
ನವದೆಹಲಿ: ಲಾವೋಸ್ ನಲ್ಲಿದ್ದ ಸೈಬರ್ ಸ್ಕ್ಯಾಮ್ ಕೇಂದ್ರಗಳಲ್ಲಿ ಸಿಲುಕಿದ್ದ 47 ಭಾರತೀಯರನ್ನು ರಕ್ಷಿಸಲಾಗಿದೆ. ದೇಶದ ಬೊಕಿಯೊ ಪ್ರಾಂತ್ಯದಿಂದ ರಕ್ಷಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಲಾವೋಸ್ ನಲ್ಲಿನ ನಕಲಿ ಉದ್ಯೋಗ ಆಫರ್ ಗಳ ಬಗ್ಗೆ ಎಚ್ಚರದಿಂದ ಇರುವಂತೆ ಭಾರತೀಯ ಅಧಿಕಾರಿಗಳು ಭಾರತೀಯರಿಗೆ ಸಲಹೆ ನೀಡಿದ್ದಾರೆ.
ಮೋಸ ಹೋಗುವುದನ್ನು ತಪ್ಪಿಸಲು ಸೂಕ್ತ ವೇದಿಕೆಗಳ ಮೂಲಕ ಉದ್ಯೋಗಗಳನ್ನು ಕಂಡುಕೊಳ್ಳುವಂತೆ ಅಧಿಕಾರಿಗಳು ಭಾರತೀಯರಿಗೆ ತಿಳಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿ ಈ ವರೆಗೂ 635 ಭಾರತೀಯರನ್ನು ರಕ್ಷಿಸಿದ್ದು, ಸುರಕ್ಷಿತವಾಗಿ ಸ್ವದೇಶಕ್ಕೆ ಕಳಿಸಿಕೊಟ್ಟಿದೆ. ಇತ್ತೀಚಿನ ಪ್ರಕರಣದಲ್ಲಿ, ಬೊಕಿಯೊ ಪ್ರಾಂತ್ಯದ ಗೋಲ್ಡನ್ ಟ್ರಯಾಂಗಲ್ ಸ್ಪೆಷಲ್ ಎಕನಾಮಿಕ್ ಝೋನ್ (SEZ) ನಲ್ಲಿ ಸೈಬರ್ ಹಗರಣ ಕೇಂದ್ರಗಳಲ್ಲಿ ಸಿಲುಕಿದ್ದ 47 ಭಾರತೀಯರನ್ನು ರಾಯಭಾರ ಕಚೇರಿ ರಕ್ಷಿಸಿದೆ ಎಂದು ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ.
ಈ ಪೈಕಿ 29 ಮಂದಿಯನ್ನು ಲಾವೋಸ್ ಅಧಿಕಾರಿಗಳು ಗೋಲ್ಡನ್ ಟ್ರಯಾಂಗಲ್ ಎಸ್‌ಇಝಡ್‌ನಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ನಂತರ ರಾಯಭಾರ ಕಚೇರಿಗೆ ಹಸ್ತಾಂತರಿಸಿದ್ದು, ಇತರ 18 ಮಂದಿ ಸಹಾಯ ಕೋರಿ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
Advertisement