಗಿದ್ದ ಕಾರಣ, ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಅರ್ಷದ್‌ ನದೀಮ್‌ ಕೂಡ ತಂದೆಯ ಜತೆ ಗಾರೆ ಕೆಲಸವನ್ನು ಮಾಡಿದ್ದರು. ಇದರೆ ಜತೆಗೆ ಕ್ರೀಡೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com