
ಸಿರಿಯಾದ ಮಾಜಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್‌ಗಾಗಿ ಹುಡುಕಾಟ ನಡೆಯುತ್ತಿದೆ. ಬಂಡುಕೋರ ಗುಂಪಿನವರು ಅಸ್ಸಾದ್ ಬಗ್ಗೆ ಮಾಹಿತಿ ಹೊಂದಿರುವ ಜನರನ್ನು ವಿಚಾರಣೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಸಿರಿಯಾದ ರಾಜಧಾನಿ ಡಮಾಸ್ಕಸ್‌ನಿಂದ ಬಶರ್ ಇದ್ದ ವಿಮಾನ ಟೇಕ್ ಆಫ್ ಆಗಿರುವ ಕೊನೆಯ ದೃಶ್ಯಗಳನ್ನು ವೈರಲ್ ಆಗಿದ್ದರೆ ಮತ್ತೊಂದೆಡೆ ಬಶರ್ ಅಲ್-ಅಸ್ಸಾದ್ ಹಡಗಿನಲ್ಲಿ ಹೋಗಿದ್ದಾರೆ ಎಂದು ನಂಬಲಾಗಿದೆ.
ವಿಮಾನವು ಡಮಾಸ್ಕಸ್‌ನಿಂದ ಟೇಕಾಫ್ ಆಗಿದ್ದು, ನಂತರ ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡಿದೆ. ಈಗ ಬಂಡುಕೋರರು ಅಸ್ಸಾದ್‌ಗೆ ಏನಾಯಿತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಬಂಡುಕೋರ ಪಡೆಗಳು ವಿಮಾನ ಹೊರಡುವ ಸ್ವಲ್ಪ ಸಮಯದ ಮೊದಲು ವಿಮಾನ ನಿಲ್ದಾಣವನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದರು. ವಿಮಾನವು ಮೊದಲು ಪೂರ್ವ ದಿಕ್ಕಿನಲ್ಲಿ ಹಾರುತ್ತದೆ. ಆದರೆ ನಂತರ ಇದ್ದಕ್ಕಿದ್ದಂತೆ ಉತ್ತರಕ್ಕೆ ತಿರುಗುತ್ತದೆ. ಇನ್ನು ಸ್ವಲ್ಪ ಸಮಯದ ನಂತರ, ವಿಮಾನವು ಹೋಮ್ಸ್ (ಸಿರಿಯಾದ ಪ್ರಮುಖ ನಗರ) ಮೇಲೆ ಹಾರುತ್ತಿದ್ದಾಗ ಅದರ ಸಂಪರ್ಕವು ಕಡಿದುಗೊಳ್ಳುತ್ತದೆ.
ಡಮಾಸ್ಕಸ್ ಈಗ ವಿಮೋಚನೆಗೊಂಡಿದ್ದು ಅಸ್ಸಾದ್ ರಾಜಧಾನಿಯಿಂದ ಪಲಾಯನ ಮಾಡಿದ್ದಾರೆ ಎಂದು ಬಂಡುಕೋರರು ಘೋಷಿಸಿದ್ದಾರೆ. ಅಂದಿನಿಂದ, ಅಸ್ಸಾದ್ ಯಾವುದೇ ಸಾರ್ವಜನಿಕ ಹೇಳಿಕೆ ಅಥವಾ ಉಪಸ್ಥಿತಿ ಇಲ್ಲ. ಬಂಡುಕೋರ ಯೋಧರು ಇದೀಗ ಅಸ್ಸಾದ್‌ಗಾಗಿ ಹುಡುಕಾಟ ಆರಂಭಿಸಿದ್ದು, ಅವರು ಸಿರಿಯಾ ತೊರೆದಿರುವ ವಿಮಾನದ ನಿಗೂಢ ಹಾರಾಟದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವರದಿಗಳು ಪ್ರಕಟವಾಗುತ್ತಿದ್ದು, ಅದರಲ್ಲಿ ಅಸ್ಸಾದ್ ಅವರ ವಿಮಾನವು ಪತನಗೊಂಡಿದೆ ಎಂದು ಹೇಳಲಾಗುತ್ತಿದೆ.
ಆ ವಿಮಾನವು ಇದ್ದಕ್ಕಿದ್ದಂತೆ 3,650 ಮೀಟರ್‌ನಿಂದ 1,070 ಮೀಟರ್ ಎತ್ತರದಿಂದ ಕೆಳಗಿಳಿದಿದೆ. ಲೆಬನಾನ್‌ನ ಏರ್‌ಫೀಲ್ಡ್ ಬಳಿ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು. 3ಡಿ ಫ್ಲೈಟ್ ರಾಡಾರ್ ಡೇಟಾವನ್ನು ಉಲ್ಲೇಖಿಸಿ ಮತ್ತೊಬ್ಬ ಬಳಕೆದಾರರು ಅಸ್ಸಾದ್ ಅವರ ವಿಮಾನ ಅಪಘಾತಕ್ಕೀಡಾಗಿದೆ ಎಂದು ಹೇಳಿದ್ದಾರೆ.
ಸಿರಿಯಾ ಸಂಘರ್ಷದಲ್ಲಿ ಅನೇಕ ಬಂಡುಕೋರ ಗುಂಪುಗಳೊಂದಿಗೆ ಮಾತುಕತೆ ನಡೆಸಿದ ನಂತರ, ಅಧ್ಯಕ್ಷ ಅಸ್ಸಾದ್ ತನ್ನ ಸ್ಥಾನದಿಂದ ಕೆಳಗಿಳಿಯಲು ಮತ್ತು ದೇಶವನ್ನು ತೊರೆಯಲು ನಿರ್ಧರಿಸಿದರು. ಶಾಂತಿಯುತ ಅಧಿಕಾರದ ವರ್ಗಾವಣೆ ಮಾಡಲಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ.
ಇನ್ನು ಅಸ್ಸಾದ್‌ಗೆ ಸುರಕ್ಷಿತ ಸ್ವರ್ಗವೆಂದು ಪರಿಗಣಿಸಲಾದ ರಷ್ಯಾದ ಲಟಾಕಿಯಾ ವಾಯುನೆಲೆಯಲ್ಲಿ ವಿಮಾನವು ಇಳಿದಿದೆ ಎಂದು ಕೆಲವರು ನಂಬುತ್ತಾರೆ. ರಷ್ಯಾದ ಪಡೆಗಳಿಂದ ನಿಯಂತ್ರಿಸಲ್ಪಟ್ಟಿರುವ ಈ ನೆಲೆಯು ಬಹಳ ಹಿಂದಿನಿಂದಲೂ ಆಡಳಿತಕ್ಕೆ ಆಯಕಟ್ಟಿನ ಭದ್ರಕೋಟೆಯಾಗಿದೆ. ಬಂಡುಕೋರರ ನಿಯಂತ್ರಣದ ಹೊರಗಿನ ಕೆಲವು ಪ್ರದೇಶಗಳಲ್ಲಿ ಇದು ಒಂದಾಗಿದೆ.
Advertisement