ಜಾರ್ಜಿಯಾದಲ್ಲಿ ಭೀಕರ ಘಟನೆ: ರೆಸ್ಟೋರೆಂಟ್ ನಲ್ಲಿ 12 ಭಾರತೀಯರ ಶವ ಪತ್ತೆ!

ಪೊಲೀಸರು ಜಾರ್ಜಿಯಾದ ಕ್ರಿಮಿನಲ್ ಕೋಡ್‌ನ ಆರ್ಟಿಕಲ್ 116ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದು ಇದು ನಿರ್ಲಕ್ಷ್ಯದಿಂದ ಕೊಲೆ ಎಂದು ಉಲ್ಲೇಖಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಜಾರ್ಜಿಯಾ: ಜಾರ್ಜಿಯಾದ ಗುಡೌರಿ ಪರ್ವತದ ರೆಸಾರ್ಟ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ 12 ಭಾರತೀಯ ಪ್ರಜೆಗಳು ಶವವಾಗಿ ಪತ್ತೆಯಾಗಿದ್ದಾರೆ. ಕಾರ್ಬನ್ ಮಾನಾಕ್ಸೈಡ್ ವಿಷಾನಿಲದಿಂದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ದೇಶದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಗಾಯಗಳು ಅಥವಾ ಹಿಂಸಾಚಾರದ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಸ್ಥಳೀಯ ಮಾಧ್ಯಮಗಳು, ಪೊಲೀಸರನ್ನು ಉಲ್ಲೇಖಿಸಿ, ಮೃತ ಎಲ್ಲರೂ ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.

ಮೃತ 12 ಮಂದಿ ಭಾರತೀಯ ನಾಗರಿಕರು ಎಂದು ಟಿಬಿಲಿಸಿಯಲ್ಲಿರುವ ಭಾರತೀಯ ಹೈಕಮಿಷನರ್ ಹೇಳಿದ್ದಾರೆ. ಆದಾಗ್ಯೂ, ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯದ ಹೇಳಿಕೆಯು 12 ವಿದೇಶಿಯರು ಮೃತಪಟ್ಟಿದ್ದಾರೆ ಎಂದು ಹೇಳಿದೆ. ಮೃತರ ಶವಗಳು ರೆಸ್ಟೋರೆಂಟ್‌ನ ಎರಡನೇ ಮಹಡಿಯಲ್ಲಿರುವ ಮಲಗುವ ಕೋಣೆಗಳಲ್ಲಿ ಪತ್ತೆಯಾಗಿವೆ ಎಂದು ಅದು ಹೇಳಿದೆ.

ಜಾರ್ಜಿಯಾದ ಗುಡೌರಿಯಲ್ಲಿ 12 ಭಾರತೀಯ ಪ್ರಜೆಗಳ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಭಾರತೀಯ ಹೈಕಮಿಷನರ್ ಹೇಳಿಕೆಯಲ್ಲಿ ತಿಳಿಸಿದೆ. ಅಗಲಿದ ಕುಟುಂಬಗಳಿಗೆ ಆಳವಾದ ಸಂತಾಪ. ಪ್ರಾಣ ಕಳೆದುಕೊಂಡ ಭಾರತೀಯ ಪ್ರಜೆಗಳ ಬಗ್ಗೆ ಮಾಹಿತಿ ಪಡೆಯಲು ಹೈಕಮಿಷನರ್ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು ಎಂದು ಹೇಳಿದೆ.

ಸಂಗ್ರಹ ಚಿತ್ರ
ಸ್ಯಾನ್ ಫ್ರಾನ್ಸಿಸ್ಕೋ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಶೋಧಕ ಭಾರತೀಯ ಮೂಲದ ಸುಚಿರ್​ ಬಾಲಾಜಿ ಶವವಾಗಿ ಪತ್ತೆ

ಪೊಲೀಸರು ಜಾರ್ಜಿಯಾದ ಕ್ರಿಮಿನಲ್ ಕೋಡ್‌ನ ಆರ್ಟಿಕಲ್ 116ರ ಅಡಿಯಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದು ಇದು ನಿರ್ಲಕ್ಷ್ಯದಿಂದ ಕೊಲೆ ಎಂದು ಉಲ್ಲೇಖಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಮಲಗುವ ಕೋಣೆ ಬಳಿ ಮುಚ್ಚಿದ ಜಾಗದಲ್ಲಿ ವಿದ್ಯುತ್ ಜನರೇಟರ್ ಅನ್ನು ಇರಿಸಲಾಗಿತ್ತು. ಶುಕ್ರವಾರ ರಾತ್ರಿ ವಿದ್ಯುತ್ ಸರಬರಾಜು ಸ್ಥಗಿತಗೊಂಡ ನಂತರ ಅದನ್ನು ಆನ್ ಮಾಡಲಾಗಿದೆ. 'ಸಾವಿಗೆ ನಿಖರವಾದ ಕಾರಣ'ವನ್ನು ನಿರ್ಧರಿಸಲು ಫೋರೆನ್ಸಿಕ್ ವೈದ್ಯಕೀಯ ಪರೀಕ್ಷೆಯನ್ನು ಸಹ ನೇಮಿಸಲಾಗಿದೆ. ಫೋರೆನ್ಸಿಕ್-ಕ್ರಿಮಿನಾಲಜಿಸ್ಟ್‌ಗಳು ದೃಶ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ಸಂದರ್ಶನಗಳೊಂದಿಗೆ ತನಿಖೆಯನ್ನು 'ಪೂರ್ವಭಾವಿಯಾಗಿ' ಅನುಸರಿಸಲಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com