ಭಾರತದ ಬೆನ್ನಿಗೆ ನಿಂತ ಮಾಲ್ಡೀವ್ಸ್ ವಿಪಕ್ಷ ನಾಯಕ, ಮುಇಜು ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಎಚ್ಚರಿಕೆ 

ಭಾರತ- ಮಾಲ್ಡೀವ್ಸ್ ನ ಸಂಬಂಧಕ್ಕೆ ಅಪಾಯ ಉಂಟು ಮಾಡುತ್ತಿರುವ ಆರೋಪದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಇಜು ಹಾಗೂ ಅವರ ಸರ್ಕಾರದ ಸಚಿವರುಗಳ ರಾಜೀನಾಮೆಗೆ ಅಲ್ಲಿನ ವಿಪಕ್ಷಗಳು ಆಗ್ರಹಿಸಿವೆ. 
ಮಾಲ್ಡೀಸ್ ಅಧ್ಯಕ್ಶ್
ಮಾಲ್ಡೀಸ್ ಅಧ್ಯಕ್ಶ್

ಮಾಲ್ಡೀವ್ಸ್: ಭಾರತ- ಮಾಲ್ಡೀವ್ಸ್ ನ ಸಂಬಂಧಕ್ಕೆ ಅಪಾಯ ಉಂಟು ಮಾಡುತ್ತಿರುವ ಆರೋಪದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಇಜು ಹಾಗೂ ಅವರ ಸರ್ಕಾರದ ಸಚಿವರುಗಳ ರಾಜೀನಾಮೆಗೆ ಅಲ್ಲಿನ ವಿಪಕ್ಷಗಳು ಆಗ್ರಹಿಸಿವೆ. 

ಭಾರತದ ಪ್ರಧಾನಿ ಮೋದಿ ಗೆ ಅವಮಾನ ಮಾಡುವಂತಹ ಹಾಗೂ ಭಾರತೀಯರನ್ನು ಗುರಿಯಾಗಿರಿಸಿಕೊಂಡು ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ನ ನಾಯಕ ಅಜೀಮ್ ಅಲಿ ಮುಇಜು ಹಾಗೂ ಅವರ ಸಚಿವರ ರಾಜೀನಾಮೆಗೆ ಮಾಲ್ಡೀವ್ಸ್ ನ ನಾಯಕ ಅಜಿಮ್ ಅಲಿ ಆಗ್ರಹಿಸಿದ್ದಾರೆ.

ಹೊಸದಾಗಿ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಲು ಅವಿಶ್ವಾಸ ನಿರ್ಣಯ ಮಂಡಿಸುವಂತೆ ಅವರು ವಿರೋಧ ಪಕ್ಷದ ನಾಯಕರಿಗೆ ಇದೇ ವೇಳೆ ಕರೆ ನೀಡಿದ್ದಾರೆ. 

ನಾವು, ಪ್ರಜಾಪ್ರಭುತ್ವವಾದಿಗಳು, ರಾಷ್ಟ್ರದ ವಿದೇಶಾಂಗ ನೀತಿಯ ಸ್ಥಿರತೆಯನ್ನು ಎತ್ತಿಹಿಡಿಯಲು ಮತ್ತು ಯಾವುದೇ ನೆರೆಯ ರಾಷ್ಟ್ರದಿಂದ ಪ್ರತ್ಯೇಕವಾಗಿರುವುದನ್ನು ತಡೆಯಲು ಸಮರ್ಪಿತರಾಗಿದ್ದೇವೆ. ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನು ಅಧಿಕಾರದಿಂದ ತೆಗೆದುಹಾಕಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ನೀವು ಸಿದ್ಧರಿದ್ದೀರಾ? ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಅವಿಶ್ವಾಸ ಮತವನ್ನು ಪ್ರಾರಂಭಿಸಲು ಸಿದ್ಧವಾಗಿದೆಯೇ? ಎಂದು ಅಜೀಂ ಅಲಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಮಾಜಿ ಡೆಪ್ಯೂಟಿ ಸ್ಪೀಕರ್ ಇವಾ ಅಬ್ದುಲ್ಲಾ ಅವರು ಸುದ್ದಿ ಸಂಸ್ಥೆ ಎಎನ್‌ಐ ನೊಂದಿಗೆ ಮಾತನಾಡಿದ್ದು, ಈಗ ಪದಚ್ಯುತಗೊಂಡಿರುವ ಸಚಿವರು ಮಾಡಿದ ಕಾಮೆಂಟ್‌ಗಳು 'ಜನಾಂಗೀಯವಾಗಿದೆ.

“ಮಾಲ್ಡೀವ್ಸ್ ಸರ್ಕಾರ ಭಾರತೀಯ ಜನರಿಗೆ ಔಪಚಾರಿಕವಾಗಿ ಕ್ಷಮೆಯಾಚಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ" ಎಂದು ಅಬ್ದುಲ್ಲಾ ತಿಳಿಸಿದ್ದಾರೆ. 

“ಸಾಮಾಜಿಕ ಮಾಧ್ಯಮದಲ್ಲಿ ಮಾಲ್ಡೀವ್ಸ್ ಸರ್ಕಾರಿ ಅಧಿಕಾರಿಗಳು ಭಾರತದ ವಿರುದ್ಧ ದ್ವೇಷಪೂರಿತ ಭಾಷೆ ಬಳಸುವುದನ್ನು ನಾನು ಖಂಡಿಸುತ್ತೇನೆ. ಭಾರತ ಯಾವಾಗಲೂ ಮಾಲ್ಡೀವ್ಸ್‌ಗೆ ಉತ್ತಮ ಸ್ನೇಹಿತ ಮತ್ತು ನಮ್ಮ ಎರಡು ದೇಶಗಳ ನಡುವಿನ ಹಳೆಯ ಸ್ನೇಹದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಲು ಇಂತಹ ನಿಷ್ಠುರ ಹೇಳಿಕೆಗಳಿಗೆ ನಾವು ಅನುಮತಿಸಬಾರದು ಎಂದು ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com