ಸಲೇಹ್ ಅಲ್-ಅರುರಿ
ವಿದೇಶ
ಇಸ್ರೇಲಿ ದಾಳಿಯಲ್ಲಿ ಹಮಾಸ್ ಉಪನಾಯಕನ ಹತ್ಯೆ: ಭದ್ರತಾ ಅಧಿಕಾರಿಗಳು
ಇಸ್ರೇಲ್-ಹಮಾಸ್ ಯುದ್ಧ ಮುಂದುವರೆದಿದ್ದು, ಇಸ್ರೇಲಿ ದಾಳಿಯಲ್ಲಿ ಹಮಾಸ್ ಚಳವಳಿಯ ಉಪ ನಾಯಕ ಸಲೇಹ್ ಅಲ್-ಅರುರಿ ಸಾವನ್ನಪ್ಪಿದ್ದಾರೆ ಎಂದು ಇಬ್ಬರು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಬೈರುತ್: ಇಸ್ರೇಲ್-ಹಮಾಸ್ ಯುದ್ಧ ಮುಂದುವರೆದಿದ್ದು, ಇಸ್ರೇಲಿ ದಾಳಿಯಲ್ಲಿ ಹಮಾಸ್ ಚಳವಳಿಯ ಉಪ ನಾಯಕ ಸಲೇಹ್ ಅಲ್-ಅರುರಿ ಸಾವನ್ನಪ್ಪಿದ್ದಾರೆ ಎಂದು ಇಬ್ಬರು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಮಿತ್ರ ಹೆಜ್ಬುಲ್ಲಾದ ದಕ್ಷಿಣ ಬೈರುತ್ ಭದ್ರಕೋಟೆಯಲ್ಲಿ ಮಂಗಳವಾರ ನಡೆದ ದಾಳಿಯಲ್ಲಿ ಅರುರಿ ಸಾವನ್ನಪ್ಪಿರುವುದಾಗಿ ಹಮಾಸ್ ದೃಢಪಡಿಸಿದೆ. ಇಸ್ರೇಲಿ ಡ್ರೋನ್ ದಾಳಿಯಲ್ಲಿ ಒಟ್ಟು ಆರು ಜನರನ್ನು ಬಲಿತೆಗೆದುಕೊಂಡಿದೆ ಎಂದು ಲೆಬನಾನಿನ ರಾಜ್ಯ ಮಾಧ್ಯಮ ಹೇಳಿದೆ.
ಈ ದಾಳಿಯು ಗಾಜಾದಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವಿನ ಸುಮಾರು ಮೂರು ತಿಂಗಳ ಯುದ್ಧದ ತೀವ್ರತೆಯನ್ನು ತೋರಿಸಿದೆ. ಹಮಾಸ್‌ನ ಪ್ರಮುಖ ಮಿಲಿಟರಿ ತಂತ್ರಜ್ಞರಲ್ಲಿ ಒಬ್ಬರಾದ ಅರುರಿಯು ಯುದ್ಧದ ಸಮಯದಲ್ಲಿ ಹತ್ಯೆಗೀಡಾದ ಚಳುವಳಿಯ ಮೊದಲ ಹಿರಿಯ ಅಧಿಕಾರಿಯಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ