ಸ್ಯಾನ್ ಫ್ರಾನ್ಸಿಸ್ಕೋ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಶೋಧಕ ಭಾರತೀಯ ಮೂಲದ ಸುಚಿರ್​ ಬಾಲಾಜಿ ಶವವಾಗಿ ಪತ್ತೆ

ಓಪನ್‌ ಎಐ ವಿರುದ್ಧ ಮಾಡಿರುವ ಆರೋಪಗಳಿಂದ ಗಮನ ಸೆಳೆದಿದ್ದ ಸುಚಿರ್‌ ಬಾಲಾಜಿ ಅವರ ನಿಧನಕ್ಕೆ ಹಲವಾರು ಟೆಕ್‌ ಗಣ್ಯರು ಸಂತಾಪ ಸೂಚಿಸಿದ್ದಾರೆ.
Suchir balaji
ಸುಚಿರ್ ಬಾಲಾಜಿ
Updated on

ಸ್ಯಾನ್ ಫ್ರಾನ್ಸಿಸ್ಕೋ: ಕೃತಕ ಬುದ್ಧಿಮತ್ತೆ ಸಂಸ್ಥೆಯಾದ ಓಪನ್‌ ಎಐ ಕಾರ್ಯಚಟುವಟಿಕೆಗಳು ಕಾನೂನನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿದ್ದ, ಸಂಸ್ಥೆಯ ಮಾಜಿ ಉದ್ಯೋಗಿ ಭಾರತೀಯ ಮೂಲದ ಸುಚಿರ್ ಬಾಲಾಜಿ ಅವರ ಮೃತದೇಹವು ಸ್ಯಾನ್‌ ಫ್ರಾನ್ಸಿಸ್ಕೋದ ಅವರ ಅಪಾರ್ಟ್‌ಮೆಂಟ್‌ ನಲ್ಲಿ ಪತ್ತೆಯಾಗಿದೆ.

26 ವರ್ಷದ ಸುಚಿರ್‌ ಬಾಲಾಜಿ ಅವರು ನವೆಂಬರ್ 26 ರಂದು ಮೃತಪಟ್ಟಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಓಪನ್‌ ಎಐ ವಿರುದ್ಧ ಮಾಡಿರುವ ಆರೋಪಗಳಿಂದ ಗಮನ ಸೆಳೆದಿದ್ದ ಸುಚಿರ್‌ ಬಾಲಾಜಿ ಅವರ ನಿಧನಕ್ಕೆ ಹಲವಾರು ಟೆಕ್‌ ಗಣ್ಯರು ಸಂತಾಪ ಸೂಚಿಸಿದ್ದಾರೆ. ಬಾಲಾಜಿ ಅವರ ಸಾವಿನ ಸುದ್ದಿಗೆ ಉದ್ಯಮಿ ಎಲಾನ್‌ ಮಸ್ಕ್‌ ಪ್ರತಿಕ್ರಿಯಿಸಿದ್ದು, ಓಪನ್‌ ಎಐ ವಿರುದ್ಧ ಮಸ್ಕ್‌ ಕೂಡಾ ಆರೋಪಗಳನ್ನು ಮಾಡಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧಕರಾಗಿದ್ದ ಸುಚಿರ್​ ಬಾಲಾಜಿ ಓಪನ್ ಎಐ ಬಗ್ಗೆ ಜಗತ್ತನ್ನು ಎಚ್ಚರಿಸಿದ್ದರು. ಪ್ರಾಥಮಿಕ ವರದಿಯಲ್ಲಿ ಬಾಲಾಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳ ಮಹಜರು ನಡೆಸಿರುವ ಸ್ಯಾನ್‌ ಫ್ರಾನ್ಸಿಸ್ಕೊ ಪೊಲೀಸರು ಬಾಲಾಜಿ ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದು, ಅಪರಾಧ ಕೃತ್ಯ ನಡೆದಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ನವೆಂಬರ್ 26 ರಂದು ಬಾಲಾಜಿ ಅವರ ದೇಹವು ಅವರ ಬುಕಾನನ್ ಸ್ಟ್ರೀಟ್ ಅಪಾರ್ಟ್​​ಮೆಂಟ್​​ನಲ್ಲಿ ಪತ್ತೆಯಾಗಿದೆ ಎಂದು ಸ್ಥಳಿಯ ಮಾಧ್ಯಮಗಳಲ್ಲಿ ವರದಿಯಾಗಿದೆ. ನವೆಂಬರ್ 2020 ರಿಂದ ಆಗಸ್ಟ್ 2024ರವರೆಗೆ OpenAI ಗಾಗಿ ಕೆಲಸ ಮಾಡಿದರು ಎಂದು ಅವರ ಪ್ರೊಫೈಲ್​ನಲ್ಲಿ ತಿಳಿಸಲಾಗಿದೆ.

ಬಾಲಾಜಿ ಅವರು ಎಐಗೆ ಕೊಡುಗೆ ನೀಡಿದ್ದಲ್ಲದೆ, ಈ ಕಂಪನಿಯಲ್ಲಿನ ತಪ್ಪು ಸಂಪ್ರದಾಯಗಳು ಮತ್ತು ಚಟುವಟಿಕೆಗಳ ವಿರುದ್ಧ ಬಲವಾದ ಧ್ವನಿಯನ್ನು ಎತ್ತಿದರು. ವಾಸ್ತವವಾಗಿ, OpenAI ಚಾಟ್ GPT ಅನ್ನು ರಚಿಸಲು ಅನುಮತಿಯಿಲ್ಲದೆ ಹಕ್ಕುಸ್ವಾಮ್ಯದ ವಸ್ತುಗಳನ್ನು ಬಳಸಿದೆ ಎಂದು ಸುಚಿರ್ ಬಾಲಾಜಿ ಹೇಳಿದರು. ಇದು ಅನೇಕ ವ್ಯಾಪಾರಗಳ ಮೇಲೆ ನೇರ ಪರಿಣಾಮ ಬೀರುತ್ತದೆ. OpenAI ವಿರುದ್ಧ ನಡೆಯುತ್ತಿರುವ ಕಾನೂನು ಪ್ರಕರಣಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಂಬಲಾಗಿತ್ತು. ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ, ಬಾಲಾಜಿ ಡೇಟಾ ಸಂಗ್ರಹಣೆಗೆ OpenAI ನ ವಿಧಾನವನ್ನು ಹಾನಿಕಾರಕ ಎಂದು ವಿವರಿಸಿದ್ದಾರೆ. ಅಕ್ಟೋಬರ್‌ನಲ್ಲಿ ಸುಚಿರ್ ಬಾಲಾಜಿ ಓಪನ್‌ಎಐ ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದರು. ನಾನು ಹೇಳುವುದನ್ನು ನೀವು ನಂಬಿದರೆ, ನೀವು ಸುಮ್ಮನೆ ಕಂಪನಿಯನ್ನು ತೊರೆಯಬೇಕು ಎಂದು ಹೇಳಿದ್ದರು. ಚಾಟ್‌ಜಿಪಿಟಿಯಂತಹ ತಂತ್ರಜ್ಞಾನಗಳು ಇಂಟರ್‌ನೆಟ್‌ಗೆ ಹಾನಿ ಮಾಡುತ್ತಿವೆ ಎಂದು ತಿಳಿಸಿದ್ದರು. ಅವರು ಒಂದೂವರೆ ವರ್ಷಗಳ ಕಾಲ ಚಾಟ್‌ಜಿಪಿಟಿಯಲ್ಲಿ ಕೆಲಸ ಮಾಡಿದ್ದರು.

Suchir balaji
ಡೊನಾಲ್ಡ್ ಟ್ರಂಪ್- ಎಲೊನ್ ಮಸ್ಕ್ ಲೈವ್ ಚಾಟ್ ವೇಳೆ ತಾಂತ್ರಿಕ ದೋಷ: ಹತ್ಯೆ ಯತ್ನ, ಗಡೀಪಾರು ಬಗ್ಗೆ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com