ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ: ಇರಾನ್

ಪಾಕಿಸ್ತಾನದ ಉಗ್ರ ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿರುವುದಾಗಿ ಇರಾನ್ ಹೇಳಿದೆ. 
ಇರಾನ್
ಇರಾನ್

ನವದೆಹಲಿ: ಪಾಕಿಸ್ತಾನದ ಉಗ್ರ ನೆಲೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿರುವುದಾಗಿ ಇರಾನ್ ಹೇಳಿದೆ. 

ಪಾಕ್ ನಲ್ಲಿರುವ ಜೈಶ್ ಅಲ್ ಅದ್ಲ್ ಎಂಬ ಉಗ್ರ ಸಂಘಟನೆಯನ್ನು ಗುರಿಯಾಗಿರಿಸಿಕೊಂಡಿರುವುದಾಗಿ ಇರಾನ್ ತನ್ನ ಹೇಳಿಕೆಯಲ್ಲಿ ತಿಳಿಸಿರುವುದನ್ನು ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. 

ಪಾಕ್ ಮೇಲಿನ ಇರಾನ್ ನ ಈ ದಾಳಿ ಗಾಜಾ ಪಟ್ಟಿಯಲ್ಲಿ ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಪರಿಣಾಮ ಕದಡಿರುವ ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ಇನ್ನಷ್ಟು ಪ್ರತಿಕೂಲಗೊಳಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪಾಕ್ ಮತ್ತು ಇರಾನ್ ನ ನಡುವಿನ ರಾಜತಾಂತ್ರಿಕ ಸಂಬಂಧ ಪ್ರಸ್ತುತ ಉತ್ತಮವಾಗಿಲ್ಲ. ಉಭಯ ರಾಷ್ಟ್ರಗಳು ಪರಸ್ಪರ ಅಪನಂಬಿಕೆಯ ನಡುವೆಯೇ ರಾಜತಾಂತ್ರಿಕ ಸಂಬಂಧಗಳನ್ನು ಮುಂದುವರೆಸಿವೆ.

ಇರಾನ್ ನ ಸರ್ಕಾರಿ ಸ್ವಾಮ್ಯದ IRNA  ಸುದ್ದಿ ಸಂಸ್ಥೆ ಹಾಗೂ ಟಿವಿ ವಾಹಿನಿಗಳ ವರದಿಯ ಪ್ರಕಾರ, ಪಾಕ್ ನಲ್ಲಿನ ಉಗ್ರ ನೆಲೆಗಳ ಮೇಲಿನ ದಾಳಿಯಲ್ಲಿ ಕ್ಷಿಪಣಿ ಹಾಗೂ ಡ್ರೋನ್ ಗಳನ್ನು ಬಳಕೆ ಮಾಡಲಾಗಿದೆ. ತಕ್ಷಣಕ್ಕೆ ಇರಾನ್ ನ ಹೇಳಿಕೆಗಳ ಬಗ್ಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿಲ್ಲ, ದಾಳಿಯನ್ನು ದೃಢಪಡಿಸಿಲ್ಲ.

ಜೈಶ್ ಅಲ್ ಅದ್ಲ್ ಅಥವಾ ನ್ಯಾಯದ ಸೇನೆ ಎಂಬ ಸಂಘಟನೆ ಸುನ್ನಿ ಉಗ್ರ ಸಂಘಟನೆಯಾಗಿದ್ದು 2012 ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹೆಚ್ಚಾಗಿ ಪಾಕ್ ನ ಗಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಉಗ್ರರ ವಿರುದ್ಧ ಇರಾನ್ ಗಡಿ ಭಾಗಗಳಲ್ಲಿ ಹೋರಾಟ ನಡೆಸಿದೆ. ಆದರೆ ಪಾಕ್ ಮೇಲೆ ಹಿಂದೆಂದೂ ಇರಾನ್ ನಿಂದ ಡ್ರೋಣ್ ಅಥವಾ ಕ್ಷಿಪಣಿಗಳಿಂದ ದಾಳಿ ನಡೆಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com