ಕೀವ್: ರಷ್ಯಾ ಮೇಲೆ ಡ್ರೋಣ್ ದಾಳಿ ನಡೆಸಿದ್ದ ಉಕ್ರೇನ್ ಗೆ ಕ್ಷಿಪಣಿ ದಾಳಿ ಮೂಲಕ ರಷ್ಯಾ ತಿರುಗೇಟು ನೀಡಿದ್ದು, ರಷ್ಯಾದ ದಿಢೀರ್ ಕ್ರಮಕ್ಕೆ ಉಕ್ರೇನ್ ರಾಜಧಾನಿ ಕೀವ್ ಜನತೆ ಬೆಚ್ಚಿ ಬಿದ್ದಿದ್ದಾರೆ.
ಸೋಮವಾರ ಬೆಳಿಗ್ಗೆ ಕೇಂದ್ರ ಕೈವ್‌ನಲ್ಲಿ ರಷ್ಯಾ ಕ್ಷಿಪಣಿಗಳು ಅಬ್ಬರಿಸಿದ್ದು, 11 ಹೆಚ್ಚು ಸ್ಥಳಗಳಲ್ಲಿ ಕ್ಷಿಪಣಿ ದಾಳಿ ನಡೆದಿದೆ. ರಷ್ಯಾ ಸೇನೆಯ 11 TU-95 ಕ್ಷಿಪಣಿಗಳು ಏಕಕಾಲದಲ್ಲಿ ಅಪ್ಪಳಿಸಿದ್ದು, ಈ ವೇಳೆ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ ಎಂದು ಹೇಳಲಾಗಿದೆ.
ಉಕ್ರೇನ್ ನ ವಾಯುದಳವನ್ನು ಗುರಿಯಾಗಿಸಿಕೊಂಡು ರಷ್ಯಾ ಈ ದಾಳಿ ನಡೆಸಿದ್ದು, ಉಕ್ರೇನ್ ನ ವಾಯುವ್ಯ ನಗರವಾದ ಲುಟ್ಸ್ಕ್‌ನಲ್ಲಿ ಸ್ಫೋಟಗಳು ವರದಿಯಾಗಿವೆ. ಸ್ಫೋಟದಿಂದಾಗಿ ಅಪಾರ್ಟ್ಮೆಂಟ್ ಬ್ಲಾಕ್‌ಗೆ ಹಾನಿಯಾಗಿದ್ದು, ಸಂಭವನೀಯ ಸಾವುನೋವುಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement