ಇತಿಹಾಸದ ಮೊದಲ ಮಹಿಳಾ ಮುಖ್ಯಮಂತ್ರಿ; ಪಾಕ್‌ನ ಪಂಜಾಬ್‌ ಪ್ರಾಂತ್ಯಕ್ಕೆ ಮರಿಯಂ ನವಾಜ್ ಸಿಎಂ

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ (Punjab Province) ಮೊಟ್ಟ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ (PML-N) ಪಕ್ಷದ ಮರಿಯಂ ನವಾಜ್‌ (Maryam Nawaz) ಅವರು ಆಯ್ಕೆಯಾಗಿದ್ದಾರೆ.
ಮರಿಯಂ ನವಾಜ್
ಮರಿಯಂ ನವಾಜ್

ಇಸ್ಲಾಮಾಬಾದ್:‌ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ (Punjab Province) ಮೊಟ್ಟ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪಾಕಿಸ್ತಾನ ಮುಸ್ಲಿಂ ಲೀಗ್‌-ನವಾಜ್‌ (PML-N) ಪಕ್ಷದ ಮರಿಯಂ ನವಾಜ್‌ (Maryam Nawaz) ಅವರು ಆಯ್ಕೆಯಾಗಿದ್ದಾರೆ.

ಇದರೊಂದಿಗೆ ಪಾಕಿಸ್ತಾನದ ಪ್ರಾಂತ್ಯವೊಂದಕ್ಕೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರಿಯಂ ನವಾಜ್ ಪಾತ್ರರಾಗಿದ್ದಾರೆ. ಇದುವರೆಗೆ ಪಾಕಿಸ್ತಾನದ ಇತಿಹಾಸದಲ್ಲೇ ಯಾವುದೇ ಪ್ರಾಂತ್ಯಕ್ಕೆ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಿರಲಿಲ್ಲ. ಈಗ ಮರಿಯಂ ನವಾಜ್‌ ಅವರು ಇತಿಹಾಸ ಸೃಷ್ಟಿಸಿದ್ದಾರೆ.

ಮರಿಯಂ ನವಾಜ್
ಪಾಕಿಸ್ತಾನ ಚುನಾವಣೆ: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಇಮ್ರಾನ್ ಖಾನ್ ಪಕ್ಷ ಕರೆ

ಪಿಎಂಎಲ್‌-ಎನ್‌ ಉಪಾಧ್ಯೆಕ್ಷೆಯೂ ಕೂಡ ಆಗಿರುವ 50 ವರ್ಷದ ಮರಿಯಂ ನವಾಜ್‌ ಅವರು ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com