ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಿದ ಬಾಂಗ್ಲಾದೇಶ

ಹಸೀನಾ ಅವರ ಪಾಸ್‌ಪೋರ್ಟ್, ಹಾಗೆಯೇ ಮಾಜಿ ಸಚಿವರು ಮತ್ತು ಮಾಜಿ ಸಂಸದರು ಇನ್ನು ಮುಂದೆ ಅವರ ಹುದ್ದೆಯಲ್ಲಿಲ್ಲದವರ ಪಾಸ್‌ಪೋರ್ಟ್ ರದ್ದುಗೊಳಿಸಲಾಗಿದೆ.
Sheikh Hasina
ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾonline desk
Updated on

ಢಾಕಾ: ಈ ತಿಂಗಳ ಆರಂಭದಲ್ಲಿ ವಿದ್ಯಾರ್ಥಿ ನೇತೃತ್ವದ ದಂಗೆಯಿಂದಾಗಿ ದೇಶದಿಂದ ಪಲಾಯನ ಮಾಡಿದ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಮಧ್ಯಂತರ ಸರ್ಕಾರ ಗುರುವಾರ ರದ್ದುಗೊಳಿಸಿದೆ.

ಹಸೀನಾ ಅವರ ಪಾಸ್‌ಪೋರ್ಟ್, ಹಾಗೆಯೇ ಮಾಜಿ ಸಚಿವರು ಮತ್ತು ಮಾಜಿ ಸಂಸದರು ಇನ್ನು ಮುಂದೆ ಅವರ ಹುದ್ದೆಯಲ್ಲಿಲ್ಲದವರ ಪಾಸ್‌ಪೋರ್ಟ್ ಅನ್ನು "ಹಿಂಪಡೆಯಬೇಕಾಗಿದೆ" ಎಂದು ಆಂತರಿಕ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

"ಮಾಜಿ ಪ್ರಧಾನಿ, ಅವರ ಸಲಹೆಗಾರರು, ಮಾಜಿ ಕ್ಯಾಬಿನೆಟ್ ಮತ್ತು ವಿಸರ್ಜನೆಗೊಂಡ ರಾಷ್ಟ್ರೀಯ ಅಸೆಂಬ್ಲಿಯ ಎಲ್ಲಾ ಸದಸ್ಯರು ಅವರು ಹೊಂದಿದ್ದ ಸ್ಥಾನಗಳ ಆಧಾರದ ಮೇಲೆ ನೀಡಲಾಗಿದ್ದ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಹಿಂಪಡೆಯಬೇಕು" ಎಂದು ಸಚಿವಾಲಯ ಪ್ರಕಟಣೆ ತಿಳಿಸಿದೆ.

Sheikh Hasina
ಬಾಂಗ್ಲಾದೇಶ: ಪಲಾಯನ ನಂತರ ಶೇಖ್ ಹಸೀನಾ ಮೊದಲ ಹೇಳಿಕೆ; ಮಾಜಿ ಪ್ರಧಾನಿ ಹೇಳಿದ್ದೇನು?

ಶೇಖ್​ ಹಸೀನಾ ಅವರು ಆಗಸ್ಟ್​ 5 ರಿಂದ ಭಾರತದಲ್ಲಿ ನೆಲೆಸಿದ್ದು, ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅವರ ಸುರಕ್ಷತೆಗೆ ಬೆದರಿಕೆಗಳ ಮಧ್ಯೆ ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ.

ಶೇಖ್ ಹಸೀನಾ ವಿರುದ್ಧ ಇಲ್ಲಿಯವರೆಗೆ 44 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪಾಸ್ ಪೋರ್ಟ್ ರದ್ದುಪಡಿಸಲು ಕಾರಣ ನೀಡಲಾಗಿದೆ. ಇದರೊಂದಿಗೆ ಇನ್ನೂ ಕೆಲವು ಪ್ರಕರಣಗಳು ದಾಖಲಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com