ನಗ್ನ ಚಿತ್ರ, ವಿಡಿಯೋ ಚಿತ್ರೀಕರಣ: ಅಮೇರಿಕಾದಲ್ಲಿ ಭಾರತೀಯ ಮೂಲದ ವೈದ್ಯ ಬಂಧನ

ಏಜಾಜ್‌ನ ಅಪರಾಧಗಳ ಪ್ರಮಾಣವು ಪ್ರಸ್ತುತ ತಿಳಿದಿಲ್ಲ, ಆದರೆ ಸಂಪೂರ್ಣ ತನಿಖೆಗೆ ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಶೆರಿಫ್ ಮೈಕ್ ಬೌಚರ್ಡ್ ಹೇಳಿದ್ದಾರೆ.
Indian origin doctor in USA
ಭಾರತೀಯ ಮೂಲದ ವೈದ್ಯ online desk
Updated on

ನವದೆಹಲಿ: ಸೆಕ್ಸ್ ಅಪರಾಧದ ಆರೋಪದಲ್ಲಿ ಅಮೇರಿಕಾದಲ್ಲಿ ಭಾರತೀಯ ಮೂಲದ 40 ವರ್ಷದ ವೈದ್ಯನೋರ್ವನನ್ನು ಬಂಧಿಸಲಾಗಿದೆ.

ಹಲವು ವರ್ಷಗಳಿಂದ ಮಹಿಳೆಯರು ಮತ್ತು ಮಕ್ಕಳ ನಗ್ನ ಚಿತ್ರಗಳು, ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದ ಔಮೈರ್ ಏಜಾಜ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆಸ್ಪತ್ರೆ ಕೊಠಡಿಗಳು, ಬಾತ್ ರೂಮ್, ಬಟ್ಟೆ ಬದಲಾಯಿಸುವ ಪ್ರದೇಶಗಳಲ್ಲಿ, ಕೊನೆಗೆ ಆತನ ಮನೆಯಲ್ಲೇ ಗೌಪ್ಯ ಕ್ಯಾಮರಾಗಳನ್ನು ಇರಿಸಿದ್ದ ಔಮೈರ್ ಏಜಾಜ್ ನನ್ನು ಆ.08 ರಂದು ಬಂಧಿಸಲಾಗಿತ್ತು.

ನಗ್ನ ಚಿತ್ರಗಳನ್ನು ಚಿತ್ರೀಕರಿಸಿದ್ದ ವಿಡಿಯೋಗಳೊಂದಿಗೆ ಆತನ ಪತ್ನಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರ ಪರಿಣಾಮ ಔಮೈರ್ ಏಜಾಜ್ ನ ವಿಕೃತಿ ಬಹಿರಂಗವಾಗಿದೆ. ಆತನ ಬಂಧನಕ್ಕೂ ಮುನ್ನ ಆತನಿಗೆ ಯಾವುದೇ ಕ್ರಿಮಿನಲ್ ಇತಿಹಾಸ ಇರಲಿಲ್ಲ. ಆತ ಪ್ರಜ್ಞಾಹೀನ ಅಥವಾ ನಿದ್ರಿಸುತ್ತಿರುವ ಹಲವಾರು ಮಹಿಳೆಯರ ನಗ್ನ ಚಿತ್ರಗಳನ್ನು ಚಿತ್ರೀಕರಿಸಿದ್ದಾನೆ ಎಂದು ಓಕ್ಲ್ಯಾಂಡ್ ಕೌಂಟಿ ಶೆರಿಫ್ ಮಂಗಳವಾರ ಹೇಳಿದ್ದಾರೆ.

Indian origin doctor in USA
ಯುವಕ, ಯುವತಿಯರಿಗೆ ಲೈಂಗಿಕ ವಾಂಛೆ ನಿಯಂತ್ರಣಕ್ಕೆ ಸಲಹೆ: ಕೋಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ!

ಏಜಾಜ್‌ನ ಅಪರಾಧಗಳ ಪ್ರಮಾಣವು ಪ್ರಸ್ತುತ ತಿಳಿದಿಲ್ಲ, ಆದರೆ ಸಂಪೂರ್ಣ ತನಿಖೆಗೆ ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಶೆರಿಫ್ ಮೈಕ್ ಬೌಚರ್ಡ್ ಹೇಳಿದ್ದಾರೆ. ಯುಎಸ್ ರಾಜ್ಯದ ಮಿಚಿಗನ್‌ನ ಓಕ್‌ಲ್ಯಾಂಡ್ ಕೌಂಟಿಯಲ್ಲಿರುವ ರೋಚೆಸ್ಟರ್ ಹಿಲ್ಸ್‌ನಲ್ಲಿರುವ ಅವರ ಮನೆಯಲ್ಲಿ ಪತ್ತೆಯಾದ ಸಾವಿರಾರು ವೀಡಿಯೊಗಳನ್ನು ತನಿಖಾಧಿಕಾರಿಗಳು ಪರಿಶೀಲಿಸಿರುವುದರಿಂದ ಇನ್ನೂ ಅನೇಕ ಬಲಿಪಶುಗಳು ಇರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com