ಬಾಂಗ್ಲಾದೇಶ: ಪಲಾಯನ ನಂತರ ಶೇಖ್ ಹಸೀನಾ ಮೊದಲ ಹೇಳಿಕೆ; ಮಾಜಿ ಪ್ರಧಾನಿ ಹೇಳಿದ್ದೇನು?

ಶೇಖ್ ಹಸೀನಾ ಅವರು ಇತ್ತೀಚಿನ ಹಿಂಸಾಚಾರ ಮತ್ತು ಅಶಾಂತಿಗೆ ಬಲಿಯಾದವರಿಗೆ ಸಂತಾಪ ಸೂಚಿಸಿದರು.
ಶೇಖ್ ಹಸೀನಾ
ಶೇಖ್ ಹಸೀನಾTNIE
Updated on

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನ ನಂತರ ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ. ಬಾಂಗ್ಲಾ ದಂಗೆ ತಮ್ಮ ತಂದೆ ಶೇಖ್ ಮುಜಿಬುರ್ ರೆಹಮಾನ್ ಮತ್ತು ಲಕ್ಷಾಂತರ ಹುತಾತ್ಮರಿಗೆ 'ಘೋರ ಅವಮಾನ' ಎಂದು ಕರೆದಿದ್ದಾರೆ.

ಶೇಖ್ ಹಸೀನಾ ಅವರು 1975 ಆಗಸ್ಟ್ 15ರ ದುರಂತ ಘಟನೆಗಳನ್ನು ನೆನಪಿಸಿಕೊಂಡರು. ತಮ್ಮ ತಂದೆ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಸೇರಿ ಅನೇಕ ಕುಟುಂಬ ಸದಸ್ಯರು ಮತ್ತು ಸಹೋದರ ಮತ್ತು ಚಿಕ್ಕಪ್ಪನಂತಹ ಸಹವರ್ತಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬಂಗಬಂಧು ಅವರಿಗೆ ಆಳವಾದ ಗೌರವವನ್ನು ವ್ಯಕ್ತಪಡಿಸಿದ್ದು ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಶೇಖ್ ಹಸೀನಾ ಅವರು ಇತ್ತೀಚಿನ ಹಿಂಸಾಚಾರ ಮತ್ತು ಅಶಾಂತಿಗೆ ಬಲಿಯಾದವರಿಗೆ ಸಂತಾಪ ಸೂಚಿಸಿದರು. ಬಾಂಗ್ಲಾ ದಂಗೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೊಲೀಸರು ಸೇರಿದಂತೆ ಅನೇಕ ಅಮಾಯಕರ ಜೀವಗಳನ್ನು ಕಳೆದುಕೊಂಡಿತು. ಜುಲೈನಿಂದ ದೇಶದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಗೆ ಒತ್ತು ನೀಡಿದ ಅವರು, ಹಿಂಸಾಚಾರ ಮತ್ತು ರಕ್ತಪಾತದಲ್ಲಿ ತೊಡಗಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಶೇಖ್ ಹಸೀನಾ
ಬಾಂಗ್ಲಾದೇಶ: ಪದಚ್ಯುತ ಪ್ರಧಾನಿ ಶೇಕ್ ಹಸೀನಾ ವಿರುದ್ಧ ಕೊಲೆ ಕೇಸ್ ದಾಖಲು!

ಅಮೆರಿಕದಲ್ಲಿ ನೆಲೆಸಿರುವ ಶೇಖ್ ಹುಸೇನ್ ಮಗ ಸಾಜಿಬ್ ವಾಜೇದ್ ಅವರು ಹಸೀನಾ ಅವರ ಹೇಳಿಕೆಯನ್ನು ಬಂಗಾಳಿ ಭಾಷೆಯಲ್ಲಿ ತಮ್ಮ ಹ್ಯಾಂಡಲ್‌ನಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಸೀನಾ ಹೇಳಿಕೆಯಲ್ಲಿ, ಅವಾಮಿ ಲೀಗ್‌ನ ವಿದ್ಯಾರ್ಥಿಗಳು, ಶಿಕ್ಷಕರು, ಪೊಲೀಸ್ ಸಿಬ್ಬಂದಿ, ಗರ್ಭಿಣಿಯರು, ಪತ್ರಕರ್ತರು, ಸಾಂಸ್ಕೃತಿಕ ಕಾರ್ಯಕರ್ತರು, ಕಾರ್ಮಿಕರು, ಮುಖಂಡರು ಮತ್ತು ಕಾರ್ಯಕರ್ತರ ಸಾವಿಗೆ ನಾನು ದುಃಖವನ್ನು ವ್ಯಕ್ತಪಡಿಸುತ್ತೇನೆ ಎಂದು ಬರೆದಿದ್ದಾರೆ.

1975ರ ಆಗಸ್ಟ್ 15ರಂದು ತನ್ನ ಕುಟುಂಬ ಸದಸ್ಯರ ಕ್ರೂರ ಹತ್ಯೆಯನ್ನು ಉಲ್ಲೇಖಿಸಿದ ಹಸೀನಾ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಿಂದ ಬದುಕುತ್ತಿರುವ ನನ್ನಂತಹ ಜನರ ಬಗ್ಗೆ ನನಗೆ ಸಹಾನುಭೂತಿ ಇದೆ. ನಾನು ಈ ಹತ್ಯೆಗಳು ಮತ್ತು ಭಯೋತ್ಪಾದಕ ಕೃತ್ಯಗಳನ್ನು ಖಂಡಿಸುತ್ತೇನೆ. ನಾನು ಸರಿಯಾದ ಕ್ರಮಕ್ಕೆ ಒತ್ತಾಯಿಸುತ್ತೇನೆ. ತನಿಖೆಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಮತ್ತು ಶಿಕ್ಷಿಸಬೇಕು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com