
ವಾಷಿಂಗ್ಟನ್: ದಕ್ಷಿಣ ಕೊರಿಯಾ ಮತ್ತು ಕಝಾಕಿಸ್ತಾನ ವಿಮಾನ ದುರಂತಗಳು ನಡೆದು ಇನ್ನೂ ಒಂದು ವಾರ ಕಳೆದಿಲ್ಲ ಆಗಾಲೇ ಅಮೆರಿಕದಲ್ಲಿ ಸಂಭಾವ್ಯ ಮತ್ತೊಂದು ವಿಮಾನ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಹೌದು.. ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಭೀಕರ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಡೆಲ್ಟಾ ಏರ್‌ಲೈನ್ಸ್ ಸೇರಿದ ವಿಮಾನವು ಗೊನ್ಜಾಗಾ ವಿಶ್ವವಿದ್ಯಾಲಯದ ಬ್ಯಾಸ್ಕೆಟ್‌ಬಾಲ್ ತಂಡವನ್ನು ಹೊತ್ತೊಯ್ಯುತ್ತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಆದರೆ ಪೈಲಟ್ ಗಳು ಸಮಯ ಪ್ರಜ್ಞೆ ಮೆರೆದು ತುರ್ತು ಬ್ರೇಕ್ ಅಳವಡಿಸಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿಸಿದ್ದಾರೆ.
ಸ್ಥಳೀಯ ಸಮಯ ಸಂಜೆ 4:30 ರ ಸುಮಾರಿಗೆ, ಗೊನ್ಜಾಗಾದ ಚಾರ್ಟರ್ಡ್ ಕೀ ಲೈಮ್ ಏರ್ ಫ್ಲೈಟ್ 563 ರನ್‌ವೇಯಲ್ಲಿ ಸಾಗುತ್ತಿದ್ದಾಗಲೇ ಅಟ್ಲಾಂಟಾಗೆ ಹೊರಟಿದ್ದ ಏರ್‌ಬಸ್ A321 ವಿಮಾನ ಡೆಲ್ಟಾ ಫ್ಲೈಟ್ 471, ಟೇಕ್‌ಆಫ್ ಕಡೆಗೆ ವೇಗವಾಗಿ ಚಲಿಸಿದೆ.
ಇದರಿಂದ ವಿಮಾನಗಳಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕ ಮತ್ತು ಜೀವ ಭಯಕ್ಕೆ ತುತ್ತಾದರು. ಎರಡೂ ವಿಮಾನಗಳು ಸಮೀಪಿಸುತ್ತಿರುವಾಗಲೇ ಪ್ರಯಾಣಿಕರು.. Stop.. Stop.. Stop ಎಂದು ಕೂಗಲಾರಂಭಿಸಿದ್ದು, ಪೈಲಟ್ ಕೂಡಲೇ ಫುಟ್ಬಾಲ್ ಆಟಗಾರರನ್ನು ಹೊತ್ತಿದ್ದ ಪುಟ್ಟ ಚಾರ್ಟೆಡ್ ವಿಮಾನ ತುರ್ತು ಬ್ರೇಕಿಂಗ್ ಅಳವಡಿಸಿದೆ.
ಈ ವೇಳೆ ವಿಮಾನದ ವೇಗ ನಿಯಂತ್ರಣಕ್ಕೆ ಬಂದಿದ್ದು. ಮತ್ತೊಂದು ಬದಿಯಲ್ಲಿ ಸಾಗಿದ್ದ ಡೆಲ್ಟಾ ಪ್ರಯಾಣಿಕ ವಿಮಾನ ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಟೇಕ್ ಆಫ್ ಆಗಿದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋ ವೈರಲ್
UCLA ವಿರುದ್ಧದ ತಂಡದ ಪಂದ್ಯಕ್ಕೆ ಮುಂಚಿತವಾಗಿ ವಾಷಿಂಗ್ಟನ್‌ನಿಂದ ಇಳಿದ ವಿಮಾನವು ಅಟ್ಲಾಂಟಾಗೆ ಹೊರಟಿದ್ದ ಏರ್‌ಬಸ್ A321 ವಿಮಾನ ಡೆಲ್ಟಾ ಫ್ಲೈಟ್ 471, ಟೇಕ್‌ಆಫ್ ಕಡೆಗೆ ವೇಗವಾಗಿ ಚಲಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಡೆಲ್ಟಾ ವಿಮಾನವು ಆಕಾಶಕ್ಕೆ ಹಾರುವ ಕೆಲವೇ ಸೆಕೆಂಡುಗಳ ಮೊದಲು ಖಾಸಗಿ ಜೆಟ್ ಹಠಾತ್ ನಿಲುಗಡೆಗೆ ಬಂದಿದೆ. ಈ ಆಘಾತಕಾರಿ ದೃಶ್ಯಗಳನ್ನು ನಿಲ್ದಾಣದಲ್ಲಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಘಟನೆಯ ಬಗ್ಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತನಿಖೆ ಆರಂಭಿಸಿದ್ದು, ವಾಯು ಸಂಚಾರ ನಿಯಂತ್ರಕರು ಗೊನ್ಜಾಗಾ ವಿಮಾನವನ್ನು ರನ್‌ವೇಯಿಂದ ಸ್ವಲ್ಪ ದೂರದಲ್ಲಿ ನಿಲ್ಲುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಖಾಸಗಿ ಜೆಟ್ ಮುಂದಕ್ಕೆ ಸಾಗುತ್ತಿದ್ದಂತೆ, ಡೆಲ್ಟಾ ವಿಮಾನ ಸಮೀಪಿಸುತ್ತಿದ್ದಂತೆ ನಿಯಂತ್ರಕರು ಚಾರ್ಟೆಡ್ ವಿಮಾನದ ಪೈಲಟ್‌ಗೆ ವಿಮಾನ ನಿಲ್ಲಿಸಲು ಆದೇಶಿಸಿದರು ಎನ್ನಲಾಗಿದೆ.
ಅಂತೆಯೇ ಆತಂಕದ ಕ್ಷಣಗಳ ಹೊರತಾಗಿಯೂ ಚಾರ್ಟರ್ಡ್ ಎಂಬ್ರೇರ್ ಇಆರ್‌ಜೆ -135 ವಿಮಾನವು ಯಾವುದೇ ವಿಳಂಬವಿಲ್ಲದ ಡೆಲ್ಟಾದ ವಿಮಾನವು ವೇಳಾಪಟ್ಟಿಯ ಪ್ರಕಾರ ತನ್ನ ಪ್ರಯಾಣ ಮುಂದುವರೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಭಾನುವಾರ ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ್ದ ಭೀಕರ ವಿಮಾನ ದುರಂತದಲ್ಲಿ 179 ಜನರು ಸಾವಿಗೀಡಾಗಿದ್ದರು. ಜೆಜು ಏರ್ ವಿಮಾನ ನಿಲ್ದಾಣದ ತಡೆಗೋಡೆಗೆ ಢಿಕ್ಕಿಯಾಗಿ ಸ್ಫೋಟಗೊಂಡಿತ್ತು. ಇದಕ್ಕೂ ಮೊದಲು ಕಜಕಿಸ್ತಾನ್‌ನಲ್ಲಿ ವಿಮಾನ ಬಿದ್ದು 38 ಜನರು ಸಾವಿಗೀಡಾಗಿದ್ದರು.
Advertisement