$1 ಮಿಲಿಯನ್‌ ಹಣ ಗಳಿಕೆ: 'ವಯಸ್ಕರ' ಕಂಟೆಂಟ್ ಕ್ರಿಯೇಟರ್ ಆಗಲು PhD ತೊರೆದ YouTuber Zara Dar

ಜರಾ ದಾರ್ ಎಂಬ ಮಹಿಳಾ ಯೂಟ್ಯೂಬರ್ 'ವಯಸ್ಕರ' ಕಂಟೆಂಟ್ ಕ್ರಿಯೇಟರ್ ಆಗಲು ತಮ್ಮ PhD ಪದವಿಯನ್ನೇ ತೊರೆದು ಸುದ್ದಿಗೆ ಗ್ರಾಸವಾಗಿದ್ದಾರೆ.
YouTuber Zara Dar
ಯೂಟ್ಯೂಬರ್ ಜರಾ ದಾರ್
Updated on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುವ ಜನತೆ ಸಾಮಾಜಿಕ ಜಾಲತಾಣಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಇಲ್ಲೋರ್ವ ಯೂಟ್ಯೂಬರ್ 'ವಯಸ್ಕರ' ಕಂಟೆಂಟ್ ಕ್ರಿಯೇಟರ್ ಆಗಲು PhD ಪದವಿಯನ್ನೇ ತೊರೆದಿದ್ದಾರೆ.

ಹೌದು.. ಜರಾ ದಾರ್ ಎಂಬ ಮಹಿಳಾ ಯೂಟ್ಯೂಬರ್ 'ವಯಸ್ಕರ' ಕಂಟೆಂಟ್ ಕ್ರಿಯೇಟರ್ ಆಗಲು ತಮ್ಮ PhD ಪದವಿಯನ್ನೇ ತೊರೆದು ಸುದ್ದಿಗೆ ಗ್ರಾಸವಾಗಿದ್ದಾರೆ. ಮಾಜಿ ವಕೀಲೆ ಕೂಡ ಆಗಿರುವ ಜರಾದಾರ್ ಯೂಟ್ಯೂಬ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಸಬ್ ಸ್ಕ್ರೈಬರ್ಸ್ ಹೊಂದಿದ್ದಾರೆ.

YouTuber Zara Dar
Watch | Allu Arjun ಹೇಳೋದು ಸುಳ್ಳಾ?; ಹೈದರಾಬಾದ್ ಪೊಲೀಸರಿಂದ CCTV ವಿಡಿಯೋ ಬಿಡುಗಡೆ

ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಜರಾದಾರ್ ಯಂತ್ರ ಕಲಿಕೆ (Machine Learning) ಮತ್ತು ನರಮಂಡಲ ಜಾಲಗಳ ಕುರಿತು ಟ್ಯುಟೋರಿಯಲ್‌ಗಳ ವಿಡಿಯೋ ಮಾಡುತ್ತಿದ್ದರು. ಬಳಿಕ ಜರಾದಾರ್ ಜನಪ್ರಿಯತೆ ಮತ್ತು ಆಕೆಯ ಸೌಂದರ್ಯಕ್ಕೆ ಅಭಿಮಾನಿಗಳು ಹೆಚ್ಚಾದರು.

ಆಕೆ ತಮ್ಮ ಯೂಡ್ಯೂಬ್ ವಿಡಿಯೋಗಳಿಂದಲೇ ಬರೊಬ್ಬರಿ 1 ಮಿಲಿಯನ್ ಡಾಲರ್ ಹಣ ಗಳಿಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ಜರಾದಾರ್ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.

ಇದೀಗ ಕಂಟೆಂಟ್ ಕ್ರಿಯೇಷನ್ ಅನ್ನೇ ವೃತ್ತಿಯನ್ನಾಗಿಸಿಕೊಳ್ಳಲು ಮುಂದಾಗಿರುವ ಜರಾದಾರ್ ತಮ್ಮ ಪಿಎಚ್ ಡಿ ಪದವಿಯನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದಾರೆ. ಈ ಕುರಿತು ವಿಡಿಯೋ ಕೂಡ ಮಾಡಿರುವ ಜರಾದಾರ್, "ಪಿಎಚ್‌ಡಿ ಡ್ರಾಪ್ಔಟ್ ಟು ಓನ್ಲಿಫ್ಯಾನ್ಸ್ ಮಾಡೆಲ್" ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೊದಲ್ಲಿ ತಮ್ಮ ನಿರ್ಧಾರವನ್ನು ವಿವರಿಸಿದ್ದಾರೆ.

ಈ ನಿರ್ಧಾರ ನನಗೆ ಕಷ್ಟಕರ ಆಯ್ಕೆಯಾದರೂ ಇದರಿಂದ ನನಗೆ ದುಃಖವಿಲ್ಲ. ವೃತ್ತಿಜೀವನದ ಬದಲಾವಣೆ ಮತ್ತು ಅವರ ಭವಿಷ್ಯದ ಮೇಲಿನ ಜೂಜಾಟ ಎಂದು ಕರೆದಿದ್ದಾರೆ.

ತಮ್ಮ ನಿರ್ಧಾರದ ಕುರಿತು ಮಾತನಾಡಿದ ಜರಾದಾರ್, "ನಾನು ಅಸೂಯೆಪಡುತ್ತೇನೆಂದು ಭಾವಿಸಿದ ಜೀವನಶೈಲಿಗಳು ಬೇರೊಬ್ಬರ ದೃಷ್ಟಿಕೋನಕ್ಕೆ ಸಂಬಂಧಿಸಿದ್ದಾಗಿವೆ. ಅವರು ತಮ್ಮ ಜೀವನವನ್ನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಾ ಮತ್ತು ಅವರು ಅಗತ್ಯವಾಗಿ ಆನಂದಿಸದ ಕೆಲಸಗಳನ್ನು ಮಾಡುತ್ತಾ ಕಳೆಯುತ್ತಾರೆ. ಈ ಜನರಿಗೆ ಅವರು ಅರ್ಹವಾದ ಮನ್ನಣೆಯನ್ನು ಎಂದಿಗೂ ಪಡೆಯುವುದಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

"ಅವರ ಕೆಲಸವು ಸಂಪತ್ತು ಮತ್ತು ಖ್ಯಾತಿಯನ್ನು ಗಳಿಸಬಹುದು.. ಆದರೆ ಅವರು ಯಾವಾಗಲೂ ದುರ್ಬಲರಾಗಿರುತ್ತಾರೆ. ಅವರು ನಿರಂತರವಾಗಿ ಕೆಲಸದಿಂದ ವಜಾಗೊಳಿಸುವಿಕೆ ಮತ್ತು ತಮ್ಮ ಸಂಬಳದ ಸುತ್ತ ತಮ್ಮ ಜೀವನವನ್ನು ಯೋಜಿಸುವ ಬಗ್ಗೆ ಚಿಂತಿಸುತ್ತಾರೆ. ಬಿಲ್‌ಗಳನ್ನು ಪಾವತಿಸಲು ಬಜೆಟ್ ಮಾಡುವುದು ಮತ್ತು ವಾಸಿಸಲು ಸ್ಥಳವನ್ನು ಬಾಡಿಗೆಗೆ ಪಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com