ಇರಾನ್‌ನಲ್ಲಿ ಗುಂಡಿಕ್ಕಿ 9 ಪಾಕಿಸ್ತಾನಿಯರ ಬರ್ಬರ ಹತ್ಯೆ; ಸಮಗ್ರ ತನಿಖೆಗೆ ಪಾಕ್ ಆಗ್ರಹ!

ಪಾಕಿಸ್ತಾನದ ಮೇಲೆ ಇರಾನ್ ನಡೆಸಿದ ವೈಮಾನಿಕ ದಾಳಿಯ 12 ದಿನಗಳ ನಂತರ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಹೆಚ್ಚಾಗಿದೆ. ನಿನ್ನೆ ರಾತ್ರಿ ಪಾಕಿಸ್ತಾನದ ಪಕ್ಕದಲ್ಲಿರುವ ಇರಾನ್‌ನ ಆಗ್ನೇಯ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಒಂಬತ್ತು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪಾಕ್ ಕಾರ್ಮಿಕರ ಹತ್ಯೆ
ಪಾಕ್ ಕಾರ್ಮಿಕರ ಹತ್ಯೆ
Updated on

ಇಸ್ಲಾಮಾಬಾದ್: ಪಾಕಿಸ್ತಾನದ ಮೇಲೆ ಇರಾನ್ ನಡೆಸಿದ ವೈಮಾನಿಕ ದಾಳಿಯ 12 ದಿನಗಳ ನಂತರ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಹೆಚ್ಚಾಗಿದೆ. ನಿನ್ನೆ ರಾತ್ರಿ ಪಾಕಿಸ್ತಾನದ ಪಕ್ಕದಲ್ಲಿರುವ ಇರಾನ್‌ನ ಆಗ್ನೇಯ ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಒಂಬತ್ತು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಇರಾನ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ಮುದಾಸಿರ್ ಟಿಪ್ಪು ಘಟನೆಯನ್ನು ಖಚಿತಪಡಿಸಿದ್ದು ಈ ಪಾಕಿಸ್ತಾನಿಗಳು ಇರಾನ್‌ನ ಆಗ್ನೇಯ ಗಡಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಇರಾನ್ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದು ಸಮಗ್ರ ತನಿಖೆಗೆ ಆಗ್ರಹಿಸಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ. ಇದು ಭಯೋತ್ಪಾದಕರ ಹೇಯ ಕೃತ್ಯ ಎಂದು ಪಾಕಿಸ್ತಾನ ಹೇಳುತ್ತಿದೆ.

ಸರವನ್ ನಗರದ ಮನೆಯೊಂದರಲ್ಲಿ ಇರಾನಿಯನ್ನರಲ್ಲದ 9 ಜನರನ್ನು ಹತ್ಯೆ ಮಾಡಲಾಗಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ಹೇಳಿದೆ. ಯಾವುದೇ ಅಧಿಕೃತ ಮಾಧ್ಯಮವು ತನ್ನ ಸುದ್ದಿಯಲ್ಲಿ ಗುಂಡಿನ ದಾಳಿಯನ್ನು ವರದಿ ಮಾಡಿಲ್ಲ ಮತ್ತು ದಾಳಿಯ ಹೊಣೆಯನ್ನು ಯಾವುದೇ ಗುಂಪು ಇನ್ನೂ ಹೊತ್ತುಕೊಂಡಿಲ್ಲ. ಹಲ್ವಾಶ್, ಬಲೂಚ್ ಜನರ ಪರವಾಗಿ ವಕಾಲತ್ತು ವಹಿಸುವ ಸಂಘಟನೆ, ಬಲಿಪಶುಗಳ ದೇಹಗಳ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ. ಮೂವರು ಗಾಯಗೊಂಡಿದ್ದಾರೆ ಎಂದು ಸಂಘಟನೆ ಹೇಳಿದೆ. ಆತ ಪಾಕಿಸ್ತಾನಿ ಪ್ರಜೆ ಎಂದು ಕೂಡ ವರದಿಯಾಗಿದೆ. ಅವರು ನಾಲ್ಕು ಜನರನ್ನು ಗುರುತಿಸಿದರು. ಮೃತರೆಲ್ಲರು ವಾಹನ ನಿರ್ವಹಣೆ ಅಂಗಡಿಯಲ್ಲಿನ ಉದ್ಯೋಗಿಗಳು ಎಂದು ಹೇಳಿದರು.

ಹತ್ಯೆಯಾದವರೂ ವಿದೇಶಿಗರು ಎಂದು ಇರಾನ್‌ನ ಆಂತರಿಕ ಸಚಿವರು ಹೇಳಿದ್ದಾರೆ. ಇರಾನ್‌ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಅವರು 9 ಪಾಕಿಸ್ತಾನಿಗಳ ಹತ್ಯೆಯಿಂದ ಅತ್ಯಂತ ದುಃಖಿತರಾಗಿದ್ದಾರೆ. ಇದೊಂದು ದೊಡ್ಡ ಆಘಾತ. ರಾಯಭಾರ ಕಚೇರಿ ಕುಟುಂಬದೊಂದಿಗೆ ನಿಂತಿದೆ. ಈ ವಿಷಯದಲ್ಲಿ ಇರಾನ್‌ನಿಂದಲೂ ಸಹಾಯವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ ವಾರ, ಇದೇ ಪ್ರದೇಶದಲ್ಲಿ ಪಾಕಿಸ್ತಾನವು ಪ್ರತಿದಾಳಿ ನಡೆಸಿದ್ದು, ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದು ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಮಂಗಳವಾರ ಪಾಕಿಸ್ತಾನದ ನೆಲದಲ್ಲಿ ಇರಾನ್ ನಡೆಸಿದ ದಾಳಿಯ ನಂತರ ಈ ದಾಳಿಗಳು ನಡೆದಿತ್ತು. ಇದು ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇಬ್ಬರು ಮಕ್ಕಳನ್ನು ಕೊಂದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com