ಗ್ಯಾಬೊರೊನ್: ವಿಶ್ವದ ಎರಡನೇ ಅತಿ ದೊಡ್ಡ ವಜ್ರ Botswana ವಜ್ರದ ಗಣಿಯಲ್ಲಿ ಪತ್ತೆಯಾಗಿದೆ ಎಂದು ಕೆನಡಾ ಮೂಲದ ಗಣಿಗಾರಿಕೆ ಕಂಪನಿ ಗುರುವಾರ ಘೋಷಿಸಿದೆ.
ಹೌದು.. ಈಶಾನ್ಯ ಬೋಟ್ಸ್ವಾನಾದ ಕ್ಯಾರೋವೆ ಡೈಮಂಡ್ ಗಣಿಯಲ್ಲಿ ಈ ಜಗತ್ತಿನ 2ನೇ ಅತಿದೊಡ್ಡ ವಜ್ರ ಪತ್ತೆಯಾಗಿದ್ದು, ಇದು ಬರೊಬ್ಬರಿ 2492 ಕ್ಯಾರಟ್ ತೂಕ ಹೊಂದಿದೆ ಎಂದು ತಜ್ಞರು ಹೇಳಿದ್ದಾರೆ. ಇದರ ಮಾರುಕಟ್ಟೆ ಬೆಲೆ ಸುಮಾರು 160 ಮಿಲಿಯನ್ ಡಾಲರ್ ಎನ್ನಲಾಗಿದೆ.
ಈ ವಜ್ರವನ್ನು ಕೆನಡಾದ ಲುಕಾರಾ ಡೈಮಂಡ್ ಕಾರ್ಪೊರೇಷನ್ ಬೋಟ್ಸ್ವಾನಾದ ಕರೋವೇ ಗಣಿಯಲ್ಲಿ ಪತ್ತೆ ಮಾಡಿದ್ದು, ಎಕ್ಸ್-ರೇ ಪತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ವಜ್ರವನ್ನು ಕಂಡುಹಿಡಿಯಲಾಗಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಈ ಕೋಲಿನ್ ವಜ್ರವನ್ನು 9 ತುಂಡುಗಳಾಗಿ ಕತ್ತರಿಸಲಾಗಿದ್ದು, ಅವುಗಳಲ್ಲಿ ಕೆಲವು ಬ್ರಿಟಿಷ್ ಕ್ರೌನ್ ಜ್ಯುವೆಲ್ಸ್‌ನಲ್ಲಿ ಇವೆ ಎಂದು ಸಂಸ್ಥೆ ತಿಳಿಸಿದೆ.
ವಿಶ್ವದಲ್ಲಿ ಅತಿ ಹೆಚ್ಚು ವಜ್ರಗಳನ್ನು ಉತ್ಪಾದಿಸುವ ದೇಶಗಳಲ್ಲಿ ಬೋಟ್ಸ್ವಾನಾ ಕೂಡ ಒಂದಾಗಿದ್ದು, ವಿಶ್ವದ ವಜ್ರ ಉತ್ಪಾದನೆಯ 20 ಪ್ರತಿಶತವನ್ನು ಬೋಟ್ಸ್ವಾನ ಹೊಂದಿದ್ದು, ವಜ್ರಗಣಿಕಾರಿ ಅದರ ಮುಖ್ಯ ಆದಾಯದ ಮೂಲವಾಗಿದೆ. GDPಯ 30 ಪ್ರತಿಶತ ಮತ್ತು ಅದರ ರಫ್ತಿನ 80 ಪ್ರತಿಶತವನ್ನು ಈ ವಜ್ರದ ಗಣಿಗಾರಿಕೆ ಹೊಂದಿದೆ.
ದಕ್ಷಿಣ ಆಫ್ರಿಕಾದಲ್ಲಿ ಜಗತ್ತಿನ ಅತೀದೊಡ್ಡ ವಜ್ರ
1905ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ 3,106-ಕ್ಯಾರೆಟ್ ಕ್ಯಾಲಿನಲ್ ವಜ್ರವು ಇದುವರೆಗಿನ ವಿಶ್ವದ ಅತಿದೊಡ್ಡ ವಜ್ರವಾಗಿದೆ. 2019ರಲ್ಲಿ ಅದೇ ಕ್ಯಾರೋವೇ ಗಣಿಯಲ್ಲಿ ಪತ್ತೆಯಾದ 1758 ಕ್ಯಾರಟ್ ಸೆವೆಲೋ ವಜ್ರವು ಇದುವರೆಗೆ ದಾಖಲಾದ ಎರಡನೇ ಅತಿದೊಡ್ಡ ವಜ್ರವಾಗಿತ್ತು. ಈ ಸೆವೆಲೊ ವಜ್ರವನ್ನು ಫ್ರೆಂಚ್ ಫ್ಯಾಶನ್ ಹೌಸ್ ಲೂಯಿ ವಿಟಾನ್ ಖರೀದಿಸಿದ್ದಾರೆ ಎನ್ನಲಾಗಿದೆ.
Advertisement