Turkey: ಸ್ಫೋಟಕ ವಸ್ತುಗಳ ಘಟಕದಲ್ಲಿ ಭಾರೀ ಸ್ಫೋಟ; 12 ಮಂದಿ ಸಾವು

ಸ್ಫೋಟದಲ್ಲಿ 12 ಉದ್ಯೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಗವರ್ನರ್ ಇಸ್ಮಾಯಿಲ್ ಉಸ್ತಾವೊಗ್ಲು ಅವರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಇಸ್ತಾಂಬುಲ್: ವಾಯುವ್ಯ ಟರ್ಕಿಯಲ್ಲಿ ಮಂಗಳವಾರ ಸ್ಫೋಟಕ ವಸ್ತುಗಳ ಘಟಕದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 12 ಜನ ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ಬಲಿಕೇಸಿರ್ ಪ್ರಾಂತ್ಯದ ಕರೇಸಿ ಜಿಲ್ಲೆಯ ಸ್ಫೋಟಕ ವಸ್ತುಗಳ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಉದ್ಯೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಗವರ್ನರ್ ಇಸ್ಮಾಯಿಲ್ ಉಸ್ತಾವೊಗ್ಲು ಅವರು ಹೇಳಿದ್ದಾರೆ.

ಕಾರ್ಖಾನೆಯೊಳಗೆ ಯಾವುದೇ ಸಿಬ್ಬಂದಿ ಉಳಿದಿಲ್ಲ ಮತ್ತು ಬೆಂಕಿಯನ್ನು ನಂದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ: ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಗೆ ಜಾಮೀನು ಮಂಜೂರು!

ಸ್ಥಾವರದ ಒಂದು ವಿಭಾಗದಲ್ಲಿ ಬೆಳಗ್ಗೆ 8:25 ಕ್ಕೆ(0525 GMT) ಸ್ಫೋಟ ಸಂಭವಿಸಿದೆ. ವಸತಿ ಪ್ರದೇಶಗಳಿಂದ ದೂರದಲ್ಲಿರುವ ಈ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಆಂತರಿಕ ಸಚಿವ ಅಲಿ ಯರ್ಲಿಕಾಯಾ ಅವರು ಹೇಳಿದ್ದಾರೆ.

ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com