ರಷ್ಯಾ ಭಾರತವನ್ನು ಮಾತ್ರ ಅವಲಂಬಿಸಬಹುದು ಏಕೆಂದರೆ...: ಪ್ರಧಾನಿ ಮೋದಿ ಬಗ್ಗೆ ಪುಟಿನ್ ಮೆಚ್ಚುಗೆಯ ಮಹಾಪೂರ

ರಷ್ಯಾ ಅಧ್ಯಕ್ಷ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಹಾಡಿ ಹೊಗಳಿದ್ದು, ಇಂದಿನ ದಿನಗಳಲ್ಲಿ ಕಷ್ಟವಾಗಿರುವ ಸ್ವತಂತ್ರ ವಿದೇಶಾಂಗ ನೀತಿಯನ್ನು ಪಾಲಿಸುತ್ತಿರುವ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್- ಪ್ರಧಾನಿ ನರೇಂದ್ರ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್- ಪ್ರಧಾನಿ ನರೇಂದ್ರ ಮೋದಿ
Updated on

ಮಾಸ್ಕೋ: ರಷ್ಯಾ ಅಧ್ಯಕ್ಷ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಹಾಡಿ ಹೊಗಳಿದ್ದು, ಇಂದಿನ ದಿನಗಳಲ್ಲಿ ಕಷ್ಟವಾಗಿರುವ ಸ್ವತಂತ್ರ ವಿದೇಶಾಂಗ ನೀತಿಯನ್ನು ಪಾಲಿಸುತ್ತಿರುವ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
 
ರಷ್ಯಾ ಅಧ್ಯಕ್ಷರ ಹೇಳಿಕೆಯನ್ನು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 'ರಷ್ಯನ್ ವಿದ್ಯಾರ್ಥಿ ದಿನ'ದ ಸಂದರ್ಭದಲ್ಲಿ ಕಲಿನಿನ್‌ಗ್ರಾಡ್ ಪ್ರದೇಶದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪುಟಿನ್,  ಜಗತ್ತಿನಲ್ಲೇ ಭಾರತ ಅತ್ಯುತ್ತಮ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆ ದರವನ್ನು ಹೊಂದಿದೆ, ಅದು ಸಾಧ್ಯವಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ, ಭಾರತ ಈ ಹಂತವನ್ನು ತಲುಪಿರುವುದು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಎಂದು ಪುಟಿನ್ ಹೇಳಿದ್ದಾರೆ. 

ರಷ್ಯಾ ಭಾರತ ಹಾಗೂ ಭಾರತದ ನಾಯತಕ್ವದ ಮೇಲೆ ಮಾತ್ರ ಅಲವಂಬಿತವಾಗಬಹುದು, ಏಕೆಂದರೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ನಾಯಕತ್ವ ತಮ್ಮ ವಿರುದ್ಧ ಯಾವುದೇ ರೀತಿಯ ಸಂಚು ಅಥವಾ ಆಟಗಳನ್ನು ಹೂಡುವುದಿಲ್ಲ ಎಂಬ ನಂಬಿಕೆ ಇದೆ ಎಂದು ರಷ್ಯಾ ಅಧ್ಯಕ್ಷರು ಹೇಳಿದ್ದಾರೆ.

"ಭಾರತವು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದೆ, ಇದು ಇಂದಿನ ಜಗತ್ತಿನಲ್ಲಿ ಸುಲಭವಲ್ಲ. ಆದರೆ, 1.5 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತವು ಹಾಗೆ ಮಾಡುವ ಹಕ್ಕನ್ನು ಹೊಂದಿದೆ.

ಮತ್ತು ಪ್ರಧಾನಿಯವರ ನೇತೃತ್ವದಲ್ಲಿ ಆ ಹಕ್ಕನ್ನು ಭಾರತ ಸಾಕಾರಗೊಳಿಸಿಕೊಳ್ಳುತ್ತಿದೆ. ಇದು ಕೇವಲ ಹೇಳಿಕೆಯಲ್ಲ, ಜಂಟಿ ಕೆಲಸವನ್ನು ಸಂಘಟಿಸುವ ಹಂತದಿಂದ ಇದು ಮುಖ್ಯವಾಗಿದೆ ಏಕೆಂದರೆ ಇದು ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ನಮ್ಮ ಪಾಲುದಾರರ ಕ್ರಮಗಳನ್ನು ಮುನ್ಸೂಚಿಸಲು ನಮಗೆ ಅವಕಾಶವನ್ನು ನೀಡುತ್ತದೆ" ಎಂದು ಅಧ್ಯಕ್ಷ ಪುಟಿನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com